ಎಂಡಿಎಂಎ ಮಾದಕವಸ್ತು ಮಾರಾಟ ಮಾಡಲು ನಿಂತಿದ್ದ ಅಬ್ದುಲ್ ನಝೀರ್ ಪೋಲಿಸರ ಬಲೆಗೆ
ಉಳ್ಳಾಲ ತಾಲೂಕು ಕೈರಂಗಳ ಗ್ರಾಮದ ನವಗ್ರಾಮ ಸೈಟ್ ಕ್ರಾಸ್ ರಸ್ತೆಯ ಬಳಿ ಅಕ್ರಮವಾಗಿ ಮಾದಕವಸ್ತು ಎಂಡಿಎಂಎ ಯನ್ನು ಆಟೋ ರಿಕ್ಷಾದಲ್ಲಿ ಮಾರಾಟ ಮಾಡಲು ನಿಂತಿದ್ದ ಅಬ್ದುಲ್ ನಝೀರ್ ಎಂಬವನನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ನಝೀರ್ ಬಳಿ ಮೂವತ್ತು ಸಾವಿರ ಬೆಲೆಯ ಹತ್ತು ಗ್ರಾಂ ಎಂಡಿಎಂಎ,ಎರಡು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಆಟೋರಿಕ್ಷಾ ವಶಪಡಿಸಿದ್ದು ಒಟ್ಟು ಮೊತ್ತ 1,89,000/- ಆಗಬಹುದು ಎಂದು ಅಂದಾಜಿಸಲಾಗಿದೆ.
ಕೊಣಾಜೆ ಪೋಲಿಸ್ ಠಾಣಾ ಉಪನಿರೀಕ್ಷಕರಾದ ಪುನೀತ್ ಗಾವಂಕರ್ ಮತ್ತು ಸಿಬ್ಬಂದಿಗಳು ರೌಂಡ್ಸ್ ನಲ್ಲಿರುವಾಗ ಬಂಧಿಸಲಾಗಿದೆ.
























