ಒರ್ವ ವ್ಯಕ್ತಿಗೆ ಬೇರೆ ಬೇರೆ ರೀತಿಯ ಅಭಿಮಾನಿಗಳಿರುತ್ತಾರೆ. ಆ ಅಭಿಮಾನವನ್ನು ತೋರ್ಪಡಿಸುವ ರೀತಿಯು ವಿಶೇಷ ವಾಗಿರುತ್ತದೆ. ರಕ್ತದಾನ, ವಸ್ತ್ರದಾನ, ಅನ್ನದಾನ ಇದೆಲ್ಲ ಸಾಮಾನ್ಯವಾಗಿ ನಡೆಯುವಂತದ್ದು ಆದರೆ ಮಂಗಳೂರಿನಲ್ಲಿ ವಿಶೇಷವಾಗಿ ಆ ವ್ಯಕ್ತಿಯ ಅಭಿಮಾನವನ್ನು ತೋರಿಸಿದ್ದಾರೆ ಅದೆನಂದರೇ ಇಲ್ಲಿ ಓದಿ
ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂತಸದಲ್ಲಿ ಮಂಗಳೂರಿನ ಖಾಸಗಿ ಬಸ್‌ವೊಂದರ ನಿರ್ವಾಹಕ, ಚಾಲಕ ಮತ್ತು ಅಭಿಮಾನಿಗಳ ವತಿಯಿಂದ ಸೋಮವಾರ ಪ್ರಯಾಣಿಕರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಿದ್ದಾರೆ.
ಮಂಗಳೂರು ನಗರದ “ಪ್ರಕೃತಿ” ಟ್ರಾವೆಲ್ಸ್ ಎಂಬ ಖಾಸಗಿ ಬಸ್ ಮಂಗಳೂರು – ಕಾವೂರು, ಕಟೀಲು – ಕಿನ್ನಿಗೋಳಿ ಮಾರ್ಗದಲ್ಲಿ ದಿನಾಲೂ ಪ್ರಯಾಣಿಕರ ಉತ್ತಮ ಸೇವೆ ನೀಡುತ್ತಿದ್ದು, ಅದರಲ್ಲಿ ಸಿಬ್ಬಂದಿಗಳಾಗಿ ಅತ್ಯುತ್ತಮ ಸೇವೆ ಮಾಡುತ್ತಿರುವ ಶ್ರೀಯುತ ಪ್ರಸಾದ್ ಕುಲಾಲ್ ಮತ್ತು ಶ್ರೀಯುತ ತಿಲಕ್ ಪ್ರಯಾಣಿಕರಿಗೆ ಅದೇ ರೂಟ್‌ನಲ್ಲಿ ಸಂಪೂರ್ಣವಾಗಿ ಒಂದು ದಿನದ ಉಚಿತ ಸೇವೆಯನ್ನು ನೀಡಿದ್ದಾರೆ.
ಈ ವಿಚಾರದ ಬಗ್ಗೆ ಪ್ರಸಾದ್ ಕುಲಾಲ್ ಅವರನ್ನು ಸಂಪರ್ಕಿಸಿದಾಗ :-
ದೇಶ ಕಂಡ ಸರ್ವಶ್ರೇಷ್ಠ ನಾಯಕ ಮೋದಿ. ನರೇಂದ್ರ ಮೋದಿಯವರ ಮೇಲೆ ನಮಗೆ ಅತಿಹೆಚ್ಚು ಅಭಿಮಾನ. ಆ ಹಿನ್ನೆಲೆಯಲ್ಲಿ ಪ್ರಮಾಣ ವಚನ ಆದಿತ್ಯವಾರ ನಡೆಯಿತು, ಆ ಸಂತೋಷವನ್ನು ನಾವು ಮತ್ತು ಅಭಿಮಾನಿಗಳು ಸೇರಿ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಅನೇಕ ಪ್ರಯಾಣಿಕರಿಗೆ ಅನುಕೂಲವಾಗಿದೆ. ಪ್ರಯಾಣಿಕರು ಖುಷಿ ಪಟ್ಟು ಧನ್ಯವಾದ ಹೇಳಿದ್ದಾರೆ. ನಮಗೂ ತೃಪ್ತಿಯಾಗಿದೆ. ಬಸ್‌ನ ಮಾಲಕರಿಗೆ ಬೇರೆ ದಿನಗಳಲ್ಲಿ ನೀಡುತ್ತಿದ್ದಂತೆಯೇ ಹಣವನ್ನು ನೀಡಿದ್ದೇವೆ. ಮೋದಿಯಿಂದ ದೇಶದ ಚಿತ್ರಣ ಬದಲಾಗಿದೆ ಆ ಕಾರಣ ನಮ್ಮ ಮೋದಿಯ ಮೇಲೆ ಹೆಮ್ಮೆ ಇದೆ ಎಂದು ಪ್ರಸಾದ್ ಕುಲಾಲ್ ಪ್ರತಿಕ್ರಿಯಿಸಿದ್ದಾರೆ.