ಕನ್ನಡದಲ್ಲೊಂದು ಸಂಚಲನ ಮೂಡಿಸಲಿದೆ ಆರಾಟ ಕನ್ನಡ ಸಿನೆಮಾ.
ಕನ್ನಡದ ಸಿನೆಮಾ ಲೋಕದಲ್ಲಿ ಬೇರೆ ಬೇರೆ ಚಲನಚಿತ್ರಗಳು ಬರುತ್ತಿದ್ದು ಇದಕ್ಕೆ ಸ್ಪರ್ಧೆಯಾಗಿ ಕರಾವಳಿ ಭಾಗದ ಪ್ರತಿಭೆಗಳನ್ನೊಳಗೊಂಡ PNR productions ನಿರ್ಮಾಣದಲ್ಲಿ ಪುಷ್ಪರಾಜ್ ರೈ ಮಲಾರಬೀಡು ನಿರ್ದೇಶನದಲ್ಲಿ ಹೊಸ ಕಲಾವಿದರ ತಂಡದೊಂದಿಗೆ ಇದೇ ಜೂನ್ 21 ರಾಜ್ಯದಾದ್ಯಂತ ಆರಾಟ ಕನ್ನಡ ಚಲನಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಕರಾವಳಿ ಭಾಗದಲ್ಲಿ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಹೆಸರಿನಂತೆ ಕರಾವಳಿ ಆರಾಧನೆಯ ಜಾತ್ರೋತ್ಸವದ ಕಡೆಯ ದಿನದ ಉತ್ಸವವೇ ಆರಾಟ. ಈ ಹೆಸರಿನ್ನಿಟ್ಟುಕೊಂಡು ಒಂದು ಕುಟುಂಬದೊಳಗೆ ಜಾಗಕ್ಕಾಗಿ ನಡೆಯುವ ನ್ಯಾಯವನ್ನು ಹೆಸರಿನೊಂದಿಗೆ ಚಿತ್ರವಾಗಿ ಹೊರತಂದಿದ್ದಾರೆ. ಇದು ಕುಟುಂಬ ಸಮೇತರು ನೋಡುವ ಚಿತ್ರ ಇದಾಗಿದ್ದು ಪ್ರಮುಖ ತಾರಾಗಣದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಪ್ರವೀಣ, ತುಳು-ಕನ್ನಡ ರಂಗಭೂಮಿ, ಚಲನಚಿತ್ರದ ಹೆಸರಾಂತ ನಟ ಚೇತನ್ ರೈ ಮಾಣಿ, ವೇಣ್ಯ ರೈ ಮತ್ತಿತರರು ಕಾಣಿಸಿಕೊಂಡಿದ್ದಾರೆ.