ಮುಡಿಪು: ಬೋಳಿಯಾರ್ ಚೂರಿ ಇರಿತ ಆಸ್ಪತ್ರೆಗೆ ಭೇಟಿ ನೀಡಿದ ಹಿಂ ಜಾ ವೇ ಪ್ರಮುಖರು.
ಬೋಳಿಯಾರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತಕ್ಕೊಳಗಾದವರನ್ನು ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು ಆಸ್ಪತ್ರೆಯಲ್ಲಿ ಆರೋಗ್ಯ ವಿಚಾರಿಸಿದರು. ಹಿಂದು ಜಾಗರಣಾ ವೇದಿಕೆಯು ಚೂರಿ ಇರಿತಕ್ಕೆ ಒಳಗಾದ ಕೂಡಲೇ ಜಿಲ್ಲಾ ಪೋಲಿಸ್ ಇಲಾಖೆಯನ್ನು ಎಚ್ಚರಿಸಿತ್ತು ಮಾತ್ರವಲ್ಲದೆ ಹೋರಾಟದ ಕರೆ ನೀಡಿ ಆರೋಪಗಳನ್ನು ಬಂಧಿಸುವಂತೆ ತಿಳಿಸಿತ್ತು.
ಇದೇ ಸಂಧರ್ಭದಲ್ಲಿ ಮುಂದಿನ ಮಂಗಳವಾರ ಜೂನ್ 18 ರಂದು ಹಿಂದು ಜನಜಾಗೃತಿ ಸಮಿತಿ ವತಿಯಿಂದ ಅಸೈಗೋಳಿ ಮೈದಾನದಲ್ಲಿ ಬೃಹತ್ ಜನಜಾಗೃತಿ ಸಭೆ ನಡೆಯಲಿದೆ ಜಾಗೃತ ಹಿಂದೂ ಸಮಾಜ ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರಬೇಕು ಎಂದು ಹಿಂಜಾವೇ ವಿನಂತಿಸಿದೆ. ಈ ಸಂದರ್ಭದಲ್ಲಿ ಪ್ರಾಂತ ಪ್ರಮುಖರಾದ ಕಿಶೋರ್ ಕುಮಾರ್ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಮುಖರಾದ ನರಸಿಂಹ ಮಾಣಿ, ಪ್ರಶಾಂತ್ ಕೆಂಪುಗುಡ್ಡೆ ಸತೀಶ್ ಮುಂಚೂರ್,ಗಣೇಶ್ ಕೆದಿಲ ಮತ್ತಿತರರು ಉಪಸ್ಥಿತರಿದ್ದರು.