ಮಂಗಳೂರು:ಹೆಸರಾಂತ ಉದ್ಯಮಿ ಕೆ ಪ್ರಕಾಶ್ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ
ಉಡುಪಿಯ ಕೊರಂಗ್ರಪಾಡಿ ಎಂಬ ಸಣ್ಣ ಹಳ್ಳಿಯಿಂದ ಸಮಾಜ ಸೇವೆ ಮಾಡಬೇಕು ಎಂಬ ಮಹದಾಶೆಯನ್ನಿಟ್ಟು ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಉದ್ಯಮಿ ಪ್ರಕಾಶ್ ಶೆಟ್ಟಿ, ಪರಿಶ್ರಮದಿಂದ ಸಾಮಾನ್ಯ ಹಂತದಿಂದ ಎತ್ತರಕ್ಕೆ ಏರಿದ ಅಗ್ರಗಣ್ಯ ಸಾಧಕರು. ರಾಜ್ಯದ ಹಾಗೂ ಅಂತರ್ ರಾಜ್ಯದ ಹೆಸರಾಂತ ಉದ್ಯಮಿಗಳಾಗಿ ಹಲವಾರು ಜನರಿಗೆ ಉದ್ಯೋಗದಾತರಾಗಿರುವ ಬೆಂಗಳೂರಿನ ಎಂ ಆರ್ ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾಗಿರುವ ಕೊಡುಗೈ ದಾನಿ ಕೆ ಪ್ರಕಾಶ್ ಶೆಟ್ಟಿ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ನೀಡುವ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದಾರೆ.
ಸಾಮಾಜಿಕ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಪ್ರಕಾಶ್ ಶೆಟ್ಟಿ ಗೊಲ್ಡ್ ಪಿಂಚ್ ಸಿಟಿಯ ಪ್ರವರ್ತಕರಾಗಿದ್ದು ಪ್ರತಿ ವರ್ಷವು ಎಂ ಆರ್ ಜಿ ಆಶಾ ಪ್ರಕಾಶ್ ಶೆಟ್ಟಿ ಸಹಾಯಹಸ್ತ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಆಶಕ್ತರಿಗೆ, ಧೀರ್ಘಕಾಲದ ರೋಗಿಗಳಿಗೆ, ವಿಕಲಚೇತನರಿಗೆ, ವಿಶೇಷ ಚೇತನರಿಗೆ, ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿ 2000 ಕುಟುಂಬಗಳಿಗೆ ಸುಮಾರು 4 ಕೋಟಿಗೂ ಅಧಿಕ ಮೊತ್ತದ ಆರ್ಥಿಕ ನೆರವು ನೀಡುತ್ತಲಿದ್ದರೆ.
ಜಾಗತಿಕ ಬಂಟರ ಸಂಘ ಒಕ್ಕೂಟದ ವಿಶೇಷ ಮಹಾನಿರ್ದೇಶಕರಾಗಿದ್ದು, ಮಂಗಳೂರು ಗೋಲ್ಡ್ ಪಿಂಚ್ ಸಿಟಿಯ ಮಂಗಳೂರು ಕಂಬಳೋತ್ಸವದ ಗೌರವಧ್ಯಕ್ಷರಾಗಿದ್ದು ಜೊತೆಗೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕಂಬಳದ ಗೌರವಧ್ಯಕ್ಷರಾಗಿದ್ದವರು. ಬಂಟರ
ಅದಲ್ಲದೇ ಅದೇಷ್ಟೋ ಆರೋಗ್ಯ ಮೇಳ, ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡವರಾಗಿದ್ದು ಕೊಡುಗೈ ದಾನಿಗಳಾಗಿದ್ದು ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಲಿದೆ.ಇದೆಲ್ಲದೇ ರಾಜ್ಯ ರಾಜ್ಯೋತ್ಸವ ಉದ್ಯಮಕ್ಕೆ ಹಲವಾರು ಪ್ರಶಸ್ತಿ ಪುರಸ್ಕೃತರಾಗಿದ್ದರೆ.