ಮಂಗಳೂರು: ಪಾಕಿಸ್ತಾನದ ಕುನ್ನಿಗಳೇ ಎಂದಿದ್ದಕ್ಕೆ ಪ್ರಚೋದನೆಯಾಗಿದ್ದರೆ ಅಂತಹವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಿ : ಸಿ ಟಿ ರವಿ
ಬೊಳಿಯಾರಿನಲ್ಲಿ ಬಿಜೆಪಿ ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರ ಮೇಲೆ ಮುಸ್ಲಿಮರಿಂದ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಇಂದು ಆಸ್ಪತ್ರೆಗೆ ಬೇಟಿ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ ಸಿಟಿ ರವಿ ಹೊರಗಿನವರ ಹಸ್ತಕ್ಷೇಪ ಬೇಡ, ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ, ಹಾಗಾದರೆ ಅವರೇ ಮುಂದೆ ನಿಂತು ಪಾಕಿಸ್ತಾನದ ಕುನ್ನಿಗಳನ್ನು ಗಡಿಪಾರು ಮಾಡಿಸಲಿ ಎಂದು ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತ್ ಮಾತಾ ಕೀ ಜೈ ಎನ್ನುವುದನ್ನು ಸಹಿಸಲಾಗದು ಎಂದರೆ ಏನರ್ಥ…? ಹಾಗಾದರೇ ನಾವು ಯಾವ ದೇಶದಲ್ಲಿದ್ದೇವ..? ಒಂದೊಮ್ಮೆ ಪಾಕಿಸ್ತಾನದ ಕುನ್ನಿಗಳೇ ಎನ್ನುವುದನ್ನು ತಮಗೇ ಎಂದು ಕೆಲವರು ಅರ್ಥೈಸಿಕೊಂಡಿದ್ದು ಯಾಕೆ, ಅವರೆಲ್ಲ ಭಾರತದಲ್ಲಿರಲು ಯೋಗ್ಯರೇ ಎಂದು ಪ್ರಶ್ನಿಸಿದರು.
ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು 13 ತಿಂಗಳಾಗಿದೆ. ಅಭಿವೃದ್ಧಿ ಎಂಬುದು ಮರಿಚಿಕೆಯಾಗಿದೆ. ಹತ್ಯೆ ಮತ್ತು ಆತ್ಮಹತ್ಯೆಗಳಲ್ಲಿ ದಾಖಲೆ ಮುರಿಯುತ್ತಿದೆ. ಎನ್ಸಿಆರ್ಬಿ ದಾಖಲೆ ಪ್ರಕಾರ ನಾಲ್ಕು ತಿಂಗಳಲ್ಲಿ 500ಕ್ಕೂ ಹೆಚ್ಚು ಹತ್ಯೆ, 700ಕ್ಕೂ ಹೆಚ್ಚು ಆತ್ಮಹತ್ಯೆ ನಡೆದಿದೆ. ಭಯ ಎನ್ನುವುದೇ ಇಲ್ಲ.ಕಾನೂನೂ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಕ್ರಿಮಿನಲ್ಗಳಿಗೆ ಭೀತಿ ಇಲ್ಲ, ಕಮ್ಯುನಲ್ಗಳ ಬಗ್ಗೆ ಸರಕಾರ ಮೃದುಧೋರಣೆ ತಳೆದಿದೆ. ಕಾಂಗ್ರೇಸ್ ಸರಕಾರ ಒಲೈಕೆ ರಾಜಕಾರಣ ಮಾಡುತ್ತಿದೆ ಈ ರೀತಿ ಒಲೈಕೆ ಸರಿಯಲ್ಲ ಎಂದು ಸಿಟಿ ರವಿ ಆರೋಪಿಸಿದರು.