ಉಳ್ಳಾಲ: ಬೊಳಿಯಾರ್ ಚೂರಿ ಇರಿತ ಪ್ರಕರಣ ಜೂನ್ 18 ರಂದು ಬೃಹತ್ ಜನಾಂದೋಲನ ಜನಜಾಗೃತಿ ಸಭೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಹಿಂಜಾವೇ ಕರೆ
ಜೂನ್ 18 ರ ಮಂಗಳವಾರದಂದು ಮಧ್ಯಾಹ್ನ 3.30 ಕ್ಕೆ ಸರಿಯಾಗಿ ಅಸೈಗೋಳಿ ಮೈದಾನದಲ್ಲಿ ಹಿಂದು ಜನಜಾಗೃತಿ ಸಮಿತಿ ಉಳ್ಳಾಲ ತಾಲೂಕು ಇದರ ನೇತೃತ್ವದಲ್ಲಿ ಬೊಳಿಯಾರ್ ಹಿಂದು ಕಾರ್ಯಕರ್ತರಿಗೆ ಚೂರಿ ಇರಿದ ಪ್ರಕರಣವನ್ನು ಖಂಡಿಸಿ ಬೃಹತ್ ಜನಾಂದೋಲನ ಜನಜಾಗೃತಿ ಸಭೆ ನಡೆಯಲಿದೆ. ಹಿಂದು ಸಮಾಜ ಬೃಹತ್ ಸಂಖ್ಯೆಯಲ್ಲಿ ಅಸೈಗೊಳಿಯಲ್ಲಿ ಜಾಗೃತಿಯಾಗುವಂತೆ ಹಿಂ.ಜಾ.ವೇ.ಕರೆ ನೀಡಿದೆ.
























