ಸುಳ್ಯ : ಮತ್ತೆ ಲವ್ ಜಿಹಾದ್ ಸದ್ದು, ಮುಸ್ಲಿಂ ಯುವಕನ ಜೊತೆ ಪರಾರಿಯಾಗುತ್ತಿದ್ದ ಘಟನೆ ಬೆಳಕಿಗೆ ಬಂದಿದ್ದು, ಹಿಂದೂ ಯುವತಿ ಲವ್ ಜಿಹಾದ್ ಬಲೆಗೆ ಬಿದ್ದು ಮಾತಂತರವಾಗಿದ್ದಾಳೆ ಎನ್ನುವ ವಿಚಾರ ತಿಳಿದುಬಂದಿದೆ.
ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಹಿಂದೂ ಯುವತಿಯು ಇಬ್ಬರು ಮುಸ್ಲಿಮ್ ಯುವಕರ ಜೊತೆ ಹೋಗುತ್ತಿದ್ದಾರೆಂಬ ಮಾಹಿತಿಯನ್ನು ಭಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯವರು ನೀಡಿದ ಮಾಹಿತಿ ಮೇರೆಗೆ ಪೋಲೀಸರು ಕಾರನ್ನು ಸುಳ್ಯದಲ್ಲಿ ತಡೆದ ಘಟನೆ ನಡೆದಿದೆ.
ಮುಳ್ಳೇರಿಯಾ ಕಡೆಯಿಂದ ಈ ಕಾರು ಬರುತಿತ್ತೆಂದೂ, ಅದರಲ್ಲಿ ಇಬ್ಬರು ಹುಡುಗರು ಹಾಗೂ ಒಬ್ಬಳು ಹುಡುಗಿ ಇದ್ದಳು. ಕಾರನ್ನು ಸುಳ್ಯದಲ್ಲಿ ನಿಲ್ಲಿಸಿದ ಪೋಲೀಸರು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ಘಟನೆಯ ಸತ್ಯಾಂಶ ಬೆಳಕಿಗೆ ಬಂದಿದೆ.
ಲವ್ ಜಿಹಾದ್ ಬಲೆಗೆ
ಹೊಸಂಗಡಿಯ ಇಶಾ ಎಂಬಾಕೆ ಸಿಲುಕಿದ್ದು, ಹಿಂದೂ ಸಂಘಟನೆಗಳ ದೂರಿನ ಮೇರೆಗೆ ಪೊಲೀಸರು ಜೋಡಿಯನ್ನು ವಶಕ್ಕೆ ಪಡೆಯಲಾಗಿದೆ.
“ನಾನು ಅವನೊಂದಿಗೆ ಮದುವೆ ಆಗಗಿದ್ದೇನೆ. ಮತಾಂತರ ಆ ಗಿದ್ದೇನೆ. ನನ್ನ ಮನೆಗೆ ಬರಲ್ಲ” ಎಂಬಂತೆ ಹುಡುಗಿಯ ಹೇಳಿಕೆ ನೀಡಿದ್ದು, ಆಕೆಯನ್ನು ಸಂಪೂರ್ಣವಾಗಿ ಮತಾಂತರದ ಬಲೆಗೆ ಬಿಳಿಸಿದ್ದು ಆಕೆಯು ಲವ್ ಜಿಹಾದ್ ಗೆ ಬಲಿಯಾಗಿದ್ದಲೇ ಎನ್ನುವುದು ಹಿಂದೂ ಸಂಘಟನೆಗಳು ಆರೋಪ ಮಾಡಿದೆ.
ಭಜರಂಗದಳ ಹಾಗೂ ವಿಶ್ವ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಠಾಣೆ ಎದುರು ಸೇರಿದ್ದರು.ಸದ್ಯ ಅವರು ಮದುವೆಯಾಗಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದ್ದು, ವಿಚಾರಣೆ ನಡೆಸಿ ಅವರನ್ನು ಜೊತೆಗೆ ಕಳುಹಿಸಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.