• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ತುಳುನಾಡಿನ ವಿಶಿಷ್ಟ ಸಂಪ್ರದಾಯ ಆಟಿ ತಿಂಗಳು. ಊರಿನ ಮಾರಿ ಕಳೆಯಲು ಬರುವವನೇ ಆಟಿ ಕಳಂಜ.

ತುಳುನಾಡಿನ ವಿಶಿಷ್ಟ ಸಂಪ್ರದಾಯ ಆಟಿ ತಿಂಗಳು. ಊರಿನ ಮಾರಿ ಕಳೆಯಲು ಬರುವವನೇ ಆಟಿ ಕಳಂಜ.

July 18, 2024
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ 5 ದಿನಗಳ ಕಾಲ ಲಕ್ಷದೀಪೋತ್ಸವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ 5 ದಿನಗಳ ಕಾಲ ಲಕ್ಷದೀಪೋತ್ಸವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು

November 15, 2025
ಹುಟ್ಟುಹಬ್ಬ ಕೇಕ್ ಕಟ್ ಮಾಡುವ ನೆಪದಲ್ಲಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ

ಹುಟ್ಟುಹಬ್ಬ ಕೇಕ್ ಕಟ್ ಮಾಡುವ ನೆಪದಲ್ಲಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ

November 15, 2025
ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ  ನ.14 ರಂದು ಮಕ್ಕಳ ದಿನಾಚರಣೆ

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ನ.14 ರಂದು ಮಕ್ಕಳ ದಿನಾಚರಣೆ

November 15, 2025

ನ.19ಕ್ಕೆ ಅಟಲ್ ವಿರಾಸತ್ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ

November 15, 2025
ದೇಶ ಕಂಡ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಕಾರು ಚಾಲಕರಾಗಿದ್ದ ಮಡಿಕೇರಿಯ ಬಟ್ಯಾನ ಕುಶಾಲಪ್ಪ ಗೌಡರಿಗೆ ಬಿಜೆಪಿ ಕಚೇರಿಯಲ್ಲಿ ಸನ್ಮಾನ

ದೇಶ ಕಂಡ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಕಾರು ಚಾಲಕರಾಗಿದ್ದ ಮಡಿಕೇರಿಯ ಬಟ್ಯಾನ ಕುಶಾಲಪ್ಪ ಗೌಡರಿಗೆ ಬಿಜೆಪಿ ಕಚೇರಿಯಲ್ಲಿ ಸನ್ಮಾನ

November 15, 2025
ಅಕೇಶಿಯಾ ಮರಗಳ ತೆರವು: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ  ಮುಂಡೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ಗೆ ಗ್ರೀನ್ ಸಿಗ್ನಲ್

ಅಕೇಶಿಯಾ ಮರಗಳ ತೆರವು: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಮುಂಡೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ಗೆ ಗ್ರೀನ್ ಸಿಗ್ನಲ್

November 15, 2025
ಪುತ್ತೂರಿನಲ್ಲಿ ಬೀದಿ ನಾಯಿಗಳ ಹಾವಳಿ ತಕ್ಷಣ ಕ್ರಮಕೈಗೊಳ್ಳಿ: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹ

ಪುತ್ತೂರಿನಲ್ಲಿ ಬೀದಿ ನಾಯಿಗಳ ಹಾವಳಿ ತಕ್ಷಣ ಕ್ರಮಕೈಗೊಳ್ಳಿ: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹ

November 15, 2025
3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಬೃಹತ್ ವೇದಿಕೆ ರಚನೆಗೆ ಸಿದ್ಧತೆ-ಚಪ್ಪರ ಮುಹೂರ್ತ

3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಬೃಹತ್ ವೇದಿಕೆ ರಚನೆಗೆ ಸಿದ್ಧತೆ-ಚಪ್ಪರ ಮುಹೂರ್ತ

November 15, 2025
ಮೋಸಕ್ಕೆ ಅವಕಾಶ ಕೊಡಬೇಡಿ ಚೈನ್ ಲಿಂಕ್ ಕಂಪೆನಿ ಸುಲಭವಾಗಿ ಹಣ ಕೊಡೋದು ಯಾರಿಗೂ ಸಾಧ್ಯವಿಲ್ಲ: ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕಾದ ಅಗತ್ಯ

ಮೋಸಕ್ಕೆ ಅವಕಾಶ ಕೊಡಬೇಡಿ ಚೈನ್ ಲಿಂಕ್ ಕಂಪೆನಿ ಸುಲಭವಾಗಿ ಹಣ ಕೊಡೋದು ಯಾರಿಗೂ ಸಾಧ್ಯವಿಲ್ಲ: ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕಾದ ಅಗತ್ಯ

November 15, 2025
ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟಕ್ಕೆ ಐತಿಹಾಸಿಕ ಗೆಲುವು  ಪ್ರಧಾನಿ ಮೋದಿಯ ವಿಕಸಿತ ಭಾರತಕ್ಕೆ ಸಂದ ಜನಾದೇಶ, ‘ವೋಟ್ ಚೋರಿ’ ಆರೋಪಕ್ಕೆ ಮತದಾರರಿಂದ ತಕ್ಕ ಉತ್ತರ: ಸಂಸದ ಕ್ಯಾ.  ಚೌಟ

ಬಿಹಾರದಲ್ಲಿ ಎನ್ ಡಿ ಎ ಮೈತ್ರಿಕೂಟಕ್ಕೆ ಐತಿಹಾಸಿಕ ಗೆಲುವು ಪ್ರಧಾನಿ ಮೋದಿಯ ವಿಕಸಿತ ಭಾರತಕ್ಕೆ ಸಂದ ಜನಾದೇಶ, ‘ವೋಟ್ ಚೋರಿ’ ಆರೋಪಕ್ಕೆ ಮತದಾರರಿಂದ ತಕ್ಕ ಉತ್ತರ: ಸಂಸದ ಕ್ಯಾ. ಚೌಟ

November 14, 2025
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ – ಆಮಂತ್ರಣ ಪತ್ರ ಬಿಡುಗಡೆ

ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ – ಆಮಂತ್ರಣ ಪತ್ರ ಬಿಡುಗಡೆ

November 14, 2025
ಕುಪ್ಪೆಟ್ಟಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ವಿಜಯ ಕುಮಾರ ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಇವರನ್ನು ಗೌರವಿಸಲಾಯಿತು.

ಕುಪ್ಪೆಟ್ಟಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ವಿಜಯ ಕುಮಾರ ಸರಕಾರಿ ಪ್ರೌಢಶಾಲೆ ಪೆರ್ಲ ಬೈಪಾಡಿ ಇವರನ್ನು ಗೌರವಿಸಲಾಯಿತು.

November 14, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Sunday, November 16, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ 5 ದಿನಗಳ ಕಾಲ ಲಕ್ಷದೀಪೋತ್ಸವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ 5 ದಿನಗಳ ಕಾಲ ಲಕ್ಷದೀಪೋತ್ಸವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು

    ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ  ನ.14 ರಂದು ಮಕ್ಕಳ ದಿನಾಚರಣೆ

    ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆಯಲ್ಲಿ ನ.14 ರಂದು ಮಕ್ಕಳ ದಿನಾಚರಣೆ

    ನ.19ಕ್ಕೆ ಅಟಲ್ ವಿರಾಸತ್ : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ

    ದೇಶ ಕಂಡ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಕಾರು ಚಾಲಕರಾಗಿದ್ದ ಮಡಿಕೇರಿಯ ಬಟ್ಯಾನ ಕುಶಾಲಪ್ಪ ಗೌಡರಿಗೆ ಬಿಜೆಪಿ ಕಚೇರಿಯಲ್ಲಿ ಸನ್ಮಾನ

    ದೇಶ ಕಂಡ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಕಾರು ಚಾಲಕರಾಗಿದ್ದ ಮಡಿಕೇರಿಯ ಬಟ್ಯಾನ ಕುಶಾಲಪ್ಪ ಗೌಡರಿಗೆ ಬಿಜೆಪಿ ಕಚೇರಿಯಲ್ಲಿ ಸನ್ಮಾನ

    ಅಕೇಶಿಯಾ ಮರಗಳ ತೆರವು: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ  ಮುಂಡೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ಗೆ ಗ್ರೀನ್ ಸಿಗ್ನಲ್

    ಅಕೇಶಿಯಾ ಮರಗಳ ತೆರವು: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಮುಂಡೂರಿನಲ್ಲಿ ಆರ್ ಟಿ ಒ ಟ್ರ್ಯಾಕ್ ಗೆ ಗ್ರೀನ್ ಸಿಗ್ನಲ್

    ಪುತ್ತೂರಿನಲ್ಲಿ ಬೀದಿ ನಾಯಿಗಳ ಹಾವಳಿ ತಕ್ಷಣ ಕ್ರಮಕೈಗೊಳ್ಳಿ: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹ

    ಪುತ್ತೂರಿನಲ್ಲಿ ಬೀದಿ ನಾಯಿಗಳ ಹಾವಳಿ ತಕ್ಷಣ ಕ್ರಮಕೈಗೊಳ್ಳಿ: ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್ ರೈ ಆಗ್ರಹ

    3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಬೃಹತ್ ವೇದಿಕೆ ರಚನೆಗೆ ಸಿದ್ಧತೆ-ಚಪ್ಪರ ಮುಹೂರ್ತ

    3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಬೃಹತ್ ವೇದಿಕೆ ರಚನೆಗೆ ಸಿದ್ಧತೆ-ಚಪ್ಪರ ಮುಹೂರ್ತ

    ಮೋಸಕ್ಕೆ ಅವಕಾಶ ಕೊಡಬೇಡಿ ಚೈನ್ ಲಿಂಕ್ ಕಂಪೆನಿ ಸುಲಭವಾಗಿ ಹಣ ಕೊಡೋದು ಯಾರಿಗೂ ಸಾಧ್ಯವಿಲ್ಲ: ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕಾದ ಅಗತ್ಯ

    ಮೋಸಕ್ಕೆ ಅವಕಾಶ ಕೊಡಬೇಡಿ ಚೈನ್ ಲಿಂಕ್ ಕಂಪೆನಿ ಸುಲಭವಾಗಿ ಹಣ ಕೊಡೋದು ಯಾರಿಗೂ ಸಾಧ್ಯವಿಲ್ಲ: ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕಾದ ಅಗತ್ಯ

    ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ – ಆಮಂತ್ರಣ ಪತ್ರ ಬಿಡುಗಡೆ

    ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ – ಆಮಂತ್ರಣ ಪತ್ರ ಬಿಡುಗಡೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಉಡುಪಿ

ತುಳುನಾಡಿನ ವಿಶಿಷ್ಟ ಸಂಪ್ರದಾಯ ಆಟಿ ತಿಂಗಳು. ಊರಿನ ಮಾರಿ ಕಳೆಯಲು ಬರುವವನೇ ಆಟಿ ಕಳಂಜ.

by ಪ್ರಜಾಧ್ವನಿ ನ್ಯೂಸ್
July 18, 2024
in ಉಡುಪಿ, ದಕ್ಷಿಣ ಕನ್ನಡ, ಪುತ್ತೂರು, ಪ್ರಾದೇಶಿಕ, ಸಾಂಸ್ಕೃತಿಕ
0
ತುಳುನಾಡಿನ ವಿಶಿಷ್ಟ ಸಂಪ್ರದಾಯ ಆಟಿ ತಿಂಗಳು. ಊರಿನ ಮಾರಿ ಕಳೆಯಲು ಬರುವವನೇ ಆಟಿ ಕಳಂಜ.

Oplus_131072

63
SHARES
180
VIEWS
ShareShareShare

ತುಳುವಿನಲ್ಲಿ ಆಟಿ ತಿಂಗಳು ಅಂದರೆ ಆಷಾಢ ಮಾಸ. ಜೋರು ಮಳೆ ಬರುವ ಈ ಹೊತ್ತಲ್ಲಿ ಕೃಷಿ ಕೆಲಸಗಳು, ಹಬ್ಬವಾಗಲೀ ಶುಭ ಕಾರ್ಯವಾಗಲೀ ನಡೆಯುವುದಿಲ್ಲ, ಮಳೆಯಿಂದಾಗಿ ರೋಗ ರುಜಿನಗಳೂ ಬರುವ ಕಾಲ. ಹೀಗೆ ಊರಿಗೇ ಊರೇ ತಾಪತ್ರಯ ಎದುರಿಸುವಾಗ ಊರಿನ ಮಾರಿ ಕಳೆಯಲು ಮನೆಗೆ ಮನೆಗೆ ಬರುತ್ತಾನೆ ಆಟಿ ಕಳಂಜ. ಆಟಿ ಅಂದರೆ ಆಷಾಢ, ಕಳಂಜ/ಕಳೆಂಜ ಅಂದರೆ ಕಳೆಯುವವನು ಎಂದರ್ಥ. ಆಷಾಢ ಮಾಸದ ಕಷ್ಟಗಳನ್ನು ಕಳೆಯಲು ಬರುವ ಆಟಿ ಕಳಂಜ ಈಗೀಗ ಅಪರೂಪ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನ ತುಳುವರು  ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಈಗಲೂ ಆಟಿ ತಿಂಗಳಲ್ಲಿ ಆಟಿ ಕಳಂಜ ಬರುತ್ತಾನೆ. ಆಟಿ ಕಳಂಜೆ ಬತ್ತುಂಡ್ ಎಂದು ಆಟಿ ಕಳಂಜನಿಗೆ ಬೇಕಾದ ವಸ್ತುಗಳನ್ನು ಮನೆಮಂದಿ ದಾನ ಮಾಡುವುದನ್ನು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಕಾಣಬಹುದು.

ಆಷಾಢ ತಿಂಗಳು ಅಂದರೆ ಜೋರು ಮಳೆಗಾಲ ಬೇರೆ ಹೀಗಾಗಿ ಊರಿನಲ್ಲಿ ಮನುಷ್ಯರಿಗೆ ಪ್ರಾಣಿಗಳಿಗೆ ಕಾಯಿಲೆ ಹರಡುವುದು ಸರ್ವೇ ಸಾಮಾನ್ಯ. ಇಂಥಾ ಸಾಂಕ್ರಾಮಿಕ ಸೋಂಕುಗಳನ್ನು ಜನರು ಊರಿಗೆ ಮಾರಿ ಬಂತು ಎಂದೇ ಭಾವಿಸುತ್ತಾರೆ. ಈ ಮಾರಿಯನ್ನು ಕಳೆಯಲು ಬರುವವನೇ ಆಟಿ ಕಳಂಜ. ತುಳುನಾಡಿನಲ್ಲಿ ಭೂತಕಟ್ಟುವ ಸಮುದಾಯ (ನಲಿಕೆಯವರು) ಆಟಿ ಕಳಂಜ ವೇಷ ಹಾಕಿ ಮನೆ ಮನೆಗೆ ಬರುತ್ತಾರೆ. ಬೆಳ್ತಂಗಡಿ ಭಾಗದಲ್ಲಿ ಮೇರ ಜನಾಂಗದವರು ಈ ವೇಷ ತೊಡುತ್ತಾರೆ. ಕಾಸರಗೋಡು ಕಡೆ ಕೋಪಾಳರು ಕಳಂಜ ವೇಷಧಾರಿಗಳಾದರೆ , ಮಲವ ಜನಾಂಗದವರು ಬೇಡ ಕುಣಿತವನ್ನೂ, ವಣ್ಣನ್ ಜನಾಂಗದವರು ಮರ್ದ ವೇಷಧಾರಿಗಳಾಗಿ ಇದೇ ರೀತಿ ಮನೆಮನೆಗೆ ಭೇಟಿ ನೀಡುತ್ತಾರೆ.

ಕಳಂಜೆ ಕಳೆಂಜನೋ ಕಳಂಜೆ ಏರ್ನ ಮಗೆನೂ ಕಳಂಜೆ ಎಂಬ ಪಾಡ್ಡನದೊಂದಿಗೆ ತೆಂಬೆರೆ (ಚರ್ಮದ ವಾದ್ಯ) ನುಡಿಸುವವರ ಜತೆಗೆ ಕುಣಿಯುತ್ತಾ ಬರುತ್ತಾನೆ ಆಟಿ ಕಳಂಜ. ಆಟಿದ ದೊಂಬು ಆನೆತ ಬೆರಿ ಪುಡಪು ಎಂದು ತುಳಿವಿನಲ್ಲಿ ಗಾದೆ ಇದೆ. ಇದರ ಅರ್ಥ ಅದೆಷ್ಟು ಬಿಸಿಲು ಅಂದರೆ ಆ ಬಿಸಿಲಿನ ಝಳಕ್ಕೆ ಆನೆಯ ಬೆನ್ನೂ ಒಡೆದು ಹೋಗುತ್ತದೆ. ಇದನ್ನು ಬಿಡಿಸಿ ಹೇಳುವುದಾದರೆ ಆಷಾಢ ಎಂದರೆ ಮಳೆಗಾಲ. ಈ ಹೊತ್ತಲ್ಲಿ ಸರಿಯಾದ ಮಳೆ ಬರದಿದ್ದರೆ ನೀರಿನ ಅಭಾವವೂ ಇರುತ್ತದೆ. ಇನ್ನು ಮಳೆ ಬಂದಾಗ ಶೀತ, ನೆಗಡಿ, ಇನ್ನಿತರ ರೋಗಗಳು ಬರುವುದು ಸಾಮಾನ್ಯ. ಈ ಹೊತ್ತಲ್ಲಿ ಆಟಿಕಳೆಂಜ ಬಂದು ರೋಗ ರುಜಿನಗಳನ್ನು ನಿವಾರಣೆ ಮಾಡುತ್ತಾನೆ ಎನ್ನುವ ನಂಬಿಕೆ ತುಳುನಾಡಿನ ಜನರದ್ದು.

ಆಟಿ ಕಳಂಜ ವೇಷಧಾರಿ ಹದಿಹರೆಯದ ಹುಡುಗನೇ ಆಗಿರುತ್ತಾನೆ. ಕಾಲಿಗೆ ಗಗ್ಗರ(ಗೆಜ್ಜೆ), ಸೊಂಟಕ್ಕೆ ತೆಂಗಿನ ಗರಿ , ಕೆಂಪು ನಿಲುವಂಗಿ, ಮುಖಕ್ಕೆ ಕೆಂಪು ಬಳಿದು ಅದರಲ್ಲಿ ಕಪ್ಪು ಬಿಳಿ ಚುಕ್ಕಿ, ಮುಖದಲ್ಲಿ ಮೀಸೆ ಬರೆದು ಕೈಯಲ್ಲಿ ತಾಳೆಗರಿಯಿಂದ ಮಾಡಿದ ಕೊಡೆ, ಕೇಪುಳ ಹೂವಿನಿಂದ ಸಿಂಗರಿಸಿದ ಮುಟ್ಟಳೆ (ಹಾಳೆಯಿಂದ ಮಾಡಿದ ಟೋಪಿ)ಧರಿಸಿ ಕುಣಿಯುತ್ತಾ ಆಟಿ ಕಳಂಜ ಕುಣಿಯುತ್ತಾ ಬರುತ್ತಾನೆ. ಜತೆಗೆ ಇಬ್ಬರು ಸಹಾಯಕರು ಇರುತ್ತಾರೆ. ಇವರಲ್ಲಿ ಒಬ್ಬ ಸಹಾಯಕ ಕಳಂಜನ ಬಗ್ಗೆ ವಿವರಿಸುವ ಪಾಡ್ದನಗಳನ್ನು ಹೇಳುತ್ತಾ ತೆಂಬರೆ ಬಾರಿಸುತ್ತಾ ಬರುತ್ತಾನೆ. ಇನ್ನೊಬ್ಬ ಸಹಾಯಕ ಊರಿನವರು ಕಳಂಜನಿಗಾಗಿ ಕೊಟ್ಟ ವಸ್ತುಗಳನ್ನು ಚೀಲದಲ್ಲಿ ಹಾಕಿ ಹೊರಲು ಜತೆಯಾಗಿರುತ್ತಾನೆ.

ಆಟಿ ಕಳೆಂಜ ಊರಿನ ರೋಗ ರುಜಿನಗಳನ್ನು ಹೋಗಲಾಡಿಸುವ ಮಾಂತ್ರಿಕ. ಆತ ಮನೆಗೆ ಬಂದನೆಂದರೆ ಮನೆಯವರು ಆತನನ್ನು ಸತ್ಕರಿಸಬೇಕು. ಹಿಂದಿನ ಕಾಲದಲ್ಲಿ ಆಟಿ ಕಳಂಜ ಆಹಾರ ವಸ್ತುಗಳನಷ್ಟೇ ಸ್ವೀಕರಿಸುತ್ತಿದ್ದ, ಆದರೆ ಕಾಲ ಬದಲಾಗದಂತೆ ಜನರು ಹಣ ನೀಡಲು ಶುರು ಮಾಡಿದರು. ಸಂಪ್ರದಾಯಗಳನ್ನು ನೋಡುವುದಾದರೆ ಆಟಿ ಕಳಂಜ ಮನೆ ಬಾಗಿಲಿಗೆ ಬಂದನೆಂದರೆ ಮನೆಯೊಡತಿ ಮೊರದಲ್ಲಿ ಭತ್ತ, ಅಕ್ಕಿ, ಮೆಣಸು, ಉಪ್ಪು, ಹುಳಿ, ಇದ್ದಿಲು ಮುಂತಾದವುಗಳನ್ನು ಇಟ್ಟು ಕೊಡುತ್ತಾರೆ. ಆಷಾಢದಲ್ಲಿ ಬಡತನ ಇದ್ದೇ ಇರುತ್ತದೆ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮನೆ ಮಂದಿ ಅಕ್ಕಿಯೋ, ತೆಂಗಿನಕಾಯಿಯೋ ಕೊಟ್ಟು ಕಳೆಂಜನನ್ನು ಕಳುಹಿಸಿಕೊಡುತ್ತಾರೆ. ಇನ್ನು ಮನೆಯಲ್ಲಿ ಮಾಡುವ ಆಹಾರ ತಿನಿಸುಗಳಾದ ಉಪ್ಪಡ್‌ ಪಚ್ಚಿರ್, (ಹಲಸಿನ ಹಣ್ಣಿನ ತೊಳೆ ಉಪ್ಪು ನೀರಲ್ಲಿ ಹಾಕಿರುವುದು) ಸಾಂತಾಣಿ (ಹಲಸಿನ ಹಣ್ಣಿನ ಬೀಜ ಒಣಗಿಸಿರುವುದು) ಮೊದಲಾದವುಗಳನ್ನು ಕೊಟ್ಟು ಕಳಿಸುತ್ತಾರೆ. ಆಟಿ ಕಳಂಜ ಮನೆ ಅಂಗಳದಿಂದ ಇಳಿದು ಹೋಗುವಾಗ ಕುರ್ದಿ ನೀರು (ಅರಶಿನ ಹಾಗೂ ಸುಣ್ಣ ಬೆರೆಸಿದಾಗ ಆಗುವ ಕೆಂಪು ನೀರು)ನ್ನು ಸಿಂಪಡಿಸುತ್ತಾರೆ. ಹೀಗೆ ಮಾಡಿದರೆ ಮನೆಯ ಅಶುಭ, ಮಾರಿ ಕಳೆದು ಹೋಗುತ್ತದೆ ಎಂಬುದು ತುಳುನಾಡಿನ ಜನಪದ ನಂಬಿಕೆ.

ಇನ್ನೊಂದು ವಿಶೇಷ ಎಂದರೆ ಈ ಕಳಂಜ ಯಾವುದೇ ತೋಟದಿಂದ ಬಾಳೆಗೊನೆ, ತೆಂಗಿನಕಾಯಿಯನ್ನು ಹೇಳದೆ ಕೇಳದೆ ಕಿತ್ತುಕೊಂಡು ಹೋಗಬಹುದು. ಅದನ್ನು ಯಾರೂ ಪ್ರಶ್ನಿಸುವುದಿಲ್ಲ.  ಕಳಂಜ ಕದ್ದೊಯ್ದ ಅಂದರೆ ಬೆಳೆಗಳಿಗೆ ತಟ್ಟಿದ ರೋಗ ಮಾಯವಾಗುತ್ತದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಮಕ್ಕಳು ಇಲ್ಲದೆ ಹೆಂಗಸರಿಗೆ ಹರಸಿದರೆ, ಕರು ಹಾಕದ ಹಸುಗಳ ತಲೆ ಸವರಿದರೆ ಎಲ್ಲವೂ ಮಂಗಳಕರವಾಗುತ್ತದೆ ಎಂಬ ನಂಬಿಕೆಯೂ ಇಲ್ಲಿದೆ. ಹಾಗಾಗಿ ಕಳೆಂಜನನ್ನು ಸಂತಾನ ದೇವತೆ ಎಂದೂ ಕರೆಯುವುದುಂಟು.

ಕರಾವಳಿಯಲ್ಲಿ ದೈವರಾಧನೆಗೆ ಮಹತ್ತರವಾದ ಸ್ಥಾನವಿದೆ. ಆಷಾಢ ಮಾಸದಲ್ಲಿ ಇಲ್ಲಿನ ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದ ಆಟಿಯ ಒಂದು ತಿಂಗಳ ಕಾಲ ಇಲ್ಲಿ ದೈವ ಸ್ಥಾನಗಳು ಬಾಗಿಲು ಮುಚ್ಚಿರುತ್ತವೆ. ದೈವದ ಬಾಗಿಲು ಮುಚ್ಚಿದ ಹೊತ್ತಲ್ಲಿ ಬರುವವನೇ ಆಟಿ ಕಳಂಜ. ಆಟಿಡ್ ಬತ್ತೆನೋ ಕಳೆಂಜೆ ಮಾರಿ ಕಳೆಪ್ಪೇನೋ(ಆಷಾಢದಲ್ಲಿ‌ ಬಂದಾನೋ‌ ಕಳೆಂಜ ಮಾರಿ ಕಳೆತಾನೆ) ಎಂಬ ಪಾಡ್ದನದಲ್ಲಿ  ಇರುವಂತೆ ಆಟಿ ಕಳೆಂಜ ಆಚರಣೆಯ ಉದ್ದೇಶವೇ ಮಾರಿ ಕಳೆಯುವುದು ಆಗಿರುತ್ತದೆ. ಈ ಕಳಂಜ ಆಟಿ ತಿಂಗಳಲ್ಲಿ ಮಾತ್ರಬರುತ್ತಾನೆ.  ಆತನನ್ನು ಗುಡಿಕಟ್ಟಿ ಆರಾಧಿಸುವುದಿಲ್ಲ. ಆಷಾಢ ಮಾಸದಲ್ಲಿ ಯಾವುದೇ ಭೂತಕೋಲಗಳಾಗಲೀ, ದೈವಾರಾಧನೆ ಹಬ್ಬಗಳಾಗಲೀ ನಡೆಯುವುದಿಲ್ಲ. ಹೀಗಾಗಿ ಭೂತಕಟ್ಟುವ ಸಮುದಾಯ ಕಳಂಜನ ವೇಷಧಾರಿಗಳಾಗಿ ಊರೂರು ಸುತ್ತಿ ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಉಳ್ಳವರು ಇಲ್ಲದವರಿಗೆ ದಾನವಾಗಿ ಕೊಟ್ಟು ಹಂಚಿ ಉಣ್ಣುವ ರೀತಿಯೇ ಇದರ ಹಿಂದಿನ ಮರ್ಮ ಎಂದು ಹೇಳಬಹುದು.

ಜುಲೈ- ಅಗಸ್ಟ್ ತಿಂಗಳು ಆಷಾಢ ಅಥವಾ ಆಟಿ. ಈ ತಿಂಗಳಲ್ಲಿ ಆಟಿ ಅಮಾವಾಸ್ಯೆ ಬರುತ್ತದೆ. ತುಳುವರಿಗೆ ಆಟಿ ಅಮವಾಸ್ಯೆ ವಿಶೇಷವಾಗಿರುತ್ತದೆ. ಆಟಿ ಅಮವಾಸ್ಯೆಯಂದು ಹಾಲೆ ಕಷಾಯ ಕುಡಿಯುವ ಪದ್ಧತಿ ಇಲ್ಲಿ ಹಲವು ವರ್ಷಗಳಿಂದ ನಡೆದು ಬಂದಿದೆ. ಹಾಲೆ ಮರ (ಸಂಸ್ಕೃತದಲ್ಲಿ ಸಪ್ತಪರ್ಣಿ ಮರ) ಎಂದು ಕರೆಯುವ ಈ ಮರದ ತೊಗಟೆಯಿಂದ ಮಾಡುವ ಕಷಾಯ ಸರ್ವರೋಗಗಳಿಗೆ ರಾಮಭಾಣ ಎಂದು ಹೇಳಲಾಗುತ್ತದೆ. ಆಟಿ ತಿಂಗಳಿಗೆ ಈ ಮರದಲ್ಲಿ ಎಲ್ಲಾ ಬಗೆಯ ದಿವ್ಯ ಔಷಧಗಳು ಸೇರಿಕೊಂಡಿರುತ್ತದೆ. ಹೀಗಾಗಿ ಆಟಿ ಅಮಾವಾಸ್ಯೆ ದಿನ ಹಾಲೆ ಮರದ ಕಷಾಯವನ್ನು ಇಲ್ಲಿನ ಜನರು ಸೇವಿಸುತ್ತಾರೆ. ಹಾಲೆ ಮರದ ಕಷಾಯ ತೆಗೆದುಕೊಂಡು ಬರುವವರು ಮನೆಯ ಹಿರಿಯರೇ ಆಗಿರುತ್ತಾರೆ. ಯಾಕೆಂದರೆ ಕಾಡಿನಲ್ಲಿ ಇರುವ ಮರಗಳ ಗುರುತು ಇರುವುದು ಅವರಿಗೆ ತಾನೇ?.ಅಮಾವಾಸ್ಯೆ ದಿನ ಸೂರ್ಯೋದಯಕ್ಕೂ ಮುನ್ನ ಹಾಲೆ ಮರದಿಂದ ಹಾಲು ಸಂಗ್ರಹಿಸಲು ತೊಗಟೆ ಕೆತ್ತಬೇಕು. ಹೀಗೆ ತೊಗಟೆಯನ್ನು ಬರೀ ಕಲ್ಲಿನಿಂದಲೇ ಕೆತ್ತ ಬೇಕು. ಹೀಗೆ ಕೆತ್ತಿ ತಂದ ತೊಗಟೆಯ ಮೇಲ್ಭಾಗದ ಕಪ್ಪು ಸಿಪ್ಪೆಯನ್ನು ಸ್ವಚ್ಛಗೊಳಿಸಿ, ಕಲ್ಲಿನಿಂದಲೇ ಜಜ್ಜಿ ರಸ ತೆಗೆದುಕೊಳ್ಳಬೇಕು. ಇದಕ್ಕೆ ಕಾಳುಮೆಣಸು, ಓಮ ಕಾಳು ಮತ್ತು ಬೆಳ್ಳುಳ್ಳಿಯನ್ನು ಕೂಡಾ ಜಜ್ಜಿ ಹಾಕಿ ಎಲ್ಲವನ್ನೂ ಹಿಂಡಿ ರಸ ತೆಗೆಯಬೇಕು. ಈ ರಸಕ್ಕೆ ಬಿಳಿ ಕಲ್ಲು(ತುಳುವಿನಲ್ಲಿ ಬೊಲ್ಲು ಕಲ್ಲ್)ನ್ನು ಕೆಂಡದಲ್ಲಿ ಕಾಯಿಸಿ ಹಾಕಬೇಕು. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು. ಕಷಾಯ ತುಂಬಾ ಕಹಿ ಇರುತ್ತದೆ. ಇದು ದೇಹಕ್ಕೆ ಉಷ್ಣ. ಹಾಗಾಗಿ ದೇಹ ಮತ್ತಷ್ಟು ಉಷ್ಣ ಆಗದಂತೆ ತಂಪು ಮಾಡಲು ಮೆಂತ್ಯ ಗಂಜಿ ಸೇವಿಸುತ್ತಾರೆ. ಆಟಿ ತಿಂಗಳಲ್ಲಿ ಕೆಸುವಿನ ಎಲೆಯಿಂದ ಮಾಡಿದ ಪತ್ರೋಡೆ, ಹಲಸಿನ ಹಣ್ಣಿನಿಂದ ಮಾಡಿದ ವಿವಿಧ ತಿಂಡಿ ತಿನಿಸುಗಳನ್ನು ಜನರು ಸೇವಿಸುತ್ತಿದ್ದು, ಇದು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು ಎಂದು ಹೇಳಲಾಗುತ್ತದೆ.

HPR Institute Of Nursing And Paramedical Sciences & Friends Beke

ಜಾಹೀರಾತು

SendShare25Share
Previous Post

ಉಪ್ಪಿನಂಗಡಿ: ಲಾರಿ ಡಿಕ್ಕಿಯಾಗಿ ಎರಡು ಕಾರುಗಳಲ್ಲಿದ್ದ ನಾಲ್ವರಿಗೆ ಗಂಭೀರ ಗಾಯ

Next Post

ದೆಹಲಿ: “ಮಾತೆರೆಗ್ಲ ಸೊಲ್ಮೆಲು” ಕೇಸರಿ ಶಲ್ಯದೊಂದಿಗೆ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ಯಾ.ಬ್ರಿಜೇಶ್ ಚೌಟ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ದೆಹಲಿ: “ಮಾತೆರೆಗ್ಲ ಸೊಲ್ಮೆಲು” ಕೇಸರಿ ಶಲ್ಯದೊಂದಿಗೆ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ಯಾ.ಬ್ರಿಜೇಶ್ ಚೌಟ

ದೆಹಲಿ: "ಮಾತೆರೆಗ್ಲ ಸೊಲ್ಮೆಲು" ಕೇಸರಿ ಶಲ್ಯದೊಂದಿಗೆ ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕ್ಯಾ.ಬ್ರಿಜೇಶ್ ಚೌಟ

Leave a Reply Cancel reply

Your email address will not be published. Required fields are marked *

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..