ದೆಹಲಿ: ಇತಿಹಾಸದಲ್ಲಿ ಪ್ರಥಮ ಬಾರಿಗೆ ಸ್ಪೀಕರ್ ಸ್ಥಾನಕ್ಕೆ ಚುನಾವಣೆ
ಲೋಕಸಭಾ ಚುನಾವಣೆ ಮುಗಿದು ದೆಹಲಿಯಲ್ಲಿ 18 ನೇ ಅಧಿವೇಶನ ನಡೆಯುತ್ತಿದೆ. ಆಯ್ಕೆಯಾದ ಸಂಸದರಿಗೆ ಪ್ರಮಾಣ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಆದರೆ ಮುಂದೆ ಅಧಿವೇಶನ ನಡೆಯಲು ಸ್ಪೀಕರ್ ಆಯ್ಕೆಯ ಅಗತ್ಯವಿದ್ದು ಈ ಹಿಂದೆ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಸ್ಪೀಕರ್ ಈ ಬಾರಿ ಚುನಾವಣೆಗೆ ದಾರಿ ಮಾಡಿದೆ.
ಅಭ್ಯರ್ಥಿಗಳಾಗಿ ಆಡಳಿತ ರೂಡ ಪಕ್ಷದಿಂದ ಓಂ ಬಿರ್ಲಾ, ಕಾಂಗ್ರೆಸ್ ನಿಂದ ಕೆ ಸುರೇಶ್ ಘೋಷಿಸಲಾಗಿದೆ.
ಇದರಲ್ಲಿ ವಿರೋಧ ಪಕ್ಷದ ನಡೆ ಕೇರಳದಿಂದ ಎಂಟು ಬಾರಿ ಆಯ್ಕೆಯಾದ ಸಂಸದ ಕೆ ಸುರೇಶ್ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಿದರು. ಬಿಜೆಪಿಯಿಂದ ಓಂ ಬಿರ್ಲಾ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿ ಸ್ಪೀಕರ್ ಅನುಭವಿ. ಇಂಡಿಯಾ ಕೂಟ ರಿಂದ ಡೆಪ್ಯುಟಿ ಸ್ಪೀಕರ್ ನೀಡುವಂತೆ ಪಟ್ಟು ನೀಡಿದರು ಆಡಳಿತ ಪಕ್ಷ ಅದನ್ನು ತಳ್ಳಿಹಾಕಿದೆ. ಒಟ್ಟು 271 ಮತಗಳ ಆಗತ್ಯವಿದ್ದು ಬಹುಮತ NDA ಇದ್ದರು ಸಹ ಇಂಡಿಯಾ ಕೂಟ ಚುನಾವಣೆಗೆ ಧುಮಿಕಿದೆ ಇಲ್ಲಿ ಅಡ್ಡ ಮತದಾನ ನಡೆಯಲು ಸಾಧ್ಯವಿದೆ.
ಸ್ಪೀಕರ್ ಗೆ ಮತಚಲಾಯಿಸಲು 7 ಸಂಸದರಿಗೆ ಅವಕಾಶವಿಲ್ಲ ಆದರೆ ಇಂದು ನಡೆಯುವ ಚುನಾವಣೆಯಲ್ಲಿ ಯಾರಿಗೆ ಗೆಲುವು ಸೋಲು ಎಂಬುದು ಕಾದುನೋಡ ಬೇಕಾಗಿದೆ.