• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಐಸಿಸಿ ಟಿ20 ವಿಶ್ವಕಪ್​; 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

ಐಸಿಸಿ ಟಿ20 ವಿಶ್ವಕಪ್​; 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

June 28, 2024
ಬೇಸಿಗೆಯಲ್ಲಿ ಮಡಿಕೆ ನೀರು ಕುಡಿಯುವುದು ಆರೋಗ್ಯಕರ, ಸಹಜ ಮತ್ತು ಪರಿಸರ ಸ್ನೇಹಿ

ಬೇಸಿಗೆಯಲ್ಲಿ ಮಡಿಕೆ ನೀರು ಕುಡಿಯುವುದು ಆರೋಗ್ಯಕರ, ಸಹಜ ಮತ್ತು ಪರಿಸರ ಸ್ನೇಹಿ

March 2, 2026
ಪೊಲೀಸ್ ಮ್ಯಾರಥಾನ್: ಠಾಣಾಧಿಕಾರಿ ಕುಸಿದು ಬಿದ್ದು ಸಾವು

ಪೊಲೀಸ್ ಮ್ಯಾರಥಾನ್: ಠಾಣಾಧಿಕಾರಿ ಕುಸಿದು ಬಿದ್ದು ಸಾವು

March 2, 2026
ಬಂದಾರು: ಏಪ್ರಿಲ್ 02 ರಿಂದ 10 ರವರೆಗೆ ನಡೆಯಲಿರುವ ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂದಾರು: ಏಪ್ರಿಲ್ 02 ರಿಂದ 10 ರವರೆಗೆ ನಡೆಯಲಿರುವ ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

March 2, 2026
ಪುತ್ತೂರು:ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ವಾಲ್ಟರ್ ರೆಬೆಲ್ಲೋ ರವರು ಸ್ವಾಧೀನದಲ್ಲಿದ್ದ  8 ಸೆಂಟ್ಸ್ ಜಾಗ ಪರಸ್ಪರ ಒಪ್ಪಂದದ ಮೇರೆಗೆ ತೆರವು

ಪುತ್ತೂರು:ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ವಾಲ್ಟರ್ ರೆಬೆಲ್ಲೋ ರವರು ಸ್ವಾಧೀನದಲ್ಲಿದ್ದ 8 ಸೆಂಟ್ಸ್ ಜಾಗ ಪರಸ್ಪರ ಒಪ್ಪಂದದ ಮೇರೆಗೆ ತೆರವು

February 28, 2026
ಬೆಳ್ತಂಗಡಿ: ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ

ಬೆಳ್ತಂಗಡಿ: ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ

February 28, 2026
ಪುತ್ತೂರಿನ ಯುವ ಉದ್ಯಮಿ ಉಜ್ವಲ್ ಪ್ರಭು ಅವರ ಯು ಆರ್ ಪ್ರಾಪರ್ಟೀಸ್ ಸಂಸ್ಥೆಗೆ ರಿಯಲ್ ಎಸ್ಟೇಟ್ ಡೆವಲಪರ್ ಆಫ್ ದ  ಇಯರ್ ಪ್ರಶಸ್ತಿ

ಪುತ್ತೂರಿನ ಯುವ ಉದ್ಯಮಿ ಉಜ್ವಲ್ ಪ್ರಭು ಅವರ ಯು ಆರ್ ಪ್ರಾಪರ್ಟೀಸ್ ಸಂಸ್ಥೆಗೆ ರಿಯಲ್ ಎಸ್ಟೇಟ್ ಡೆವಲಪರ್ ಆಫ್ ದ ಇಯರ್ ಪ್ರಶಸ್ತಿ

February 28, 2026
ಉಪ್ಪಿನಂಗಡಿ ಅಕ್ರಮವಾಗಿ ಗೋಹತ್ಯೆ ಮಾಂಸ ಮಾರಾಟ : ಪ್ರಕರಣ ದಾಖಲು

ಉಪ್ಪಿನಂಗಡಿ ಅಕ್ರಮವಾಗಿ ಗೋಹತ್ಯೆ ಮಾಂಸ ಮಾರಾಟ : ಪ್ರಕರಣ ದಾಖಲು

February 27, 2026
ಹಾಸನ ಸಮೀಪ ಭುವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

ಹಾಸನ ಸಮೀಪ ಭುವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

February 27, 2026
ಹಿಂದೂ ಫೈರ್ ಬ್ರ್ಯಾಂಡ್ ರಿ ಎಂಟ್ರಿ!:ಅನಂತ್ ಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕೀಯಕ್ಕೆ?

ಹಿಂದೂ ಫೈರ್ ಬ್ರ್ಯಾಂಡ್ ರಿ ಎಂಟ್ರಿ!:ಅನಂತ್ ಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕೀಯಕ್ಕೆ?

February 27, 2026
ಮೊದಲ ಹಂತದಲ್ಲಿ 300 ಬೆಡ್‌ನ ಪುತ್ತೂರು ಮೆಡಿಕಲ್ ಹಾಸ್ಪಿಟಲ್ ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

ಮೊದಲ ಹಂತದಲ್ಲಿ 300 ಬೆಡ್‌ನ ಪುತ್ತೂರು ಮೆಡಿಕಲ್ ಹಾಸ್ಪಿಟಲ್ ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

February 27, 2026
ಪುತ್ತೂರು: ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಅಮಾನತು

ಪುತ್ತೂರು: ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಅಮಾನತು

February 27, 2026
ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ ವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ?

ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ ವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ?

February 26, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Tuesday, March 3, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬೇಸಿಗೆಯಲ್ಲಿ ಮಡಿಕೆ ನೀರು ಕುಡಿಯುವುದು ಆರೋಗ್ಯಕರ, ಸಹಜ ಮತ್ತು ಪರಿಸರ ಸ್ನೇಹಿ

    ಬೇಸಿಗೆಯಲ್ಲಿ ಮಡಿಕೆ ನೀರು ಕುಡಿಯುವುದು ಆರೋಗ್ಯಕರ, ಸಹಜ ಮತ್ತು ಪರಿಸರ ಸ್ನೇಹಿ

    ಬಂದಾರು: ಏಪ್ರಿಲ್ 02 ರಿಂದ 10 ರವರೆಗೆ ನಡೆಯಲಿರುವ ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

    ಬಂದಾರು: ಏಪ್ರಿಲ್ 02 ರಿಂದ 10 ರವರೆಗೆ ನಡೆಯಲಿರುವ ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

    ಪುತ್ತೂರು:ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ವಾಲ್ಟರ್ ರೆಬೆಲ್ಲೋ ರವರು ಸ್ವಾಧೀನದಲ್ಲಿದ್ದ  8 ಸೆಂಟ್ಸ್ ಜಾಗ ಪರಸ್ಪರ ಒಪ್ಪಂದದ ಮೇರೆಗೆ ತೆರವು

    ಪುತ್ತೂರು:ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ವಾಲ್ಟರ್ ರೆಬೆಲ್ಲೋ ರವರು ಸ್ವಾಧೀನದಲ್ಲಿದ್ದ 8 ಸೆಂಟ್ಸ್ ಜಾಗ ಪರಸ್ಪರ ಒಪ್ಪಂದದ ಮೇರೆಗೆ ತೆರವು

    ಬೆಳ್ತಂಗಡಿ: ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ

    ಬೆಳ್ತಂಗಡಿ: ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ

    ಪುತ್ತೂರಿನ ಯುವ ಉದ್ಯಮಿ ಉಜ್ವಲ್ ಪ್ರಭು ಅವರ ಯು ಆರ್ ಪ್ರಾಪರ್ಟೀಸ್ ಸಂಸ್ಥೆಗೆ ರಿಯಲ್ ಎಸ್ಟೇಟ್ ಡೆವಲಪರ್ ಆಫ್ ದ  ಇಯರ್ ಪ್ರಶಸ್ತಿ

    ಪುತ್ತೂರಿನ ಯುವ ಉದ್ಯಮಿ ಉಜ್ವಲ್ ಪ್ರಭು ಅವರ ಯು ಆರ್ ಪ್ರಾಪರ್ಟೀಸ್ ಸಂಸ್ಥೆಗೆ ರಿಯಲ್ ಎಸ್ಟೇಟ್ ಡೆವಲಪರ್ ಆಫ್ ದ ಇಯರ್ ಪ್ರಶಸ್ತಿ

    ಉಪ್ಪಿನಂಗಡಿ ಅಕ್ರಮವಾಗಿ ಗೋಹತ್ಯೆ ಮಾಂಸ ಮಾರಾಟ : ಪ್ರಕರಣ ದಾಖಲು

    ಉಪ್ಪಿನಂಗಡಿ ಅಕ್ರಮವಾಗಿ ಗೋಹತ್ಯೆ ಮಾಂಸ ಮಾರಾಟ : ಪ್ರಕರಣ ದಾಖಲು

    ಹಾಸನ ಸಮೀಪ ಭುವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

    ಹಾಸನ ಸಮೀಪ ಭುವನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

    ಹಿಂದೂ ಫೈರ್ ಬ್ರ್ಯಾಂಡ್ ರಿ ಎಂಟ್ರಿ!:ಅನಂತ್ ಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕೀಯಕ್ಕೆ?

    ಹಿಂದೂ ಫೈರ್ ಬ್ರ್ಯಾಂಡ್ ರಿ ಎಂಟ್ರಿ!:ಅನಂತ್ ಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕೀಯಕ್ಕೆ?

    ಮೊದಲ ಹಂತದಲ್ಲಿ 300 ಬೆಡ್‌ನ ಪುತ್ತೂರು ಮೆಡಿಕಲ್ ಹಾಸ್ಪಿಟಲ್ ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

    ಮೊದಲ ಹಂತದಲ್ಲಿ 300 ಬೆಡ್‌ನ ಪುತ್ತೂರು ಮೆಡಿಕಲ್ ಹಾಸ್ಪಿಟಲ್ ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಅಂತರರಾಜ್ಯ

ಐಸಿಸಿ ಟಿ20 ವಿಶ್ವಕಪ್​; 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

by ಪ್ರಜಾಧ್ವನಿ ನ್ಯೂಸ್
June 28, 2024
in ಅಂತರರಾಜ್ಯ, ಅಂತರಾಷ್ಟ್ರೀಯ, ಕ್ರೀಡೆ, ರಾಷ್ಟ್ರೀಯ
0
ಐಸಿಸಿ ಟಿ20 ವಿಶ್ವಕಪ್​; 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ
22
SHARES
63
VIEWS
ShareShareShare

ಪ್ರೊವಿಡೆನ್ಸ್‌: ಅಕ್ಷರ್​ ಪಟೇಲ್​(23ಕ್ಕೆ 3), ಕುಲ್​ದೀಪ್​ ಯಾದವ್​(19ಕ್ಕೆ 3) ಜೋಡಿಯ ಸ್ಪಿನ್​ ದಾಳಿ ಹಾಗೂ ರೋಹಿತ್​ ಶರ್ಮ(57) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯ  ಇಂಗ್ಲೆಂಡ್​ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ 68 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿದೆ. ಜತೆಗೆ 2022ರ ಸೆಮಿಫೈನಲ್​ ಪಂದ್ಯದ ಸೋಲಿನ ಸೇಡು ತೀರಿಸಿಕೊಂಡಿದೆ. ಶನಿವಾರ ಬಾರ್ಬಡೋಸ್​ನಲ್ಲಿ ನಡೆಯುವ ಫೈನಲ್​ ಪಂದ್ಯದಲ್ಲಿ ರೋಹಿತ್​ ಪಡೆ ದಕ್ಷಿಣ ಆಫ್ರಿಕಾದ ಸವಾಲು ಎದುರಿಸಲಿದೆ. ಕೂಟದ ಅಜೇಯ ತಂಡಗಳ ನಡುವಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.

ಇಲ್ಲಿನ ಪ್ರೊವಿಡೆನ್ಸ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ, ರೋಹಿತ್​ ಶರ್ಮ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 171 ರನ್​ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡು 16.4 ಓವರ್​ಗಳಲ್ಲಿ 103 ರನ್​ಗೆ ಸರ್ವಪತನ ಕಂಡಿತು. ಈ ಸೋಲಿನಿಂದಿಗೆ ಹಾಲಿ ಚಾಂಪಿಯನ್​ ಆಗಿದ್ದ ಇಂಗ್ಲೆಂಡ್​ ಈಗ ಮಾಜಿ ಆಯಿತು.

camera center ad

ಜಾಹೀರಾತು

Muliya

ಜಾಹೀರಾತು

Poorna squash

ಜಾಹೀರಾತು

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್​ಗೆ ನಾಯಕ ಜಾಸ್​ ಬಟ್ಲರ್​ ಬಿರುಸಿನ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸಿದರು. ಒಂದು ಹಂತದಲ್ಲಿ ಅವರ ಬ್ಯಾಟಿಂಗ್ ನೋಡುವಾಗ 2022ರ ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯವೊಮ್ಮೆ ಕಣ್ಣ ಮುಂದೆ ಬಂದಿತು. ಅಬ್ಬರದ ಬ್ಯಾಟಿಂಗ್​ ಮೂಲಕ ಮುನ್ನುಗ್ಗುತ್ತಿದ್ದ ಇವರನ್ನು ಕೊನೆಗೂ ಎಡಗೈ ಸ್ಪಿನ್ನರ್​ ಅಕ್ಷರ್​ ಪಟೇಲ್​ ಕಟ್ಟಿಹಾಕಿದರು. ತಾನೆಸೆದ ಮೊದಲ ಓವರ್​ನ ಮೊದಲ ಎಸೆತದಲ್ಲೇ ವಿಕೆಟ್ ಎಗರಿಸಿ ಭಾರತಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ರಿವರ್ಸ್​ ಸ್ವೀಪ್​ ಮಾಡುವ ಯತ್ನದಲ್ಲಿ ಕೀಪರ್​ ರಿಷಭ್​ ಪಂತ್​ಗೆ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದರು. ಬಟ್ಲರ್​ 4 ಬೌಂಡರಿ ನೆರವಿನಿಂದ 23 ರನ್​ ಬಾರಿಸಿದರು.

2ನೇ ಓವರ್​ನಲ್ಲಿ ಅಕ್ಷರ್ ಮತ್ತೊಂದು ದೊಡ್ಡ ವಿಕೆಟ್​ ಬೇಟೆಯಾಡಿದರು.​ ಅಪಾಯಕಾರಿ ಬ್ಯಾಟರ್​ ಜಾನಿ ಬೇರ್​ಸ್ಟೋ ಅವರನ್ನು ಖಾತೆ ತೆರೆಯುವ ಮುನ್ನವೇ ಪೆವಿಲಿಯನ್​ಗೆ ಅಟ್ಟಿದರು. ಈ ವಿಕೆಟ್​ ಪತನಕ್ಕೂ ಮುನ್ನ ಜಸ್​ಪ್ರೀತ್​ ಬುಮ್ರಾ ತಮ್ಮ ಯಾರ್ಕರ್​ ದಾಳಿಯಿಂದ ಫಿಲ್​ ಸಾಲ್ಟ್ ಅವರನ್ನು ಕ್ಲೀನ್​ ಬೌಲ್ಟ್​ ಮಾಡಿದ್ದರು.​

35 ರನ್​ಗೆ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಇಂಗ್ಲೆಂಡ್​ಗೆ ಆ ಬಳಿಕ ಬಂದ ಬ್ಯಾಟರ್​ಗಳು ಕೂಡ ಆಸರೆಯಾಗುವಲ್ಲಿ ವಿಫಲರಾದರು. ಮೊಯಿನ್​ ಅಲಿ(8) ಕ್ರೀಸ್​ ಬಿಟ್ಟು ಸಿಕ್ಸರ್​ ಬಾರಿಸುವ ಯತ್ನದಲ್ಲಿ ರಿಷಭ್​ ಪಂತ್​ ಅವರ ಮಿಂಚಿನ ವೇಗದ ಸ್ಟಂಪ್​ ಬಲೆಗೆ ಬಿದ್ದರು. ಈ ವಿಕೆಟ್​ ಕೂಡ ಅಕ್ಷರ್​ ಪಾಲಾಯಿತು. ಆ ಬಳಿಕ ಆಡಲಿಳಿದ ಆಲ್​ರೌಂಡರ್​ ಸ್ಯಾಮ್​ ಕರನ್(2)​ ಅವರನ್ನು ಕುಲ್​ದೀಪ್​ ಯಾದವ್​ ತಮ್ಮ ಮೊದಲ ಓವರ್​ನಲ್ಲಿಯೇ ಎಲ್​ಬಿಡಬ್ಲ್ಯು ಬಲೆಗೆ ಬೀಳಿಸಿದರು. 5ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ಹ್ಯಾರಿ ಬ್ರೂಕ್​ ಸಣ್ಣ ಮಟ್ಟದ ಬ್ಯಾಟಿಂಗ್​ ಹೋರಾಟವನ್ನು ಸಂಘಟಿಸಿದರೂ ಕೂಡ 25 ರನ್​ಗೆ ಇವರ ವಿಕೆಟ್​ ಕೂಡ ಪತನಗೊಂಡಿತು. ಇಲ್ಲಿಗೆ ಇಂಗ್ಲೆಂಡ್​ ಸೋಲು ಕೂಡ ಖಚಿತಗೊಂಡಿತು. ಅಂತಿಮ ಹಂತದಲ್ಲಿ ವೇಗಿ ಜೋಫ್ರಾ ಆರ್ಚರ್​ 1 ಬೌಂಡರಿ ಮತ್ತು 2 ಸಿಕ್ಸರ್​ ಸಿಡಿಸಿ 21 ರನ್​ ಗಳಿಸುವ ಮೂಲಕ ತಂಡದ ಮೊತ್ತವನ್ನು 100 ಗಡಿ ದಾಟಿಸಿದರು. ಭಾರತ ಪರ ಕುಲ್​ದೀಪ್​ ಯಾದವ್​ ಮತ್ತು ಅಕ್ಷರ್​ ಪಟೇಲ್ ತಲಾ ಮೂರು ವಿಕೆಟ್​ ಕಿತ್ತರೆ, ಜಸ್​ಪ್ರೀತ್​ ಬುಮ್ರಾ 2 ವಿಕೆಟ್​ ಉರುಳಿಸಿದರು.

ಮಳೆ ನಿಂತ ಬಳಿಕ ರೋಹಿತ್ ಶರ್ಮ ಜತೆ ಸೂರ್ಯಕುಮಾರ್​ ಕೂಡ ಬಿರುಸಿನ ಬ್ಯಾಟಿಂಗ್​ಗೆ ಒತ್ತುಕೊಟ್ಟರು. ಉಭಯ ಆಟಗಾರರು ಸೇರಿಕೊಂಡು ಮೂರನೇ ವಿಕೆಟ್ 73​ ಜತೆಯಾಟ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. 5 ರನ್​ ಗಳಿಸಿದ್ದ ವೇಳೆ ಫಿಲ್ ಸಾಲ್ಟ್ ಅವರಿಂದ ಕ್ಯಾಚ್​ ಕೈಚೆಲ್ಲಿ ಜೀವದಾನ ಪಡೆದ ರೋಹಿತ್, ಇದರ ಸಂಪೂರ್ಣ ಲಾಭವೆತ್ತಿದರು. 33 ಎಸೆತಗಳಿಂದ ಅರ್ಧಶತಕ ಬಾರಿಸಿ ಮಿಂಚಿದರು. ಇದು ರೋಹಿತ್​ ಅವರ 32ನೇ ಅಂತಾರಾಷ್ಟ್ರೀಯ ಟಿ20 ಅರ್ಧಶತಕ. ಅಂತಿಮವಾಗಿ 6 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 57 ರನ್​ ಗಳಿಸಿ ಆದೀಲ್​ ರಶೀದ್​ ಓವರ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು. ಈ ವಿಕೆಟ್​ ಪತನಗೊಂಡು 11 ರನ್​ ಅಂತರದಲ್ಲಿ ಸೂರ್ಯಕುಮಾರ್​ ವಿಕೆಟ್​ ಕೂಡ ಬಿತ್ತು. ಸೂರ್ಯಕುಮಾರ್​ 47(4 ಬೌಂಡರಿ, 2ಸಿಕ್ಸರ್​) ರನ್​ ಬಾರಿಸಿದರು.

ಉತ್ತಮ ಸ್ಥಿತಿಯಲ್ಲಿದ್ದ ಭಾರತ, ಸೂರ್ಯಕುಮಾರ್​ ಮತ್ತು ರೋಹಿತ್​ ವಿಕೆಟ್​ ಪತನದ ಬಳಿಕ ನಾಟಕೀಯ ಕುಸಿತ ಕಂಡಿತು. ಶಿವಂ ದುಬೆ(0) ಗೋಲ್ಡನ್​ ಡಕ್​ ಸಂಕಷ್ಟಕ್ಕೆ ಸಿಲುಕಿದರೆ, ಅಕ್ಷರ್​ ಪಟೇಲ್​ 10 ರನ್​ಗೆ ಆಟ ಮುಗಿಸಿದರು. ಅಂತಿಮವಾಗಿ ಜಡೇಜಾ ಅಜೇಯ 17(9 ಎಸೆತ, 2 ಬೌಂಡರಿ) ಮತ್ತು ಹಾರ್ದಿಕ್​ ಪಾಂಡ್ಯ 23(13 ಎಸೆತ, 2 ಸಿಕ್ಸರ್​, 1 ಬೌಂಡರಿ) ರನ್ ಬಾರಿಸಿದ ಪರಿಣಾಮ ತಂಡ 150ರ ಗಡಿ ದಾಟಿತು. ಇಂಗ್ಲೆಂಡ್​ ಪರ ಕ್ರಿಸ್​ ಜೋರ್ಡನ್​ 37 ರನ್​ ಬಿಟ್ಟುಕೊಟ್ಟು 3 ವಿಕೆಟ್​ ಉರುಳಿಸಿದರು.

ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ ಅವರು ಈ ಪಂದ್ಯದಲ್ಲಿ 4 ಬೌಂಡರಿ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ(111 ಬೌಂಡರಿ) ಹೆಸರಿನಲ್ಲಿತ್ತು. 37 ರನ್​ ಪೂರ್ತಿಗೊಳಿಸುತ್ತಿದ್ದಂತೆ ಭಾರತ ತಂಡದ ನಾಯಕನಾಗಿ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ 5 ಸಾವಿರ ರನ್​ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ 5ನೇ ನಾಯಕ ಎನಿಸಿಕೊಂಡರು. ವಿರಾಟ್​ ಕೊಹ್ಲಿ(12883) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್​(11207) ದ್ವಿತೀಯ ಸ್ಥಾನಿಯಾಗಿದ್ದಾರೆ.

vishnu studio

ಜಾಹೀರಾತು

ashwinistudioputtur

ಜಾಹೀರಾತು

SendShare9Share
Previous Post

ಕಲಬುರ್ಗಿ: ಭೀಕರ ರಸ್ತೆ ಅಪಘಾತ 13 ಮಂದಿ ಸ್ಥಳದಲ್ಲೇ ಸಾವು. ದೇವರ ದರುಶನ ‌ಮಾಡಿ ಬಂದವರ ಮನೆಯಲ್ಲಿ ‌ಸೂತಕದ ಛಾಯೆ

Next Post

ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ್ದ ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ್ದ ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ

ಪ್ಯಾಲೆಸ್ತೀನ್ ಪರ ಘೋಷಣೆ ಕೂಗಿದ್ದ ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..