ಪುತ್ತೂರು: ಟ್ರಾಫಿಕ್ ಪೋಲಿಸರೇ ನಿಮ್ಮ ಕಾನೂನಿನಲ್ಲಿ ಬಡವರಿಗೊಂದು, ಶ್ರೀಮಂತರಿಗೊಂದು ಎಂಬ ತಾರತಮ್ಯ ಇದೆಯೇ…?
ಆಟೋ ರಿಕ್ಷಾ ಕಾಣುವ ನಿಮಗೆ ಐಶಾರಾಮಿ ಕಾರು ಕಾಣುವುದಿಲ್ಲವೇ…?
ಪುತ್ತೂರು ಬೆಳೆಯುತ್ತಿರುವ ಊರು.ಕಾನೂನುನಿನ ವಿಚಾರದಲ್ಲಿ ಒಂದು ಹೆಜ್ಜೆ ಮೊದಲೇ ಎಂಬಂತೆ ಎಲ್ಲವೂ ಪಾಲನೆಯಾಗುತ್ತದೆ.
ಆದರೆ ಇವುಗಳ ಪುತ್ತೂರು ಟ್ರಾಫಿಕ್ ಪೋಲಿಸರ ತಾರತಮ್ಯ ಏಕೆ ಎಂಬ ಪ್ರಶ್ನೆ ಎದುರಾಗಿದೆ. ಬಡ ಆಟೋ ಡ್ರೈವರ್ ಗಳ ಖಾಕಿ, ದ್ವಿಚಕ್ರ ವಾಹನದ ಹೆಲ್ಮೆಟ್, ಲೈಸೆನ್ಸ್, ಮಿರರ್, ಬಗ್ಗೆ ಸಿಕ್ಕಸಿಕ್ಕಲ್ಲಿ ದಂಡ ವಿಧಿಸುವ ನೀವುಗಳು ಅದೇ ದೊಡ್ಡ ದೊಡ್ಡ ಐಶಾರಾಮಿ ವಾಹನಗಳಾದ ಇನೋವ,ಪಾರ್ಚೂನರ್,ಅಥವಾ ಇನ್ಯಾವುದೇ ವಾಹನಗಳಲ್ಲಿ ಟಿಂಟ್ ಅಳವಡಿಕೆಯ ಬಗ್ಗೆ ಚಾಕರ ಎತ್ತುತ್ತಿಲ್ಲ ಯಾಕೆ…? ದಂಡ ವಿಧಿಸುತ್ತಿಲ್ಲ ಯಾಕೆ..? ಪ್ರಶ್ನೆ ಎದುರಾಗಿದೆ.
ಸರಕಾರದ ನಿಯಮ ಪ್ರಕಾರ ಟಿಂಟ್ ಅಳವಡಿಕೆ 70% ಮಾತ್ರ. ವಾಹನದ ಒಳಗಿರುವ ವ್ಯಕ್ತಿ ಕಾಣುವಂತಿರಬೇಕು ಎಂಬುದಿದೆ. ಆದರೆ ಇಲ್ಲಿ ಕಪ್ಪು ಬಣ್ಣದ ಟಿಂಟ್ (0% ಟಿಂಟ್) ಅಳವಡಿಸಿ ರಾಜರೋಷವಾಗಿ ತಿರುಗಾಡುವ ಅತೀ ಶ್ರೀಮಂತರಿಗೆ ದಂಡ ವಿಧಿಸುವ ಧೈರ್ಯ ನಿಮ್ಮಲ್ಲಿಲ್ಲವೇ ಅಥವಾ ನೋಡಿಯು ನೋಡದಂತೆ ಹಲ್ಲು ತೋರಿಸುವ ನಿಮಗೆ ಕೈ ಬಿಸಿ ಮಾಡುವರೇ..?
ಐಶಾರಾಮಿ ಕಾರಿನಲ್ಲಿ ಲವ್ ಜಿಹಾದ್ ಪ್ರೇರಣೆ, ಹುಡುಗಿರ ಸಾಗಾಟ, ಗಾಂಜ, ಗೋ ಸಾಗಾಣಿಕೆ ನಡೆಯುತ್ತಿದ್ದು ಜೊತೆಗೆ ಶ್ರೀಮಂತರು ದರ್ಪದಿಂದ ವಾಹನ ಅಪಘಾತ ಎಸಗಿದ ನಂತರ ನಿಲ್ಲಿಸದೇ ಓಡಿ ತಪ್ಪಿಸಿಕೊಂಡು ಕೇಸ್ ದಾಖಲಾಗಿರುವುದು ನಿಮಗೆ ತಿಳಿದಿದೆ ಜೊತೆಗೆ ಅದೇ ಇಲ್ಲಿ ಮೇಲೈಸುತ್ತಿದೆಯಲ್ಲವೆ..?
ರಕ್ತಕೊಡಲು ಹೆಲ್ಮೆಟ್ ಇಲ್ಲದೇ ಹೋದ ಬೈಕ್ ಸವಾರನಿಗೆ ದಂಡ ವಿಧಿಸಿದ ಘಟನೆ ಹಿಂದೆ ಪುತ್ತೂರಿನಲ್ಲಿ ನಡೆದಿತ್ತು.
ಕಾನೂನಿನಲ್ಲಿ ಎಲ್ಲರೂ ಸಮಾನರೇ ಇಲ್ಲಿ ಶ್ರೀಮಂತ ಬಡವನೆಂಬ ತಾರತಮ್ಯ ಬೇಡ. ದ್ವಿಚಕ್ರ, ತ್ರಿಚಕ್ರ ದಂಡ ವಿಧಿಸುವ ನೀವುಗಳು ಇಂತಹ ಟಿಂಟ್ ಬಗ್ಗೆ ಅಧಿಕೃತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಕೂಗು ಕೇಳಿಬರುತ್ತಿದೆ.
ಇನ್ನಾದರೂ ಎಚ್ಚೆತ್ತುಕೊಂಡು ಪುತ್ತೂರು ಪೋಲಿಸರಿಂದ ಈ ಕಾರ್ಯಚರಣೆ ನಡೆಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ ಎಂಬುದು ನಮ್ಮದೊಂದು ಆಶಯ.