ಪುತ್ತೂರು : ಕಾವು ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ.
ಅಡಿಕೆ ದರ ರೂ. 30-35 ರವರೆಗೆ ಕುಸಿದಾಗ, 2001ರಲ್ಲಿ ಜಿಲ್ಲೆಯ ಸಹಕಾರಿಗಳ ಮತ್ತು ಬೆಳೆಗಾರರ ಚಿಂತನೆ ಮೂಲಕ “ಮಾಸ್ ಲಿಮಿಟೆಡ್” ಸಂಸ್ಥೆ ಪ್ರಾರಂಭವಾಯಿತು. “ಸಹಕಾರಿ ರತ್ನ” ಶ್ರೀ ವಾರಣಾಸಿ ಸುಬ್ರಾಯ ಭಟ್, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ. ಎನ್ ರಾಜೇಂದ್ರ ಕುಮಾರ್ ರವರ ಮಾರ್ಗದರ್ಶನದೊಂದಿಗೆ ಜಿಲ್ಲೆಯ ಸಹಕಾರಿಗಳು ಮತ್ತು ಅಡಿಕೆ ಬೆಳೆಗಾರರು ಸೇರಿ “ಮಾಸ್ ಲಿಮಿಟೆಡ್” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು.
ನಮ್ಮ ಸಂಸ್ಥೆಯು ಕೃಷಿಕರ ಅಡಿಕೆಯನ್ನು ಉತ್ತಮ ಬೆಲೆಗೆ ಖರೀದಿಸಿ, ಸಂಸ್ಕರಿಸಿ, ಉತ್ತರ ಭಾರತಕ್ಕೆ ಮಾರಾಟ ಮಾಡುವ ಮೂಲಕ ಅಡಿಕೆ ಬೆಲೆಯಲ್ಲಿ ಸ್ಥಿರತೆ ಮತ್ತು ವರ್ಷವಿಡೀ ಕೃಷಿಕರ ಅಡಿಕೆ ಖರೀದಿಗೆ ಮಾರುಕಟ್ಟೆಯನ್ನು ಒದಗಿಸುತ್ತಾ ಇದೆ.
ದಿನಾಂಕ 13-03-2024 ರಿಂದ “ಸಹಕಾರಿ ರತ್ನ” ಶ್ರೀ ಕೆ. ಸೀತಾರಾಮ ರೈ, ಸವಣೂರು ರವರು ಸಂಸ್ಥೆಯ ಅಧ್ಯಕ್ಷರಾಗಿ ಮುನ್ನಡೆಸುತ್ತಾ ಇದ್ದಾರೆ. ಸಂಘದ ಕೇಂದ್ರ ಕಛೇರಿಯು ಮಂಗಳೂರಿನ ಬೈಕಂಪಾಡಿಯ ಎ.ಪಿ.ಎಂ.ಸಿ. ಆವರಣದೊಳಗೆ ಇದೆ. ಪ್ರಕೃತ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಸ್ಥೆಯು 10 ಖರೀದಿ ಕೇಂದ್ರಗಳನ್ನು ತೆರೆದಿದ್ದು ಪ್ರತಿದಿನವೂ ಕೃಷಿಕರ, ಸದಸ್ಯರ ಅಡಿಕೆಯನ್ನು ಖರೀದಿಸುತ್ತಿದೆ.
ಕಾವು ಅಡಿಕೆ ಖರೀದಿ ಕೇಂದ್ರ ಉದ್ಘಾಟನೆ
ದಿನಾಂಕ 09-07-2024 ರಂದು ಬೆಳಿಗ್ಗೆ 10.00 ಗಂಟೆಗೆ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದೊಂದಿಗೆ ಸಂಘದ ಆವರಣದಲ್ಲಿ ಮಾಸ್ ಲಿಮಿಟೆಡ್ ನ ಕಾವು ಅಡಿಕೆ ಖರೀದಿ ಕೇಂದ್ರ” ಉದ್ಘಾಟನೆಗೊಳ್ಳಲಿದೆ.2
ಮತ್ತೂರಿನ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ್ ಕುಮಾರ್ ರೈ ಯವರು ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶ್ರೀ ಶಶಿಕುಮಾರ್ ರೈ ಬಾಲ್ಗೊಟ್ಟು ಮತ್ತು ಶ್ರೀ ಎಸ್.ಬಿ. ಜಯರಾಮ ರೈ ಯವರು ಹಾಗೂ ಅರ್ಯಡ್ಕ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶ್ರೀ ಸಂತೋಷ್ ಮಣಿಯಾಣಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು “ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ನನ್ಯ ಅಚ್ಯುತ ಮೂಡೆತ್ತಾಯ ರವರು ವಹಿಸಲಿದ್ದಾರೆ.
ಉದ್ದೇಶಗಳು:-
1. ಮಾಸ್ ಲಿಮಿಟೆಡ್ ಸಂಸ್ಥೆಯ ಕಳೆದ ಸಾಲಿನ ವ್ಯವಹಾರವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ. ಆದ್ದರಿಂದ ಹೆಚ್ಚು ಅಡಿಕೆ ಖರೀದಿಗೋಸ್ಕರ ಕಾವು ಅಡಿಕೆ ಖರೀದಿ ಕೇಂದ್ರವನ್ನು ಪ್ರಾರಂಭಿಸುತ್ತಿದ್ದೇವೆ.
2. ಇನ್ನೂ ಒಂದೆರಡು ಅಡಿಕೆ ಖರೀದಿ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಇಟ್ಟುಕೊಂಡಿದ್ದೇವೆ.
3. ಖರೀದಿ ಮಾಡಿದ ಹೆಚ್ಚು ಅಡಿಕೆಗಳನ್ನು ಸಂಸ್ಕರಣೆ ಮಾಡುವ ಬಗ್ಗೆ ಈಗಾಗಲೇ ಇರುವ ನಮ್ಮ ಸುಳ್ಯಶಾಖೆಯಲ್ಲಿ ಎ.ಪಿ.ಎಂ.ಸಿ. ಯವರಿಂದ ಒಂದು ಹೆಚ್ಚುವರಿ ಗೋದಾಮು ಪಡೆದು ಒಂದು ಸುಸಜ್ಜಿತ “ಅಡಿಕೆ ಸಂಸ್ಕರಣೆ ವಿಭಾಗ” ವನ್ನು ಕೂಡಲೇ ಪ್ರಾರಂಭಿಸಲಿದ್ದೇವೆ.
4. ಅಡಿಕೆಯನ್ನು ಖರೀದಿ ಮಾಡುವ ಬಗ್ಗೆ ಪದವೀಧರ ಅಭ್ಯರ್ಥಿಗಳನ್ನು ಸ್ಟೆಪೆಂಡ್ ಸಹಿತ ಟ್ರೈನೀಗಳಾಗಿ ಸೇರಿಸಿ ಅವರಿಗೆ ಅಡಿಕೆಯಲ್ಲಿ ತರಬೇತಿ ನೀಡಿ, ಅವರನ್ನು ಖರೀದಿ ಅಧಿಕಾರಿಗಳಾಗಿ ಮಾಡಲಿದ್ದೇವೆ. ಈ ಬಗ್ಗೆ ಪ್ರಕ್ರಿಯೆಗಳು ಪ್ರಾರಂಭಗೊಂಡಿವೆ
ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಟಿ.ಮಹಾಬಲೇಶ್ವರ ಭಟ್
ಅಧ್ಯಕ್ಷರು ಶ್ರೀ ಕೆ. ಸೀತಾರಾಮ ರೈ, ಸವಣೂರು
ಪತ್ರಿಕಾಗೋಷ್ಠಿಯಲ್ಲಿ ಅಚ್ಚುತ ಮೂಡಿತಾಯ,ಕೋಲ್ಪೆಗುತ್ತು ರಾಜಾರಾಮ ಶೆಟ್ಟಿ,ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು