ಪುತ್ತೂರು ವಿಧಾನಸಭಾ ಚುನಾವಣೆ ಮುಗಿದು ಕಾಂಗ್ರೆಸ್ ಗೆದ್ದು ಬೀಗಿದೆ.
ಅರುಣ್ ಪುತ್ತಿಲ ಬಂಡಾಯದ ಬಾವುಟದ ಗಾಳಿಗೆ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡೆದಿದ್ದರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಅಂತರದ ಲೀಡ್ ಪಡೆದುಕೊಂಡಿದೆ.
ಮಂಗಳೂರಿನಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆ ಸೋತ ನಂತರ ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಬಾರಿ ವಿರೋಧದ ನಡೆ ಕೇಳಿದ ಬರುತ್ತಿದ್ದ ಹಿನ್ನಲೆ ಜೊತೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಃ ತಮ್ಮ ಅಧಿಕಾರ ಮುಗಿದಿದೆ ಬದಲಾವಣೆ ಮಾಡುವ ಸಮಯ ಅಂತ ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ಜೊತೆಗೆ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ತಿಳಿಸಿದ್ದು ಬದಲಾವಣೆಗೆ ಮುನ್ಸೂಚನೆ ಆಗಿತ್ತು.
ಉಪ್ಪಿನಂಗಡಿ ಬ್ಲಾಕ್ ಗೆ ಕೇಳಿ ಬರುತ್ತಿರುವ ಹೆಸರುಗಳು
ಮುರಳಿಧರ ರೈ ಮಠಂತಬೆಟ್ಟು,ಮೊನಪ್ಪ ಗೌಡ,ಪದ್ಮನಾಭ ಅಳಿಕೆ
ಪ್ರಸ್ತುತ ಬಹು ಸಂಖ್ಯಾ ಗೌಡ ಸಮುದಾಯಕ್ಕೆ ಬಿಜೆಪಿ ಕಾಂಗ್ರೆಸ್ ನಲ್ಲಿ ಯಾವುದೇ ಹುದ್ದೆ ಇಲ್ಲದಿರುವುದು ಮುಖ್ಯವಾಹಿನಿಯಲ್ಲಿದೆ.ಅದರ ಜೊತೆಗೆ ಪಕ್ಷಕ್ಕಾಗಿ ಕೆಲಸ ಮಾಡಿ ಪಕ್ಷದ ಆಳ ಅಗಲ ತಿಳಿದಿರುವ ಅನೇಕ ವಿಚಾರದಲ್ಲಿ ತೊಡಗಿಸಿಕೊಂಡಿರುವ ಮೊನಪ್ಪ ಗೌಡ ಆಯ್ಕೆಯಾದರೆ ಬ್ಲಾಕ್ ಬಲಗೊಂಡು ಪಕ್ಷ ಸಂಘಟನೆಯ ಜೊತೆಗೆ ಕಾರ್ಯಕರ್ತರನ್ನು ಹಾಗು ಎಲ್ಲರನ್ನೂ ಜೊತೆ ಸೇರಿಸಿಕೊಂಡು ಹೋಗುವ ಚಕ್ಯತೆ ಇದೆ.
ಮಠಂತಬೆಟ್ಟು ಮುರಳಿದರ ರೈ.
ಹಿಂದಿನಿಂದಲೂ ಪಕ್ಷಕ್ಕೆ ದುಡಿದು ಬ್ಲಾಕ್ ನಲ್ಲಿ ತೊಡಗಿಸಿಕೊಂಡು ಟಿಕೇಟ್ ಆಕಾಂಕ್ಷಿಯಲ್ಲದಿದ್ದರು ಪಕ್ಷಕ್ಕೆ ಸಂಪೂರ್ಣ ಸಮಯ ನೀಡಿದವರು. ಚುನಾವಣೆ ಸೋಲು ಗೆಲುವು ಸಾಮಾನ್ಯ ಪಕ್ಷಕ್ಕೆ ದುಡಿಯುವ ಇವರು ಒಪ್ಪುವಂತದ್ದೆ ಅವಕಾಶ ನೀಡಿದರೆ ಯೋಗ್ಯ ವ್ಯಕ್ತಿ ಎಂಬುದು ಕೆಲ ಕಾರ್ಯಕರ್ತರ ಆಶಯ
ಅಳಿಕೆ: ಸಾಮಾನ್ಯ ವರ್ಗದಿಂದ ಬಂದ ಇವರು ಕಾರ್ಯಕರ್ತರ ಜೊತೆ ಬೆರೆಯುವವರು ಬಣದಲ್ಲಿ ತೊಡಗಿಸಿಕೊಳ್ಳದೆ ಏನಿದ್ದರೂ ಪಕ್ಷ ಕಾಂಗ್ರೆಸ್.ಅಳಿಕೆ ವಿಟ್ಲ ಭಾಗದಲ್ಲಿ ಪಕ್ಷ ಸಂಘಟಿಸಿದ್ದರು ಅವಕಾಶ ನೀಡುವರೆ ಕಾಣಬೇಕು