ಪುತ್ತೂರು: ರೋಟರಿ ಕ್ಲಬ್ ಯುವ ರೋಟರಿಸಂಸ್ಥೆಯ ವತಿಯಿಂದ ಬೀದಿ ನಾಯಿಗಳು ಹಾಗೂ ಸಾಕು ನಾಯಿಗಳಿಗೆ ಸಂತಾನಹರಣ ಚಿಕಿತ್ಸಾ ಕಾರ್ಯಕ್ರಮವು ಮುರದಲ್ಲಿನಡೆಯಿತು.
ಸಂತಾನ ಹರಣದಿಂದ ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಬೀದಿನಾಯಿಗಳನ್ನು ಕೊಲ್ಲುವುದು ಕಾನೂನಿಗೆ ವಿರುದ್ದವಾಗಿದೆ ಅವುಗಳ ನಿಯಂತ್ರಣ ಕೆಲಸ ನಡೆಯುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಸಮಾಜದಲ್ಲಿ ಎಲ್ಲಾ ಸ್ಥರದಲ್ಲೂ ಕೆಲಸಗಳು ನಡೆಯಬೇಕು ಎಂದು ಹೇಳಿದರು. ಈ ಕಾರ್ಯಕ್ರಮ ಸಮಾಜಕ್ಕೆ ಒಳಿತಾಗುವ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಣೆ ಅಶ್ಬಿನಿ, ಕೃಷ್ಣನಾರಾಯಣ ಮುಳಿಯ,ಮದ್ವರಾಜ್ ಅನಿಮಲ್‌ಕೇರ್ ಟ್ರಸ್ಡ್ ನ ಮುಖ್ಯಸ್ಥೆ ಮಮತಾ ರಾವ್ ಉಪಸ್ಥಿತರಿದ್ದರು.