ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೂತನ ಕಾರ್ಯಾಲಯವು ದಿನಾಂಕ 12.07.2024ರ ಶುಕ್ರವಾರದಂದು ಬೆಳಗ್ಗೆ 09:30 ಕ್ಕೆ ಜಿಲ್ಲಾಧಿಕಾರಿ ಕಚೇರಿಯ 2ನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ವಿಕಸಿತ ಭಾರತಕ್ಕಾಗಿ ವಿಕಸಿತ ದಕ್ಷಿಣ ಕನ್ನಡ ನಿರ್ಮಾಣದ ಸಂಕಲ್ಪಕ್ಕೆ ಈ ಕಾರ್ಯಾಲಯವು ಪ್ರೇರಣಾಧಾಮವಾಗಲಿದೆ. ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಗೂ ಈ ಕಛೇರಿಯು ಸಹಕಾರಿಯಾಗಲಿದೆ. ಕ್ಷೇತ್ರದ ಜನರ ಮತ್ತು ಸಂಸದರ ನಡುವೆ ಕೊಂಡಿಯಾಗಿ ಕಚೇರಿಯು ಕಾರ್ಯನಿರ್ವಹಿಸಲಿದ್ದು ಜಿಲ್ಲೆಯ ಜನರು ಕಚೇರಿಯನ್ನು ಸದುಪಯೋಗಪಡಿಸುವಂತೆ ಹಾಗೂ ಜಿಲ್ಲೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಮ್ಮ ಸಹಕಾರವನ್ನು ನೀಡುವಂತೆ ಪ್ರಕಟಣೆಯ ಮೂಲಕ ಸಂಸದರು ವಿನಂತಿಸಿದ್ದಾರೆ.