ಸುಳ್ಯ: ಬಸ್ ಸ್ಟ್ಯಾಂಡ್ ನಲ್ಲಿ ಕುಡುಕರ ಹಾವಳಿ ತಪ್ಪಿಸಲು ಪೊಲೀಸರೇ ಕುಡಿದು ಕರ್ತವ್ಯಕ್ಕೆ ಬಂದಿರುವ ಅನುಮಾನದ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ.
ಗುತ್ತಿಗಾರು ಬಸ್ ಸ್ಟ್ಯಾಂಡ್ ನಲ್ಲಿ ಮದ್ಯ ಸೇವಿಸಿ ಬಾಟಲಿ ಒಡೆದು ಮದ್ಯಪಾನಿಗಳು ಮಲಗಿದ್ದ ಕಾರಣ ಅವರಿಂದ ರಕ್ಷಣೆ ಪಡೆಯಲು 112 ಕ್ಕೆ ಮಹಿಳೆಯೊಬ್ಬರು ಕರೆ ಮಾಡಿದ್ದರೆನ್ನಲಾಗಿದೆ.
ಹೊಯ್ಸಳ ವಾಹನದಲ್ಲಿ ಎಎಸ್ ಐ ಮತ್ತು ಚಾಲಕ ಸ್ಥಳಕ್ಕೆ ಬಂದಿದ್ದು, ಕುಡುಕರ ಮೇಲೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಕಾರಣ ಸ್ಥಳೀಯರು ಪ್ರಶ್ನೆ ಮಾಡಿದಾಗ ಪೊಲೀಸರೇ ಮದ್ಯಪಾನ ಮಾಡಿ ಕರ್ತವ್ಯದಲ್ಲಿರುವ ಅನುಮಾನ ಮೂಡಿದೆ.
ಅನುಮಾನದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರನ್ನು ಮದ್ಯ ಸೇವಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದು, ಇಲ್ಲ ಎಂದು ಉತ್ತರಿಸಿದ್ದಾರೆ.
ಸುಳ್ಯ ಠಾಣೆಯಿಂದ ಬಂದಿರುವುದಾಗಿ ಪೊಲೀಸರು ಸ್ಥಳೀಯರೊಂದಿಗೆ ಹೇಳಿದ್ದು, ಈ ವೇಳೆ ಕುಡಿದು ವಾಹನ ಚಾಲನೆ ಮಾಡಬೇಡಿ, ಪೊಲೀಸ್ ಜೀಪ್ ಇಲ್ಲಿಯೇ ಬಿಟ್ಟು ಹೋಗಿ ಎಂದು ಸ್ಥಳೀಯರು ಸಲಹೆ ನೀಡಿದ್ದಾರೆ.
ಇದರ ಜೊತೆಗೆ ನನಗೆ ಆರೋಗ್ಯ ಸರಿ ಇಲ್ಲ ಎಂದೂ ಪೊಲೀಸ್ ಜೀಪ್ ಚಾಲಕ ಸಬೂಬು ಹೇಳುವ ಪ್ರಯತ್ನವನ್ನೂ ಮಾಡಿದ್ದಾರೆ.