ಮಂಗಳೂರು : ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಸಿಸಿ ಟಿವಿಯಲ್ಲಿ ಹೀನ ಕೃತ್ಯ ಸೆರೆಯಾದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ಎದುರು ಪದವು ನಿವಾಸಿ 80 ವರ್ಷ ಪ್ರಾಯದ ಮಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ.
ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಎದುರುಪದವು ಇಲ್ಲಿನ ಕೋರ್ದಬ್ಬು ದೈವಸ್ಥಾನದ ಬಳಿಯ ರಸ್ತೆಯಲ್ಲಿ ಆರು ವರ್ಷದ ಹೆಣ್ಣು ಮಗುವಿನ ಜೊತೆ ಆರೋಪಿ ಮಹಮ್ಮದ್ ಹನೀಫ್ ಅಸಭ್ಯ ವರ್ತನೆ ತೋರಿದ್ದಾನೆ. ಮಗುವಿನ ಉಡುಗೆ ಎತ್ತಿ ಗುಪ್ತಾಂಗ ಮುಟ್ಟಿ, ಈತನ ಖಾಸಗಿ ಅಂಗವನ್ನು ಮಗುವಿನ ಕೈಗೆ ತಾಗಿಸುತ್ತಿರುವ ಹೀನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪ್ರಾಪ್ತ ಬಾಲಕಿಗೆ ಈ ರೀತಿಯ ಕಿರುಕುಳ ಹೇಯ ಕೃತ್ಯವಾಗಿದೆ. ಅಲ್ಲದೇ ಸಮಾಜವೇ ತಲೆತಗ್ಗಿಸುವಂತದ್ದು ಇಂತಹ ವಿಕೃತಿ ಕಾಮಿಗಳಿಗೆ ಕಾನೂನಿನಲ್ಲಿ ಸರಿಯಾದ ಶಿಕ್ಷೆಯನ್ನು ವಿಧಿಸಿದರೆ ಮತ್ತೆ ಮರುಕಳಿಸುವುದಿಲ್ಲ ಎಂಬುದಾಗಿ ಸಾರ್ವಜನಿಕರಿಂದ ಮಾತುಗಳು ಕೇಳಿ ಬರುತ್ತಿದೆ. ಸದ್ಯ ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.