ಮಂಗಳೂರು: ಕೆಪಿಟಿ, ನಂತೂರು ಹೊಂಡ ಗುಂಡಿಗೆ ಮುಕ್ತಿ ದೊರೆಯುವುದೇ…!?
ಮಂಗಳೂರು ನಂತೂರು ಕೆಪಿಟಿ ಭಾಗದ ರಸ್ತೆಯಲ್ಲಿ ಹೊಂಡ ಗುಂಡಿಯಿಂದ ವಾಹನ ಚಲಾವಣೆ ಅಲ್ಲದೇ ಜನಸಾಮಾನ್ಯರಿಗೆ ನಡೆದಾಡುವ ಪರಿಸ್ಥಿತಿ ಕಷ್ಟಕರವಾಗಿದೆ. ಮಳೆಗಾಲ ಅಲ್ಲದೇ ಬೇಸಿಗೆಕಾಲದಲ್ಲಿ ದೂಳು ತುಂಬಿದ ವಾತಾವರಣ ನಿರ್ಮಾಣವಾಗಿದ್ದು.
ಪ್ರಸ್ತುತ ಹೊಂಡಗಳಿಗೆ ಮುಕ್ತಿ ಕಾಣದೇ ಹಾಗೇ ಇದೆ. ಇಲ್ಲಿ ಅಪಘಾತ ಸಂಭವಿಸಿದರು ಅಧಿಕಾರಿಗಳು ಎಚ್ಚೆತ್ತುಕೊಂಡದ್ದು ಇಲ್ಲ. ಪ್ರಸ್ತುತ ಎಡೆಬಿಡದೆ ಸುರಿಯುವ ಮಳೆಗೆ ಬಹು ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು ಇದನ್ನು ತಾತ್ಕಾಲಿಕವಾಗಿ ಮುಚ್ಚುವ ಯೋಚನೆಯಿಂದ ಖುದ್ದು ಜಿಲ್ಲಾಧಿಕಾರಿಯವರೇ ವೀಕ್ಷಣೆಗೆ ಧಾವಿಸಿದ್ದು ಅಧಿಕಾರಿಗಳ ಜತೆ ರಸ್ತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ