ಪುತ್ತೂರಿನ ಜನಪ್ರಿಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಪೂಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ ಮತ್ತು ನಿಹಾಲ್ ಶೆಟ್ಟಿಯವರು ನಗರಾಭಿವೃದ್ಧಿ ಇಲಾಖೆಯ ಕಮೀಷನರ್ ವೆಂಕಟಾಪತಿಯವರನ್ನು ಭೇಟಿ ಮಾಡಿದರು.
ಪ್ರಸ್ತುತ ಪುತ್ತೂರಿನ ಜನರ ಬಹುಕಾಲದ ಸಮಸ್ಯೆಯಾಗಿರುವ ಕಟ್ ಕನ್ವರ್ಶನ್ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಚರ್ಚೆ ನಡೆಸಿದ್ದು ವಿಶೇಷ ಮುತುವರ್ಜಿ ವಹಸಿ ಸಮಸ್ಯೆ ಪರಿಹರಿಸುವಂತೆ ವಿನಂತಿಸಿದರು.
ಪೂರಕವಾಗಿ ಸ್ಪಂದಿಸಿದ ಕಮೀಷನರ್ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ.