ನರೇಂದ್ರ ಮೋದಿ ಮಂಗಳೂರು ಸಮಾವೇಶ ದಿಡೀರ್ ರದ್ದು. ರೋಡ್ ಶೋ ಮಾತ್ರ ಅವಕಾಶ
ಎಪ್ರಿಲ್ 26 ರಂದು ಚುನಾವಣೆ ನಡೆಯುವ ಕಾರಣ ಪ್ರಚಾರದ ದೃಷ್ಟಿಯಿಂದ ಮಂಗಳೂರಿನಲ್ಲಿ ಎಪ್ರಿಲ್ 14 ರ ಆದಿತ್ಯವಾರ ಮೋದಿ ಸಮಾವೇಶ ಆಯೋಜನೆಗೊಂಡಿತ್ತು. ಆದರೆ ಎಪ್ರಿಲ್ 14 ರಂದು ಸಮಾವೇಶ ದಿಡೀರ್ ರದ್ದುಗೊಂಡಿದ್ದು ಕೇವಲ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ರೋಡ್ ಶೋ ಯಾವ ಮಾರ್ಗಸೂಚಿಯ ಮೂಲಕ ರೀತಿ ನಡೆಯಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.