2013 ರ ಬಿಜೆಪಿ ಸರ್ಕಾರದ ಆದೇಶದಿಂದ ಬಿಜೆಪಿ ಕಾರ್ಯಕರ್ತರೇ ಈಗ ಗೊಂದಲದಲ್ಲಿದ್ದು, ಹಿಂದಿನ ಬಿಜೆಪಿ ಸರಕಾರದ ಆದೇಶವೇ ಈಗಿನ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಕೆಲವೇ ತಿಂಗಳುಗಳಲ್ಲಿ ಹಿಂದುಗಳ ಗಣೇಶೋತ್ಸವ, ಶಾರದೊತ್ಸವ ಹಾಗೂ ಕೃಷ್ಣ ಜನ್ಮಾಷ್ಠಮಿ ಹಬ್ಬಗಳು ಬರುತ್ತಿವೆ. ಪ್ರಸ್ತುತ ದಿನಗಳಲ್ಲಿ ಶಾಲೆಯ ಮೈದಾನಗಳಲ್ಲಿ ಹಬ್ಬಗಳನ್ನು ಆಚರಿಸಲು ಅನುಮತಿ ನೀಡುವಂತಿಲ್ಲ ಎಂದು 2023 ರಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದು. ಇದರ ತರುವಾಯ ಬಿಜೆಪಿ ಯುವ ಮೋರ್ಚ ಅಯೋಜನೆಯಲ್ಲಿ ದಕ್ಷಿಣ ಮಂಗಳೂರು, ಬೆಳ್ತಂಗಡಿ ಭಾಗದಲ್ಲಿ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದೆ. ಆದರೆ ಈ ಆದೇಶ ಹೊಸದೇನಲ್ಲ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗಳೂ ಇದೇ ಆದೇಶ ಮಾಡಲಾಗಿತ್ತು ಇದನ್ನು ತಿಳಿದ ಬಿಜೆಪಿ ಈಗ ಪೇಚಿಗೆ ಸಿಲುಕಿಕೊಂಡಿದೆ.
2024 ರ ಆದೇಶ ಪತ್ರ;
ಆದೇಶದಲ್ಲಿ ಈ ರೀತಿ ಇದೆ.
ಸದ್ಯಕ್ಕೆ ಇದು ಬಿಜೆಪಿ ಸರಕಾರದಲ್ಲೇ ಆದೇಶ ನೀಡಲಾಗಿತ್ತು : 2013ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದು, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ‘ಶಿಕ್ಷಣೇತರ ಚಟುವಟಿಕೆ ನಡೆಸದಂತೆ ಆದೇಶ ಹೊರಡಿಸಿತ್ತು’. ಅದೇ ಆದೇಶದಡಿ ನಿಯಮದಂತೆ ದಕ್ಷಿಣ ಕನ್ನಡ ಶಿಕ್ಷಣಾಧಿಕಾರಿಯವರು ಬಿಇಓ ಮೂಲಕ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಆದರೆ ಅಧಿಕಾರದಲ್ಲಿದ್ದಾಗ ಆದೇಶ ಹೊರಡಿಸಿದ್ದ ಬಿಜೆಪಿಯವರೇ ಈಗ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ವಿವಾದವೂ ಜಿಲ್ಲೆಯಲ್ಲಿ ದಿನ ಹೋದಂತೆ ರಾಜಕೀಯ ಬಣ್ಣ ಪಡೆದುಕೊಂಡಿದೆ. ಭಜನೆಯ ಮೂಲಕ ಯುವ ಮೋರ್ಚ ದಕ್ಷಿಣ ಕನ್ನಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನಂದನ್ ಮಲ್ಯ ಸಿದ್ದರಾಮಯ್ಯರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು. ಬೆಳ್ತಂಗಡಿಯಲ್ಲಿ ಶಶಿರಾಜ್ ಶೆಟ್ಟಿ ಸರಕಾರಿ ಕಛೇರಿಯಲ್ಲಿ ಗಣೇಶೋತ್ಸವ ನಡೆಸುತ್ತೇವೆ ಎಂದು ಸವಾಲೆಸೆದಿದ್ದರು.
2013 ರ ಆದೇಶ ಪತ್ರ;
ರಾಜ್ಯ ಸರಕಾರ 2013 ಮತ್ತು 2023ರ ಆಯ್ತುಕರ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಎಲ್ಲ ಬಿಇಓಗಳಿಗೆ ಜ್ಞಾಪನಾ ಪತ್ರ ಕಳುಹಿಸಲಾಗಿದೆ. ಸರಕಾರದ ಆದೇಶ, ನಿರ್ದೇಶನಗಳನ್ನು ಅಧಿಕಾರಿಗಳಾಗಿ ನಾವು ಅನುಷ್ಠಾನ ಮಾಡಬೇಕಾಗಿದೆ. ಉಳಿದಂತೆ ಈ ವಿಚಾರದಲ್ಲಿ ನಮಗೇನು ಗೊತ್ತಿಲ್ಲ ಎಂದು ದ.ಕ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ವೆಂಕಟೇಶ್ ಪಟಗಾರ ಹೇಳಿದ್ದಾರೆ.
ಈಗ ಕಾರ್ಯಕ್ರಮ ಆಯೋಜನೆ ಮಾಡುವ ಸಂಘಟಕರು ಗೊಂದಲದಲ್ಲಿದ್ದು ಅಧಿಕಾರಿಗಳು ಅನುಮತಿ ನಿರಾಕರಿಸುತ್ತಿರುವುದು ಕಂಡು ಬರುತ್ತಿದೆ.