ಪುತ್ತೂರು: ನೆಹರು ನಗರದಲ್ಲಿ ಮತ್ತೆ ಗಾಂಜಾ ವಾಸನೆ…
ಪೋಲಿಸ್ ಇಲಾಖೆಗೆ ತಲುಪಿಲ್ಲವೇ …? ಗಾಂಜಾ ಮಾರಾಟಗಾರರಿಗೆ ವಿದ್ಯಾರ್ಥಿಗಳೇ ಟಾರ್ಗೆಟ್…!
ಪುತ್ತೂರು ಬೆಳೆಯುತ್ತಿರುವ ನಗರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ ನಂತರ ಪುತ್ತೂರು ಮಲ್ಟಿ ಸಿಟಿಯಾಗಿ ಬೆಳೆಯುತ್ತಿದೆ.
ಪ್ರತಿಷ್ಟಿತ ಕಾಲೇಜು, ಮಹಲ್, ಉದ್ಯಮ ಕೇಂದ್ರಗಳು ಇಲ್ಲಿಯ ಪ್ರಮುಖ ಬಂಡವಾಳ ಮತ್ತು ಜನಾಕರ್ಷಣೆಯಾಗಿದೆ.
ಪುತ್ತೂರಿನಿಂದ ಮಂಗಳೂರು ರಾಜರಸ್ತೆಯಲ್ಲಿ ತೆರಳುವಾಗ ಸಿಗುವ ನೆಹರು ನಗರದಲ್ಲಿ ಮತ್ತೆ ಗಾಂಜಾ ವಾಸನೆ ಬಡಿಯುತ್ತಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಇಲ್ಲಿ ಮುಖ್ಯವಾಗಿ ಹಲವು ಬಾರಿ ಗಾಂಜಾ ಸಮೇತವಾಗಿ ಆರೋಪಿಗಳನ್ನು ಪೋಲೀಸ್ ಹಿಡಿದರು ಕೇಸ್ ಜಡಿದರು ಎರಡು ತಿಂಗಳ ಬಳಿಕ ಮತ್ತೆ ಗಾಂಜಾ ಮಾರಾಟ,ಗಾಂಜಾ ಹಂಚುವುದು ಬೆಳಕಿಗೆ ಬರುತ್ತದೆ. ಇದರಲ್ಲಿ ಮುಖ್ಯವಾಗಿ ಬನ್ನೂರು, ನೆಹರು ನಗರ,ದರ್ಬೆ ಇವರ ಪ್ರಮುಖ ಅಡ್ಡವಾಗಿದೆ. ಇಲ್ಲಿ ಕೇರಳ ನೊಂದಾವಣೆಯ ಕಾರುಗಳು ರಾತ್ರಿ ಹೊತ್ತು ಲಗ್ಗೆ ಇಟ್ಟು ವಿತರಿಸುತ್ತಿದೆ ಎಂಬ ಗುಮಾನಿ ಇದೆ.
ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳೇ ಟಾರ್ಗೆಟ್…..!
ಇದಕ್ಕೆ ಬುಕ್ಕಿಗಳಾಗಿ ಇಲ್ಲಿನ ಸ್ಥಳೀಯರಿದ್ದು ಮುಖ್ಯವಾಗಿ ಇವರಿಗೆ ಸ್ಥಳೀಯವಾಗಿ ತಂಗುವ ವಿದ್ಯಾರ್ಥಿಗಳಿಗೆ ಗಾಂಜಾ ರುಚಿ ತೋರಿಸಿ ಖಡ್ಡಕ್ಕೆ ಬೀಳಿಸುವ ಕಾರ್ಯ ಇಲ್ಲಿ ಸಾಗುತ್ತಿದೆ. ಒಮ್ಮೆ ಗಾಂಜಾ ದಾಸರಾದರೇ ಶ್ರೀಮಂತ ಬಡವ ಎನ್ನದೇ ವಿದ್ಯಾರ್ಥಿಗಳು ಇದನ್ನು ಚಟವಾಗಿ ಪರಿಣಮಿಸಿ’ ಕೊಂಡುಕೊಳ್ಳಲು ಹಣ ಸಿಗದಾಗ ಕಳ್ಳತನ, ದರೋಡೆ ಇಳಿದು ಕೊನೆಗೆ ಸಾವೇ ಅಂತಿಮ ಎನ್ನುವ ತನಕ ತಂದು ನಿಲ್ಲಿಸುತ್ತದೆ ಎಂಬುದನ್ನು ಎಷ್ಟೋ ವರದಿಯಲ್ಲಿ ಓದಿದ್ದೇವೆ. ಇದರಲ್ಲಿ ವಿದ್ಯಾರ್ಥಿನಿಯರು ಇದ್ದರೆ ಎಂಬುದು ನಂಬಲರ್ಹವಾದ ವಿಚಾರವೇ ಸೈ.
ಸಾಂದರ್ಭಿಕ ಚಿತ್ರ:
ಪೋಲಿಸರಿಗೆ ಮಾಹಿತಿ ಇಲ್ಲವೇ…!? ಮಾಹಿತಿ ತಲುಪಿಲ್ಲವೇ.!?
ಪುತ್ತೂರು ಪೋಲಿಸ್ ಎಂದರೇ ಖಡಕ್ ಪೋಲಿಸ್ ಎಂಬ ಹೆಗ್ಗಳಿಕೆ ಇದ್ದ ಕಾರಣ ಹಿಂದ ಇದೇ ಪರಿಸರದಲ್ಲಿ ಗಾಂಜಾವನ್ನು ಹಿಡಿದ ಕೀರ್ತಿ ಪೋಲಿಸರಿಗಿದೆ. ಆದರೆ ಪ್ರಸ್ತುತವಾಗಿ ಗಾಂಜಾ ಪರಿಮಳದ ಮಾಹಿತಿ ಪೋಲಿಸರಿಗೆ ತಲುಪಿಲ್ಲವೇ ಎಂಬುದು ಬಹು ದೊಡ್ಡ ಪ್ರಶ್ನೆಯಾಗಿದೆ. ಒಂದೊಮ್ಮೆ ಈ ಭಾಗದಲ್ಲಿ ಗಸ್ತು ಪೊಲೀಸ್ ಎಂದು 112 ಪೋಲಿಸ್ ಒಂದು ಸುತ್ತು ಹಾಕಿ ಹೋಗುತ್ತಾರೆ ಹೊರತು ಯಾವುದೇ ತನಿಖೆಯಾಗಲಿ, ವಿಚಾರಣೆ ನಡೆಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ಇಲ್ಲಿ ಕೇರಳ ನೊಂದಾವಣೆಯ ವಾಹನ ತಿರುಗುತ್ತಿದ್ದರು, ಜೊತೆಗೆ ರಾತ್ರಿ ಒಂದು,ಎರಡು ಗಂಟೆಯ ತನಕ ಅಂಗಡಿಯ ಎದುರಲ್ಲಿ ಗುಂಪಾಗಿ ರಂಪಾಟ ಮಾಡಿದರು ಕೇಳುವವರಿಲ್ಲದಾಗಿದೆ. ಇದರ ಜೊತೆಗೆ ಹೊಸ ಹೊಸ ಬೈಕ್ ಗಳ ವೀಲಿಂಗ್, ಎಲ್‌ಇಡಿ ಬಲ್ಬ್ ಡಿಮ್ ಡೀಪ್ ಮಾಡದೇ ಇರುವುದು ಕಾಣಬಹುದಾಗಿದೆ.
ಪುಂಡಾರಿಗೆ ವರದಾನವಾದ ಕೆಟ್ಟು ನಿಂತ ಸಿ ಸಿ ಕ್ಯಾಮರಾ..!
ಪುತ್ತೂರು ಪೇಟೆಯಲ್ಲಿ ಎಲ್ಲೂ ಕೂಡ ಸಿಸಿ ಕ್ಯಾಮರಾ ಇಲ್ಲದೇ ಇಂತಹ ಘಟನೆಗಳು ಎಗ್ಗಿಲ್ಲದೇ ನಡೆಯುತ್ತಿದೆ. ಹಿಂದೊಮ್ಮೆ ಮಹೇಶ್ ಪ್ರಸಾದ್ ಚಾರ್ಜ್ ಇರುವಾಗ ಇಡೀ ಪೇಟೆಯಲ್ಲಿ ಕ್ಯಾಮರಾ ಅಳವಡಿಸಿದ್ದರು ಸಹ ನಂತರದಲ್ಲಿ ಸಿಡಿಲು,ಮಳೆಗೆ ಕೆಟ್ಟು ಹೋದ ಕ್ಯಾಮರಾಗಳನ್ನು ಸರಿ ಮಾಡಲು ಮೂಹೂರ್ತವೇ ಬಂದಿಲ್ಲ ಎನ್ನುವುದು ದೊಡ್ಡ ಸಂಗತಿಯೇ ವಿಪರ್ಯಾಸ.
ಪ್ರಮುಖವಾಗಿ ಇದರ ಬಗ್ಗೆ ಶಾಸಕರು ಮುಖ್ಯವಾಗಿ ಮುತುವರ್ಜಿ ವಹಿಸಿಕೊಂಡರೇ ದರ್ಬೆ, ನೆಹರು ನಗರ, ಬನ್ನೂರು ಭಾಗದಲ್ಲಿ ಪೋಲಿಸ್ ತನಿಖಾ ಕೇಂದ್ರ ಅಥವಾ ಗಸ್ತು ಕೇಂದ್ರ ನಿರ್ಮಿಸುವುದು, ಈಶ್ವರಮಂಗಲ, ಕಬಕ, ಉಪ್ಪಿನಂಗಡಿ ಭಾಗದ ಪರಿಸರದಲ್ಲಿ ಸಂದೇಹ ಇರುವ ಜೊತೆಗೆ ಎಲ್ಲಾ ವಾಹನಗಳನ್ನು ಸರಿಯಾದ ರೀತಿಯಲ್ಲಿ ತಪಾಸಣೆ ನಡೆಸಿ ದಾಖಲೆ ಇಟ್ಟುಕೊಂಡರೆ, ಸಿಸಿ ಕ್ಯಾಮರಾ ಅಳವಡಿಕೆಯ ಬಗ್ಗೆ ಕಟ್ಟಡ ಮಾಲೀಕರಿಗೆ ಮತ್ತು ಅಂಗಡಿ ಮಾಲೀಕರಿಗೆ ಸಭೆ ಕರೆದು ವಿನಂತಿಸಿದರೆ, ಸರಕಾರದಿಂದ ಪ್ರಮುಖ ಸರ್ಕಲ್ ಗಳಲ್ಲಿ ಸಿಸಿ ಅಳವಡಿಕೆ ಬಗ್ಗೆ ಸಿಸಿ ಕ್ಯಾಮರಾ ರಿಪೇರಿ ನಡೆಸಿದರೆ ಜೊತೆಗೆ ಕೆಲವೊಂದು ಪ್ರಮುಖ ಜಾಗಗಳಲ್ಲಿ ಗಸ್ತು ಪೋಲಿಸ್ ನಿಯೋಜನೆ ಮಾಡಿದರೆ, ಜೊತೆಗೆ ಮನೆಯವರು ಎಚ್ಚರಿಕೆಯಿಂದ ಜಾಗ್ರತೆ ವಹಿಸಿಕೊಳ್ಳುವುದರ ಮೂಲಕ ಬಹು ದೊಡ್ಡ ಗಾಂಜಾ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು ಎಂಬುದು ಪ್ರಜಾಧ್ವನಿ ನ್ಯೂಸ್ ನ ಈ ವಿಶ್ಲೇಷಣ ವರದಿಯ ಚಿಂತನೆಯಾಗಿದೆ.