• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಇಡೀ ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ  ಮಹಾ ಪ್ರವಾಹಕ್ಕೆ  50 ವರ್ಷ,ಅವತ್ತು ಇಡೀ ಉಪ್ಪಿನಂಗಡಿ ಜಲಮಯವಾಗಿತ್ತು.

ಇಡೀ ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಮಹಾ ಪ್ರವಾಹಕ್ಕೆ 50 ವರ್ಷ,ಅವತ್ತು ಇಡೀ ಉಪ್ಪಿನಂಗಡಿ ಜಲಮಯವಾಗಿತ್ತು.

July 26, 2024
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಬೆಳ್ತಂಗಡಿ ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ವತಿಯಿಂದ ಕೇಸು ದಾಖಲು

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಬೆಳ್ತಂಗಡಿ ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ವತಿಯಿಂದ ಕೇಸು ದಾಖಲು

January 8, 2026
ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

January 8, 2026
ಪುಂಜಾಲಕಟ್ಟೆ – ಪುರಿಯ ರಸ್ತೆ ನಿರ್ಮಾಣಕ್ಕೆ ರೂ. 50ಲಕ್ಷ  ಅನುದಾನ ಮಂಜೂರು: ಹರೀಶ್ ಪೂಂಜ

ಪುಂಜಾಲಕಟ್ಟೆ – ಪುರಿಯ ರಸ್ತೆ ನಿರ್ಮಾಣಕ್ಕೆ ರೂ. 50ಲಕ್ಷ ಅನುದಾನ ಮಂಜೂರು: ಹರೀಶ್ ಪೂಂಜ

January 8, 2026
ಜ.10ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ: 2 ಲಕ್ಷ ಜನ ಸೇರುವ ನಿರೀಕ್ಷೆ

ಜ.10ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ: 2 ಲಕ್ಷ ಜನ ಸೇರುವ ನಿರೀಕ್ಷೆ

January 8, 2026
ಕೋಡಿಂಬಾಡಿ ಕೃಷ್ಣಗಿರಿ-ಚೀಮುಳ್ಳು ಗುಡ್ಡ ಗೇರು ನಡುತೋಪುನಲ್ಲಿ ಬೆಂಕಿ ಅವಘಡ

ಕೋಡಿಂಬಾಡಿ ಕೃಷ್ಣಗಿರಿ-ಚೀಮುಳ್ಳು ಗುಡ್ಡ ಗೇರು ನಡುತೋಪುನಲ್ಲಿ ಬೆಂಕಿ ಅವಘಡ

January 8, 2026
ಸುಳ್ಯ ಶಾಸಕರ ಬಗ್ಗೆ ಸಾಮಾಜಿಗ ಜಾಲತಾಣದಲ್ಲಿ ಮಾನಹಾನಿ ಪೋಸ್ಟ್ ಮಹಿಳಾ ಮೋರ್ಚಾದಿಂದ ಖಂಡನೆ

ಸುಳ್ಯ ಶಾಸಕರ ಬಗ್ಗೆ ಸಾಮಾಜಿಗ ಜಾಲತಾಣದಲ್ಲಿ ಮಾನಹಾನಿ ಪೋಸ್ಟ್ ಮಹಿಳಾ ಮೋರ್ಚಾದಿಂದ ಖಂಡನೆ

January 7, 2026
ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ; ಸಂಸದ ಕ್ಯಾ. ಚೌಟ ತೀವ್ರ ಖಂಡನೆ

ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ; ಸಂಸದ ಕ್ಯಾ. ಚೌಟ ತೀವ್ರ ಖಂಡನೆ

January 7, 2026
ಹಣಕ್ಕಾಗಿ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಂದೆ!

ಹಣಕ್ಕಾಗಿ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಂದೆ!

January 7, 2026
ಬೆಳ್ತಂಗಡಿ ಕಲ್ಮಂಜ : ನಿಡಿಗಲ್ ಅಂಗನವಾಡಿ, ಸ.ಹಿ.ಪ್ರಾಥಮಿಕ ಹಾಗೂ ಪ್ರೌಢಶಾಲಾ ಸರ್ವಾoಗೀಣ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜಾರಿಂದ ಒಟ್ಟು 47.15 ಲಕ್ಷ ಅನುದಾನ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ವಿವಿಧೆಡೆ ಕಾಲುಸಂಕ ನಿರ್ಮಾಣಕ್ಕೆ ರೂ.1.00ಕೋಟಿ ಅನುದಾನ ಮಂಜೂರು: ಹರೀಶ್ ಪೂಂಜ

January 7, 2026
ಮೈಸೂರು: ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸರ ಸುಧೀರ್ಘ ಅವಧಿಯ ಸಿ ಎಂ ಸ್ಥಾನದ ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ

ಮೈಸೂರು: ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸರ ಸುಧೀರ್ಘ ಅವಧಿಯ ಸಿ ಎಂ ಸ್ಥಾನದ ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ

January 6, 2026
ಬಹಿರ್ದೆಸೆಗೆಂದು ಹೋಗಿದ್ದ ಬಾಲಕಿಯ ಮಾನಭಂಗ ಯತ್ನ- ಪ್ರಕರಣ ದಾಖಲು

ಬಹಿರ್ದೆಸೆಗೆಂದು ಹೋಗಿದ್ದ ಬಾಲಕಿಯ ಮಾನಭಂಗ ಯತ್ನ- ಪ್ರಕರಣ ದಾಖಲು

January 6, 2026
ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ: ಪ್ರಧಾನಿ ನರೇಂದ್ರ ಮೋದಿಜೀ ಆಡಳಿತ ಕಾರ್ಯವೈಖರಿ ಮೆಚ್ಚಿ ನಿವೃತ ಸರ್ಕಾರಿ ಅಧಿಕಾರಿಗಳಾದ ಪದ್ಮ ಕುಮಾರ್, ಪ್ರಸನ್ನ ಕುಮಾರ್ ಬಿಜೆಪಿ ಸೇರ್ಪಡೆ

ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆ: ಪ್ರಧಾನಿ ನರೇಂದ್ರ ಮೋದಿಜೀ ಆಡಳಿತ ಕಾರ್ಯವೈಖರಿ ಮೆಚ್ಚಿ ನಿವೃತ ಸರ್ಕಾರಿ ಅಧಿಕಾರಿಗಳಾದ ಪದ್ಮ ಕುಮಾರ್, ಪ್ರಸನ್ನ ಕುಮಾರ್ ಬಿಜೆಪಿ ಸೇರ್ಪಡೆ

January 6, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, January 8, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಬೆಳ್ತಂಗಡಿ ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ವತಿಯಿಂದ ಕೇಸು ದಾಖಲು

    ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಬೆಳ್ತಂಗಡಿ ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ವತಿಯಿಂದ ಕೇಸು ದಾಖಲು

    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

    ಪುಂಜಾಲಕಟ್ಟೆ – ಪುರಿಯ ರಸ್ತೆ ನಿರ್ಮಾಣಕ್ಕೆ ರೂ. 50ಲಕ್ಷ  ಅನುದಾನ ಮಂಜೂರು: ಹರೀಶ್ ಪೂಂಜ

    ಪುಂಜಾಲಕಟ್ಟೆ – ಪುರಿಯ ರಸ್ತೆ ನಿರ್ಮಾಣಕ್ಕೆ ರೂ. 50ಲಕ್ಷ ಅನುದಾನ ಮಂಜೂರು: ಹರೀಶ್ ಪೂಂಜ

    ಜ.10ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ: 2 ಲಕ್ಷ ಜನ ಸೇರುವ ನಿರೀಕ್ಷೆ

    ಜ.10ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ: 2 ಲಕ್ಷ ಜನ ಸೇರುವ ನಿರೀಕ್ಷೆ

    ಕೋಡಿಂಬಾಡಿ ಕೃಷ್ಣಗಿರಿ-ಚೀಮುಳ್ಳು ಗುಡ್ಡ ಗೇರು ನಡುತೋಪುನಲ್ಲಿ ಬೆಂಕಿ ಅವಘಡ

    ಕೋಡಿಂಬಾಡಿ ಕೃಷ್ಣಗಿರಿ-ಚೀಮುಳ್ಳು ಗುಡ್ಡ ಗೇರು ನಡುತೋಪುನಲ್ಲಿ ಬೆಂಕಿ ಅವಘಡ

    ಸುಳ್ಯ ಶಾಸಕರ ಬಗ್ಗೆ ಸಾಮಾಜಿಗ ಜಾಲತಾಣದಲ್ಲಿ ಮಾನಹಾನಿ ಪೋಸ್ಟ್ ಮಹಿಳಾ ಮೋರ್ಚಾದಿಂದ ಖಂಡನೆ

    ಸುಳ್ಯ ಶಾಸಕರ ಬಗ್ಗೆ ಸಾಮಾಜಿಗ ಜಾಲತಾಣದಲ್ಲಿ ಮಾನಹಾನಿ ಪೋಸ್ಟ್ ಮಹಿಳಾ ಮೋರ್ಚಾದಿಂದ ಖಂಡನೆ

    ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ; ಸಂಸದ ಕ್ಯಾ. ಚೌಟ ತೀವ್ರ ಖಂಡನೆ

    ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ; ಸಂಸದ ಕ್ಯಾ. ಚೌಟ ತೀವ್ರ ಖಂಡನೆ

    ಬೆಳ್ತಂಗಡಿ ಕಲ್ಮಂಜ : ನಿಡಿಗಲ್ ಅಂಗನವಾಡಿ, ಸ.ಹಿ.ಪ್ರಾಥಮಿಕ ಹಾಗೂ ಪ್ರೌಢಶಾಲಾ ಸರ್ವಾoಗೀಣ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜಾರಿಂದ ಒಟ್ಟು 47.15 ಲಕ್ಷ ಅನುದಾನ

    ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ವಿವಿಧೆಡೆ ಕಾಲುಸಂಕ ನಿರ್ಮಾಣಕ್ಕೆ ರೂ.1.00ಕೋಟಿ ಅನುದಾನ ಮಂಜೂರು: ಹರೀಶ್ ಪೂಂಜ

    ಬಹಿರ್ದೆಸೆಗೆಂದು ಹೋಗಿದ್ದ ಬಾಲಕಿಯ ಮಾನಭಂಗ ಯತ್ನ- ಪ್ರಕರಣ ದಾಖಲು

    ಬಹಿರ್ದೆಸೆಗೆಂದು ಹೋಗಿದ್ದ ಬಾಲಕಿಯ ಮಾನಭಂಗ ಯತ್ನ- ಪ್ರಕರಣ ದಾಖಲು

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಜಿಲ್ಲೆ

ಇಡೀ ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಮಹಾ ಪ್ರವಾಹಕ್ಕೆ 50 ವರ್ಷ,ಅವತ್ತು ಇಡೀ ಉಪ್ಪಿನಂಗಡಿ ಜಲಮಯವಾಗಿತ್ತು.

by ಪ್ರಜಾಧ್ವನಿ ನ್ಯೂಸ್
July 26, 2024
in ಜಿಲ್ಲೆ, ದಕ್ಷಿಣ ಕನ್ನಡ, ರಾಜ್ಯ
0
ಇಡೀ ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ  ಮಹಾ ಪ್ರವಾಹಕ್ಕೆ  50 ವರ್ಷ,ಅವತ್ತು ಇಡೀ ಉಪ್ಪಿನಂಗಡಿ ಜಲಮಯವಾಗಿತ್ತು.
8
SHARES
23
VIEWS
ShareShareShare

1974ರ ಜು. 26ರಂದು ಕರಾವಳಿಯಲ್ಲಿ ಗಂಡಾಂತರಕಾರಿ ವಿದ್ಯಮಾನವೊಂದು ಜರಗಿತ್ತು. ಮೂರು ದಿನಗಳಿಂದ ಎಡೆಬಿಡದೆ ಸುರಿದ ಕುಂಭದ್ರೋಣ ಮಳೆ ಇಡೀ ಕರಾವಳಿ ಯನ್ನು ಮುಳುಗಿಸಿತ್ತು. ನೇತ್ರಾವತಿ, ಕುಮಾರಧಾರೆ, ಗುರುಪುರ, ಸ್ವರ್ಣಾ, ಸೀತಾ ಸೇರಿ ದಂತೆ ಎಲ್ಲ ನದಿಗಳು ಉಕ್ಕೇರಿ ಹರಿದು ಸಮೀ ಪದ ಪೇಟೆ ಪಟ್ಟಣಗಳನ್ನು ಆಪೋಷನ ತೆಗೆದು ಕೊಂಡಿದ್ದವು. ಆವತ್ತು ಸಾವಿರಾರು ಮನೆಗಳು ಉರುಳಿದ್ದವು, ಜೀವಹಾನಿ ಸಂಭವಿಸಿತ್ತು. ಇವ ತ್ತಿಗೂ ಒಂದು ಪೀಳಿಗೆಯ ಜನ ಆ ಮಹಾ ಪ್ರವಾ ಹವನ್ನು ನೆನಪಿಸಿಕೊಂಡು ನಡುಗುತ್ತಾರೆ. ಅಂಥ 1974ರ ಮಾರಿ ಬೊಲ್ಲಕ್ಕೆ ಇಂದಿಗೆ (ಜು. 26) ಐವತ್ತು ವರ್ಷ. ಆ ಮಾರಿ ಬೊಲ್ಲಕ್ಕೆ ಸಾಕ್ಷಿಯಾದ ಕೆಲವರು ನೆನಪುಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ.

Muliya

ಜಾಹೀರಾತು

1923ರಲ್ಲಿ ಮೊದಲ ಮಾರಿ ಬೊಲ್ಲ.

ಒಂದು ಶತಮಾನದ ಹಿಂದೆ ಅಂದರೆ 1923ರಲ್ಲಿಯೇ ಕರಾವಳಿಯ ಅತೀ ದೊಡ್ಡ ಪ್ರವಾಹ ಸೃಷ್ಟಿಯಾಗಿತ್ತು. ಆಗಲೂ ಇದೇ ರೀತಿ
ನದಿಗಳು ಉಕ್ಕಿ ತೀರದ ಪಟ್ಟಣಗಳನ್ನು ಮುಳು ಗಿಸಿದ್ದವು. ಆ ಮಾರಿ ಬೊಲ್ಲಕ್ಕೆ ಸಂಬಂಧಿಸಿ ಕುರುಹುಗಳು, ಐತಿಹ್ಯಗಳು ಸಿಗುತ್ತವೆ. ಆದರೆ, ಕಣ್ಣಾರೆ ಕಂಡವರು ಈಗ ಸಿಗುವುದು ಕಷ್ಟ. ಆದರೆ, 1974ರ ಮಾರಿ ಬೊಲ್ಲಕ್ಕೆ ಚಿತ್ರ ಸಾಕ್ಷಿಗಳಿವೆ. ಬೊಲ್ಲದ ಭಯಾನಕತೆಯನ್ನು ಅನುಭವಿಸಿದ ಒಂದು ಪೀಳಿಗೆಯೇ ನಮ್ಮ ಜತೆ ಗಿದೆ. ಈಗಲೂ ಜೋರಾಗಿ ಮಳೆ ಬಂದಾಗ ಅವರ ನೆನಪು 1974ಕ್ಕೆ ಓಡುತ್ತದೆ.

1974: ಎಲ್ಲೆಲ್ಲಿ ಅತೀ ಹೆಚ್ಚು ಹಾನಿ?
*ನೇತ್ರಾವತಿ-ಕುಮಾರಧಾರ ಸಂಗಮದ ಉಪ್ಪಿನಂಗಡಿ ಪಟ್ಟಣ.
*ನೇತ್ರಾವತಿ ತೀರದ ಪಾಣೆ ಮಂಗಳೂರು, ಬಂಟ್ವಾಳ
*ಗುರುಪುರ ನದಿ ತೀರದ ಜೋಕಟ್ಟೆ ಪ್ರದೇಶ
*ಸ್ವರ್ಣಾ ನದಿ ತೀರದ ಉಪ್ಪೂರು, ಕಲ್ಯಾಣಪುರ, ಹೆರ್ಗ
*ಉಡುಪಿ ನಗರದಲ್ಲೂ ಸಾಕಷ್ಟು ನಾಶ, ನಷ್ಟವಾಗಿತ್ತು
*ಉದ್ಯಾವರ, ಕಾಪು ಪ್ರದೇಶದಲ್ಲಿ ಮನೆಗಳೇ ಮುಳುಗಿದ್ದವು
*ಕುಂದಾಪುರ ತಾ|ನ 9 ಗ್ರಾಮಗಳು ನೀರಿನೊಳಗಿದ್ದವು!
ಇಡೀ ಉಪ್ಪಿನಂಗಡಿ ನೀರಲ್ಲಿ ಮುಳುಗಿತ್ತು!
ಆವತ್ತು ಬೆಳಗ್ಗೆ ನೇತ್ರಾವತಿ-ಕುಮಾರಧಾರೆ ಸಂಗಮ ಆಗಿತ್ತು. ಸಾಮಾನ್ಯವಾಗಿ ಸಂಗಮದ ಬಳಿಕ ನೀರು ಇಳಿಯುತ್ತದೆ. ಆದರೆ, ಆ ದಿನ ಏರುತ್ತಲೇ ಹೋಯಿತು. ಸಂಜೆ ಹೊತ್ತಿಗೆ ನಮ್ಮ ಮನೆಯಂಗಳಕ್ಕೆ ಬಂದ ನೀರು ರಾತ್ರಿಯಾಗುತ್ತಿ ದ್ದಂತೆಯೇ ಮನೆಯೊಳಗೇ ನುಗ್ಗಿತು. ಆಗ ದೋಣಿ ಮೂಲಕ ನಮ್ಮನ್ನು ಉಪ್ಪಿನಂಗಡಿ ಹೈಸ್ಕೂಲ್‌ ಕಟ್ಟಡಕ್ಕೆ ಸ್ಥಳಾಂತರಿಸಿದರು: ಎನ್ನುತ್ತಾರೆ ಉಪ್ಪಿನಂಗಡಿಯಲ್ಲಿ ವೈದ್ಯರಾಗಿರುವ ಡಾ.ಯತೀಶ್‌ ಶೆಟ್ಟಿ

ನಮ್ಮದು ಹೊಸ ಮನೆ. 1972ರಲ್ಲಿ ನಿರ್ಮಾಣ ಆಗಿತ್ತು. ನಾನಾಗ ಪ್ರಥಮ ಪಿಯುಸಿ ವಿದ್ಯಾರ್ಥಿ. ಮನೆಯಲ್ಲಿ ಒಟ್ಟು ಆರು ಮಂದಿ ಇದ್ದೆವು. ನಮ್ಮೆಲ್ಲರನ್ನು ದೋಣಿ ಮೂಲಕವೇ ರಕ್ಷಿಸಿದರು. ಇಂತಹ ಪ್ರವಾಹವೊಂದು ಬಂದಿತ್ತು ಅನ್ನುವುದನ್ನು ಈಗಿನ ಪೀಳಿಗೆ ನಂಬುವುದೇ ಕಷ್ಟ. ಇಡೀ ಪೇಟೆ ನೆರೆಯಿಂದ ಮುಳುಗಿ ಹೋಗಿತ್ತು. ಸಿಂಡಿಕೇಟ್‌ ಬ್ಯಾಂಕ್‌ ಇದ್ದ ಸ್ಥಳದ ತನಕವೂ ನೆರೆ ನೀರು ಆವರಿಸಿತ್ತು. ನಮ್ಮ ಮನೆ ಅರ್ಧ ಮುಳುಗಿತ್ತು. ಉಪ್ಪಿನಂಗಡಿ ದೇವಾಲಯದ ಗರ್ಭಗುಡಿ ಒಳಗೂ ನೀರು ಪ್ರವೇಶಿಸಿತ್ತು ಎಂದು ಯತೀಶ್‌ ಶೆಟ್ಟಿ ನೆನಪಿಸಿಕೊಂಡರು.
ನನ್ನ ತಂದೆ ಶೀನಪ್ಪ ಶೆಟ್ಟಿ ಅವರು ಹಳೆ ಬಸ್‌ ನಿಲ್ದಾಣದ ಬಳಿ ಬಾಡಿಗೆ ಕಟ್ಟಡದಲ್ಲಿ ಶಾಪ್‌ ಹೊಂದಿದ್ದರು. ನೆರೆಯಿಂದ ಆ ಕಟ್ಟಡ ಪೂರ್ತಿ ಧರೆಶಾಹಿಯಾಯಿತು. ಜತೆಗೆ ಕಟ್ಟಡ ಮಾಲಕ ನರಸಿಂಹ ಪೈ ಅವರ ಮನೆಯು ಕುಸಿದಿತ್ತು ಎಂದು ಡಾ| ಯತೀಶ್‌ ಶೆಣೈ ನೆನಪಿಸಿಕೊಂಡಿದ್ದಾರೆ.
ಬಿದ್ದ ಮನೆಗಳು,ಎಳೆ ಮಕ್ಕಳ ರಕ್ಷಣೆ
ಮಳೆ ಮತ್ತು ನೆರೆಯಿಂದಾಗಿ ಮಜೂರು, ಪಾದೂರು, ಕರಂದಾಡಿ ಪರಿಸರದಲ್ಲಿ ಹತ್ತಾರು ಮನೆಗಳು ಧರಾಶಾಯಿಯಾಗಿದ್ದವು. ನೆರೆ ಹೆಚ್ಚಿ ತೀವ್ರ ಅಪಾಯಕ್ಕೆ ಸಿಲುಕಿದ್ದ ಮಂಜುನಾಥ ನಾಯ್ಕ್‌ ಮತ್ತು ಅವರ ಮನೆಯಲ್ಲಿದ್ದ ಎಳೆಯ ಮಕ್ಕಳು ಸೇರಿದಂತೆ ಹಲವರನ್ನು ರಕ್ಷಿಸಿದ್ದು ಈಗಲೂ ನೆನಪಿಗೆ ಬರುತ್ತದೆ ಎನ್ನುತ್ತಾರೆ ಪಾದೂರು ಒಡಿಪೆನಿ ನಿವಾಸಿ ರತ್ನಾಕರ ಶೆಟ್ಟಿ ಅವರು. ಆವತ್ತು ಜೀವಭಯದಿಂದ ಒದ್ದಾಡುತ್ತಿದ್ದ ನಾನು ಮತ್ತು ಸಹೋದರ, ಸಹೋದರಿ ಸೇರಿದಂತೆ 7 ಮಂದಿಯನ್ನು ಊರಿನ ಹಿರಿಯರಾದ ರತ್ನಾಕರ ಶೆಟ್ಟಿ, ಸಂಜೀವ ಗುರ್ಮೆ ಮೊದಲಾದವರು ಹೆಗಲಿನಲ್ಲಿ ಹೊತ್ತುಕೊಂಡು ಹೋಗಿ ರಕ್ಷಿಸಿದ್ದರು ಎಂದು ಚಂದ್ರನಗರದ ಪದ್ಮಾವತಿ ನಾಯ್ಕ್‌ ನೆನಪಿಸಿಕೊಂಡಿದ್ದಾರೆ. ಅಂದು ನಾಗರ ಪಂಚಮಿಯಾಗಿದ್ದು ಎದೆ ಮಟ್ಟದವರೆಗೆ ನೀರಿನಲ್ಲಿ ನಡೆದುಕೊಂಡೇ ಹೋಗಿ ನಾಗ ದೇವರಿಗೆ ತನು ಅರ್ಪಿಸಿದ್ದೆವು ಎಂದರು ಜಗದೀಶ್‌ ರಾವ್‌ ಗುರ್ಮೆ.

camera center ad

ಜಾಹೀರಾತು

ಉಡುಪಿಯಲ್ಲಿ ಹಲವು ಮನೆ ನಾಶ
ಉಡುಪಿಯ ಶೆಟ್ಟಿಬೆಟ್ಟು ಪ್ರದೇಶದಲ್ಲಿ ಹತ್ತಾರು ಮಂದಿ ಅಂದು ಮನೆ ಕಳೆದುಕೊಂಡಿದ್ದರು. ಎಮ್ಮೆಗಳು, ಇತರ ಜಾನುವಾರುಗಳು, ಹಾರ್ಮೋನಿಯಂ ಸೇರಿದಂತೆ ನಾನಾ ವಸ್ತುಗಳು ನೆರೆಯಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಅಸ ಹಾಯಕವಾಗಿ ನೋಡಿದ್ದನ್ನು ಹಲವರು ನೆನ ಪಿಸಿಕೊಂಡಿದ್ದಾರೆ.
ಏನೇನು ನಾಶ? ಎಷ್ಟು ನಷ್ಟ ?
6 ಜನ ಪ್ರಾಣ ಕಳೆದುಕೊಂಡವರು
5000 ಪೂರ್ಣ ನಾಶವಾದ ಮನೆ
4000 ಭಾಗಶ: ನಾಶವಾದ ಮನೆ
11,000 ನಿರ್ವಸಿತರಾದವರು
172 ಮೃತ ಜಾನುವಾರುಗಳು
3500 ಹೆಕ್ಟೇರ್‌ ಕೃಷಿ ನಾಶ
2.72 ಕೋಟಿ ರೂ. ಒಟ್ಟು ನಷ್ಟ
ವಸ್ತುಗಳನ್ನು ಮೊದಲೇ ಸಾಗಿಸಿದ್ದೆವು
ನೇತ್ರಾವತಿ ನದಿ ರೌದ್ರ ರೂಪ ತಾಳಿದ್ದರಿಂದ ಪಾಣೆಮಂಗಳೂರು-ಬಂಟ್ವಾಳ ಪೇಟೆಯಲ್ಲಿ ಅಳೆತ್ತರಕ್ಕೆ ನೀರು ತುಂಬಿತ್ತು. ನೆರೆಯ ಸೂಚನೆ ಮೊದಲೇ ಲಭಿಸಿದ್ದ ಕಾರಣ ಅಗತ್ಯ ಸರಕುಗಳನ್ನು ಹೊತ್ತುಕೊಂಡೇ ಸುರಕ್ಷಿತ ಜಾಗಕ್ಕೆ ಹೋಗಿದ್ದೆವು ಎನ್ನುತ್ತಾರೆ 80ರ ಹರೆಯದ ಪಾಣೆಮಂಗಳೂರಿನ ಎನ್‌. ಪಾಂಡುರಂಗ ಪ್ರಭುಗಳು. ಆಗ ಪ್ರಭುಗಳು ರಿಕ್ಷಾ ಚಾಲಕರಾಗಿದ್ದರು. ನಾವು ಅಗತ್ಯ ವಸ್ತುಗಳನ್ನು ಹಿಡಿದುಕೊಂಡು ಮನೆ ಬಿಟ್ಟಿದ್ದೆವು. ಆದರೆ ನೆರೆ ಇಳಿದ ಬಳಿಕ ಹೋಗಿ ನೋಡಿದಾಗ ನದಿ ಕಿನಾರೆಯಲ್ಲಿದ್ದ ಹಲವರ ಮನೆ ಪಂಚಾಂಗ ಸಮೇತ ಸಂಪೂರ್ಣ ನಾಶವಾಗಿತ್ತು. ಪಾಣೆಮಂಗಳೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಮನೆಗಳನ್ನು ಕಳೆದುಕೊಂಡಿದ್ದರು. ಇಡೀ ಸಮಾಜ ಮುಂದೆ ನಿಂತು ಅವರಿಗೆ ಪುನ ರ್ವಸತಿ ಕಲ್ಪಿಸಿತು ಎನ್ನುತ್ತಾರೆ ಪ್ರಭುಗಳು.

ದೋಣಿಗಳು ಕೊಚ್ಚಿ ಹೋಗಿದ್ದವು
ನಾನಾಗ 10ನೇ ಕ್ಲಾಸ್‌. ಆವತ್ತು ಕಟ್ಟಿ ಹಾಕಿದ್ದ ದೋಣಿಗಳು ಕೊಚ್ಚಿಕೊಂಡು ಹೋಗಿದ್ದವು. ನೆರೆ ಒಂದೇ ಸಮನೆ ಏರುತ್ತಿತ್ತು. ಜನರನ್ನು ದೋಣಿಗಳ ಮೂಲಕ ರಕ್ಷಿಸಲಾಗಿತ್ತು. ಉದ್ಯಾವರ ಗ್ರಾಮದ ಅಂಕುದ್ರು ಭಟ್ರ ಮನೆಯ ವಿಶಾಲವಾದ ಹಟ್ಟಿಯಲ್ಲಿ ಸುಮಾರು 3-4 ಕುಟುಂಬಗಳು ಆಶ್ರಯ ಪಡೆದಿತ್ತು.
*ಪ್ರೊ|ವಿ.ಕೆ. ಉದ್ಯಾವರ
ಹೊಳೆದಂಡೆಗೆ ಮಡಲೇ ತಡೆ!
ನನಗೆ ಆಗ ಸುಮಾರು 20 ವರ್ಷ ಪ್ರಾಯ. ಕಟಪಾಡಿ ಏಣಗುಡ್ಡೆ ಗ್ರಾಮದ ವೆಸ್ಟ್‌ ಕೋಸ್ಟ್‌ ರಸ್ತೆಯ (ಹಳೆ ಎಂಬಿಸಿ ರಸ್ತೆ) ಪಶ್ಚಿಮ ಭಾಗದ ಕುದ್ರು ಭಾಗದಲ್ಲಿ ತೀವ್ರ ನೆರೆ ಬಾಧಿತವಾಗಿತ್ತು. ಆ ಭಾಗದ ಸುಮಾರು 10 ಕುಟುಂಬ ತೇಕಲ ತೋಟದಲ್ಲಿದ್ದ ಸುತ್ತು ಮಡಲಿನ ನಮ್ಮ ಮನೆ ಹಾಗೂ ವಿಶಾಲವಾದ ಹಟ್ಟಿಯಲ್ಲಿ ಆಶ್ರಯವನ್ನು ಪಡೆದಿದ್ದರು. ಒಬ್ಬಾಕೆಯ ಹೆರಿಗೆಯೂ ಅಲ್ಲೇ ನಡೆದಿತ್ತು. ಹೊಳೆಗೆ ಮಣ್ಣಿನ ದಂಡೆ ಮಡಲುಗಳೇ ತಡೆಯಾಗಿತ್ತೇ ವಿನಃ ಈಗಿನಂತೆ ನದಿ ದಂಡೆ ಇರಲಿಲ್ಲ.

ashwinistudioputtur

ಜಾಹೀರಾತು

SendShare3Share
Previous Post

ಪುತ್ತೂರು: ನೆಹರು ನಗರದಲ್ಲಿ ಮತ್ತೆ ಗಾಂಜಾ ವಾಸನೆ ಬರುತ್ತಿದೆಯಂತೆ……!? ಪೋಲಿಸ್ ಇಲಾಖೆಗೆ ತಲುಪಿಲ್ಲವೇ…..?

Next Post

ಬೆಂಗಳೂರು: ಹಿಂದು ಮುಖಂಡ ಪುನೀತ್ ಕೆರೆಹಳ್ಳಿ ಬಂಧನ

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಬೆಂಗಳೂರು: ಹಿಂದು ಮುಖಂಡ ಪುನೀತ್ ಕೆರೆಹಳ್ಳಿ ಬಂಧನ

ಬೆಂಗಳೂರು: ಹಿಂದು ಮುಖಂಡ ಪುನೀತ್ ಕೆರೆಹಳ್ಳಿ ಬಂಧನ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..