ಪುತ್ತೂರು: ಎಪಿಎಂಸಿ ರಸ್ತೆ ಜಲಾವೃತ, ವಾಹನ ಸವಾರರ ಪರದಾಟ
ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಪುತ್ತೂರಿನ ಎಪಿಎಂಸಿ ರಸ್ತೆ ನದಿಯಂತಾಗಿದೆ. ಪ್ರಸಿದ್ಧ ಆದರ್ಶ ಆಸ್ಪತ್ರೆಯ ಮೆಟ್ಟಿಲಿ ನ ತನಕನೀರು ತಲುಪಿದೆ.
ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಮುಂಭಾಗ,ಹೊಸ ಬಿಲ್ಡಿಂಗ್ ನಿರ್ಮಾಣ ಆಗಿತ್ತಿದ್ದು ಹಾಗೂ ಬ್ರಿಡ್ಜ್ ಸಮೀಪ ರಸ್ತೆಯಲ್ಲಿ ನೀರು ತುಂಬಿದ್ದು, ರಸ್ತೆಯೋ ಅಥವಾ ನದಿಯೋ ಎಂಬಂತಾಗಿದೆ.
ವಾಹನ ಸವಾರು ಸರಿಯಾಗಿ ರಸ್ತೆ ಕಾಣದೆ ಪರದಾಡುವ ಸ್ಥಿತಿ ಎದುರಾಗಿದೆ. ದರ್ಬೆ ಭಾಗದಿಂದ ಉಪ್ಪಿನಂಗಡಿ ಸಾಗುವವರು ಈ ರಸ್ತೆಯನ್ನು ಅನುಸರಿಸುತ್ತಿದ್ದು ಈಗ ನದಿಯಂತಾಗಿದೆ.