ಟೆಹ್ರಾನ್: ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಹತ್ಯೆ ನಡೆದ ಬಗ್ಗೆ ವರದಿಯಾಗಿದೆ.
ಇರಾನ್ನಲ್ಲಿ ನಡೆದಿರುವ ಈ ಹತ್ಯೆಯನ್ನು ಇಸ್ರೇಲ್ ನಡೆಸಿದೆ ಎನ್ನಲಾಗಿದೆ. ಟೆಹ್ರಾನ್ನಲ್ಲಿರುವ ಹಮಾಸ್ ಮುಖ್ಯಸ್ಥನ ನಿವಾಸವನ್ನು ಮುಖ್ಯ ಗುರಿಯಾಗಿಸಿಕೊಂಡು ಹನಿಯೆಹ್ನನ್ನು ಹತ್ಯೆ ಮಾಡಲಾಗಿದೆ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ದೃಢಪಡಿಸಿದೆ.
ಬುಧವಾರ ಬೆಳಿಗ್ಗೆ ನಡೆದ ದಾಳಿ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಐಆರ್ಜಿಸಿ ತಿಳಿಸಿದೆ. ಇಲ್ಲಿ ಮುಖ್ಯವಾಗಿ ಇಸ್ಮಾಯಿಲ್ ಹನಿಯೆಹ್ ಸಾವಿಗೆ ಇಸ್ರೇಲ್ ಹೊಣೆ ಎಂದು ಹಮಾಸ್ ಹೇಳಿದೆಯಾದರು ಇರಾನ್ನ ನೂತನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅವರು ಭೇಟಿ ನೀಡಿದ ಬಳಿಕ ಈ ಹತ್ಯೆ ಮಾಡಲಾಗಿದೆ. ಈ ಹಿಂದೆ ಇಸ್ಮಾಯಿಲ್ ಹನಿಯೆಹ್ ಅವರನ್ನು ಕೊಂದು ಹಮಾಸ್ ಗುಂಪನ್ನು ನಾಶ ಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಅಂತೆಯೇ ಇದೀಗ ಇಸ್ರೇಲ್ ಸೇಡು ತೀರಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಇಸ್ಮಾಯಿಲ್ ಸಾವಿನ ಬಗ್ಗೆ ಇಸ್ರೇಲ್ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.