ಬಂಟ್ವಾಳ: ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ವಾಮದಪದವಿನಲ್ಲಿ ನಡೆಯಲಿದೆ ಪಂಜಿನ ಮೆರವಣಿಗೆ
ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ವಾಮದಪದವಿನಲ್ಲಿ ಅಗಸ್ಟ್ 11 ಆದಿತ್ಯವಾರ ಪಂಜಿನ ಮೆರವಣಿಗೆ ನಡೆಯಲಿದೆ.
ಗಣೇಶ ಮಂದಿರದಿಂದ ಸಂಜೆ 6 ಗಂಟೆಯಿಂದ ವಾಮದಪದವು ಪೇಟೆಯಲ್ಲಿ ಅಖಂಡ ಭಾರತದ ಪರಿಕಲ್ಪನೆಯ ಆಧಾರದಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ.
ಮೆರವಣಿಗೆಯ ನಂತರದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲು ಹಿಂದು ಜಾಗರಣಾ ವೇದಿಕೆಯ ಪ್ರಾಂತ ಕಾರ್ಯಕಾರಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಆಗಮಿಸಲಿದ್ದಾರೆ ಎಂದು ವಾಮದಪದವು ಹಿಂದು ಜಾಗರಣ ವೇದಿಕೆ ಪ್ರಮುಖರು ತಿಳಿಸಿದ್ದರೆ.