ಬೆಳ್ತಂಗಡಿ: ಬೆಳ್ತಂಗಡಿ ಶಾಸಕರು ಕಾಣೆಯಾಗಿದ್ದರೆ. ಹುಡುಕಿಕೊಡುವಂತೆ ಕಾಂಗ್ರೆಸ್ ನಿಂದ ಪ್ರತಿಭಟನೆ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಳೆದ ಹದಿನೈದು ದಿನಗಳಿಂದ ಕಾಣೆಯಾಗಿದ್ದಾರೆ ಅವರನ್ನು ಹುಡುಕಿ ಕೊಡುವಂತೆ ಇಂದು ಬೆಳ್ತಂಗಡಿ ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ್ದಾರೆ.
ಸಂದರ್ಭದಲ್ಲಿ ಮಾತನಾಡಿದ ಇಂಟೆಕ್ ಅಧ್ಯಕ್ಷ ನವೀನ್ ಗೌಡ ಸವಣಾಲು ಇಡೀ ತಾಲೂಕಿನಾದ್ಯಂತ ವ್ಯಾಪಕವಾಗಿ ಬಾರಿ ಮಳೆಯಿಂದಾಗಿ ಜನರು ಸಂಕಷ್ಟದಲ್ಲಿದ್ದರೆ ಅಲ್ಲಲ್ಲಿ ಧರೆಗಳು ಕುಸಿಯುತ್ತಿದೆ,ಮಾರ್ಗಗಳು ಬಂದ್ ಆಗಿವೆ ಅಪಾರ ನಷ್ಟಗಳಾಗಿವೆ ಆದರೆ ಬೆಳ್ತಂಗಡಿ ಶಾಸಕರು ಮಾತ್ರ ಬೆಂಗಳೂರಿನಲ್ಲಿ ಮಜಾ ಮಾಡುತ್ತಿದ್ದಾರೆ. ಮಾಜಿ ಶಾಸಕ ವಸಂತ ಬಂಗೇರರು 30 ವರ್ಷಗಳ ಹಿಂದೆ ನಡೆಸಿದ ಕಾಮಗಾರಿ ಇನ್ನೂ ಏನೂ ಆಗಿಲ್ಲ. ಆದರೆ ಶಾಸಕ ಹರೀಶ್ ಪೂಂಜಾ ಕೇವಲ ಮೂರು ವರ್ಷಗಳ ಹಿಂದೆ ನಡೆಸಿದ ಕಾಮಗಾರಿ ಮಳೆಯ ನೀರಿಗೆ ಕೊಚ್ಚಿ ಹೋಗಿದೆ. ಅದೇ ರೀತಿ ಶಾಸಕ ಹರೀಶ್ ಪೂಂಜಾ ಕೊಚ್ಚಿ ಬೆಂಗಳೂರಿನಲ್ಲಿ ಸಿಲುಕಿದ್ದಾರೆ ಎಂದು ಟೀಕಿಸಿದರು. ಈ ಹಿಂದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಟಾರ್ಚ್ ಹಾಕಿ ಹುಡುಕಬೇಕು ಎಂದ ಶಾಸಕರನ್ನು, ಈಗ ನೆರೆ ಸಂತ್ರಸ್ತರು ಟಾರ್ಚ್ ಹಾಕಿ ಶಾಸಕರನ್ನು ಹುಡುಕಬೇಕಾಗಿದೆ ಎಂದಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ ಶೆಟ್ಟಿ ಆರಂಬೋಡಿ ಮಾತನಾಡಿ ಕಳೆದ ಚುನಾವಣೆಯಲ್ಲಿ ಒಂದು ಲಕ್ಷ ಮತ ನೀಡಿದ ತಾಲೂಕಿನ ಜನರು ಸಂಕಷ್ಟದಲ್ಲಿರುವಾಗ ಶಾಸಕ ಹರೀಶ್ ಪೂಂಜಾ ಬೆಂಗಳೂರಿನಲ್ಲಿ ರೌಡಿಯೊಬ್ಬನ ಹಿತ ಕಾಯುವ ಬೇಜಾವ್ದಾರಿ ಕೆಲಸ ಮಾಡುತ್ತಿದ್ದಾರೆ. ಇಂತಹ ಅವಿವೇಕಿ ಶಾಸಕರು ತಾಲೂಕಿಗೆ ಸಿಕ್ಕಿರುವುದು ಜನರ ದುರಂತ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಕಳಿಯ ಗ್ರಾಮ ಪಂಚಾಯತ್ ಸದಸ್ಯ ಕರೀಂ ಗೇರುಕಟ್ಟೆ , ಕಾಂಗ್ರೆಸ್ ಪಕ್ಷದ ಮುಖಂಡರಾದ ದೇವಿಪ್ರಸಾದ್ ಶೆಟ್ಟಿ ಅಳದಂಗಡಿ , ಹನೀಫ್ ಉಜಿರೆ ಮಾತನಾಡಿದರು. ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷೆ ವಂದನಾ ಭಂಡಾರಿ , ತಾಲೂಕು ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸವಿತಾ ಕೊರಗ , ಎಸ್ಟಿ ಘಟಕದ ಅಧ್ಯಕ್ಷ ಜಯಾನಂದ ಪಿಲಿಕಲ , ಮಾಜಿ ತಾಲೂಕು ಪಂಚಾಯತ್ ಸದಸ್ಯ ಗೋಪಿನಾಥ್ ನಾಯಕ್ , ಮುಖಂಡರಾದ ರವೀಂದ್ರ ಬಿ ಅಮಿನ್ , ಪ್ರಜ್ವಲ್ ಜೈನ್ ಅಳದಂಗಡಿ ,ಸದಾನಂದ ನಾಲ್ಕೂರು, ಅಶ್ವಿನ್ ಕುಮಾರ್ ಬಳೆಂಜ ಉಪಸ್ಥಿತರಿದ್ದರು.