• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ಪುತ್ತೂರು ಸಂಘದ ಬೆಂಬಲ ನೀಡಲು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆಯಲ್ಲಿ ನಿರ್ಣಯ

ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ಪುತ್ತೂರು ಸಂಘದ ಬೆಂಬಲ ನೀಡಲು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆಯಲ್ಲಿ ನಿರ್ಣಯ

August 5, 2024
ಕುಲಾಲ ಸಂಘಕ್ಕೆ ಬೆಂಗಳೂರಿನಲ್ಲಿ ನಿವೇಶನ ಮಂಜೂರು ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

ಕುಲಾಲ ಸಂಘಕ್ಕೆ ಬೆಂಗಳೂರಿನಲ್ಲಿ ನಿವೇಶನ ಮಂಜೂರು ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

October 29, 2025
ಬೆಳ್ತಂಗಡಿ ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕ  ನವೆಂಬರ್ 01 ರಂದು ಮತ್ತೊಮ್ಮೆ ಪ್ರದರ್ಶನ

ಬೆಳ್ತಂಗಡಿ ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕ ನವೆಂಬರ್ 01 ರಂದು ಮತ್ತೊಮ್ಮೆ ಪ್ರದರ್ಶನ

October 29, 2025
ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಅಪಘಾತ ವಿಮಾ ಯೋಜನೆಯಲ್ಲಿ ಬದಲಾವಣೆ

ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಅಪಘಾತ ವಿಮಾ ಯೋಜನೆಯಲ್ಲಿ ಬದಲಾವಣೆ

October 29, 2025
ಕೆನಡಾದಲ್ಲಿ ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ನಿಂದ ಉದ್ಯಮಿ ಹತ್ಯೆ

ಕೆನಡಾದಲ್ಲಿ ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ನಿಂದ ಉದ್ಯಮಿ ಹತ್ಯೆ

October 29, 2025
ಪುತ್ತೂರು: ಕೆಮ್ಮಯಿ ಪಂಜಿಗ ಆನಡ್ಕ ಪುರುಷರಕಟ್ಟೆ ಸಂಪರ್ಕ ರಸ್ತೆಯನ್ನು ಗ್ರಾಮ ಸಡಕ್ ನಲ್ಲಿ ಅಭಿವೃದ್ಧಿ ಪಡಿಸಲು ಸಂಸದ ಚೌಟರಲ್ಲಿ ಮನವಿ

ಪುತ್ತೂರು: ಕೆಮ್ಮಯಿ ಪಂಜಿಗ ಆನಡ್ಕ ಪುರುಷರಕಟ್ಟೆ ಸಂಪರ್ಕ ರಸ್ತೆಯನ್ನು ಗ್ರಾಮ ಸಡಕ್ ನಲ್ಲಿ ಅಭಿವೃದ್ಧಿ ಪಡಿಸಲು ಸಂಸದ ಚೌಟರಲ್ಲಿ ಮನವಿ

October 28, 2025
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಏಜೆಂಟರಿಗಾಗಿ ಬಿಎಲ್‌ಎ-2 ಕಾರ್ಯಾಗಾರ

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಏಜೆಂಟರಿಗಾಗಿ ಬಿಎಲ್‌ಎ-2 ಕಾರ್ಯಾಗಾರ

October 28, 2025
ಪ್ರೀತಿಯ ಹೆಸರಿನಲ್ಲಿ ನಾಟಕವಾಡಿ ಅತ್ಯಾಚಾರಕ್ಕೆ ಪ್ಲಾನ್ : ಕರೆದೊಯ್ಯುತ್ತಿದ್ದ ವೇಳೆ ಬೈಕ್ ಆಕ್ಸಿಡೆಂಟ್ ಬಾಲಕಿ ಡೆತ್

ಪ್ರೀತಿಯ ಹೆಸರಿನಲ್ಲಿ ನಾಟಕವಾಡಿ ಅತ್ಯಾಚಾರಕ್ಕೆ ಪ್ಲಾನ್ : ಕರೆದೊಯ್ಯುತ್ತಿದ್ದ ವೇಳೆ ಬೈಕ್ ಆಕ್ಸಿಡೆಂಟ್ ಬಾಲಕಿ ಡೆತ್

October 28, 2025
ಯುಎಇ 100 ಮಿಲಿಯನ್ ದಿರಾಮ್ ಲಾಟರಿ ಗೆದ್ದ ಭಾರತ ಮೂಲದ ಅನಿಲ್‌ ಕುಮಾರ್‌

ಯುಎಇ 100 ಮಿಲಿಯನ್ ದಿರಾಮ್ ಲಾಟರಿ ಗೆದ್ದ ಭಾರತ ಮೂಲದ ಅನಿಲ್‌ ಕುಮಾರ್‌

October 28, 2025
ಪ್ರಚೋದನಕಾರಿ ಭಾಷಣ ಆರೋಪ: ಕಲ್ಲಡ್ಕ ಪ್ರಭಾಕರ್​ ಭಟ್​ಗೆ ರಿಲೀಫ್‌: ಬಲವಂತದ ಕ್ರಮ ಬೇಡವೆಂದ ಕೋರ್ಟ್

ಪ್ರಚೋದನಕಾರಿ ಭಾಷಣ ಆರೋಪ: ಕಲ್ಲಡ್ಕ ಪ್ರಭಾಕರ್​ ಭಟ್​ಗೆ ರಿಲೀಫ್‌: ಬಲವಂತದ ಕ್ರಮ ಬೇಡವೆಂದ ಕೋರ್ಟ್

October 28, 2025
ದುಬೈ ಬಿಲ್ಲವ ಸಂಘದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಾತ್ರಿನಿವಾಸದ ಅನ್ನ ಛತ್ರದ ಶಿಲನ್ಯಾಸ ಆಮಂತ್ರಣ ಪತ್ರಿಕೆ ಬಿಡುಗಡೆ

ದುಬೈ ಬಿಲ್ಲವ ಸಂಘದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಾತ್ರಿನಿವಾಸದ ಅನ್ನ ಛತ್ರದ ಶಿಲನ್ಯಾಸ ಆಮಂತ್ರಣ ಪತ್ರಿಕೆ ಬಿಡುಗಡೆ

October 28, 2025
ಪ್ರಿಯಾಂಕ್ ಖರ್ಗೆ ವಿರುದ್ಧ ಅಸ್ಸಾಂನಲ್ಲಿ ಭುಗಿಲೆದ್ದ ಆಕ್ರೋಶ! ಕರ್ನಾಟಕ ಬಿಟ್ಟು ಹೋಗುತ್ತಿರುವ್ಯಾದ್ಯಾಕೆ ಹೂಡಿಕೆಗಳು?

ಪ್ರಿಯಾಂಕ್ ಖರ್ಗೆ ವಿರುದ್ಧ ಅಸ್ಸಾಂನಲ್ಲಿ ಭುಗಿಲೆದ್ದ ಆಕ್ರೋಶ! ಕರ್ನಾಟಕ ಬಿಟ್ಟು ಹೋಗುತ್ತಿರುವ್ಯಾದ್ಯಾಕೆ ಹೂಡಿಕೆಗಳು?

October 28, 2025
ಅರಸಿನಮಕ್ಕಿ: ಬಾವಿಗೆ ಬಿದ್ದು ಮೃತರಾದ ಗೌರವ ಶಿಕ್ಷಕಿ ತೇಜಸ್ವಿನಿ ಮನೆಗೆ ಹರೀಶ್ ಪೂಂಜ ಭೇಟಿ

ಅರಸಿನಮಕ್ಕಿ: ಬಾವಿಗೆ ಬಿದ್ದು ಮೃತರಾದ ಗೌರವ ಶಿಕ್ಷಕಿ ತೇಜಸ್ವಿನಿ ಮನೆಗೆ ಹರೀಶ್ ಪೂಂಜ ಭೇಟಿ

October 28, 2025
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Thursday, October 30, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಕುಲಾಲ ಸಂಘಕ್ಕೆ ಬೆಂಗಳೂರಿನಲ್ಲಿ ನಿವೇಶನ ಮಂಜೂರು ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

    ಕುಲಾಲ ಸಂಘಕ್ಕೆ ಬೆಂಗಳೂರಿನಲ್ಲಿ ನಿವೇಶನ ಮಂಜೂರು ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ

    ಬೆಳ್ತಂಗಡಿ ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕ  ನವೆಂಬರ್ 01 ರಂದು ಮತ್ತೊಮ್ಮೆ ಪ್ರದರ್ಶನ

    ಬೆಳ್ತಂಗಡಿ ದೀಪಾವಳಿ ದೋಸೆ ಹಬ್ಬದಂದು ತಡೆಯಾದ ಜೈ ಭಜರಂಗಿ ಬಲಿ ತುಳು ನಾಟಕ ನವೆಂಬರ್ 01 ರಂದು ಮತ್ತೊಮ್ಮೆ ಪ್ರದರ್ಶನ

    ಪುತ್ತೂರು: ಕೆಮ್ಮಯಿ ಪಂಜಿಗ ಆನಡ್ಕ ಪುರುಷರಕಟ್ಟೆ ಸಂಪರ್ಕ ರಸ್ತೆಯನ್ನು ಗ್ರಾಮ ಸಡಕ್ ನಲ್ಲಿ ಅಭಿವೃದ್ಧಿ ಪಡಿಸಲು ಸಂಸದ ಚೌಟರಲ್ಲಿ ಮನವಿ

    ಪುತ್ತೂರು: ಕೆಮ್ಮಯಿ ಪಂಜಿಗ ಆನಡ್ಕ ಪುರುಷರಕಟ್ಟೆ ಸಂಪರ್ಕ ರಸ್ತೆಯನ್ನು ಗ್ರಾಮ ಸಡಕ್ ನಲ್ಲಿ ಅಭಿವೃದ್ಧಿ ಪಡಿಸಲು ಸಂಸದ ಚೌಟರಲ್ಲಿ ಮನವಿ

    ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಏಜೆಂಟರಿಗಾಗಿ ಬಿಎಲ್‌ಎ-2 ಕಾರ್ಯಾಗಾರ

    ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಏಜೆಂಟರಿಗಾಗಿ ಬಿಎಲ್‌ಎ-2 ಕಾರ್ಯಾಗಾರ

    ಪ್ರಚೋದನಕಾರಿ ಭಾಷಣ ಆರೋಪ: ಕಲ್ಲಡ್ಕ ಪ್ರಭಾಕರ್​ ಭಟ್​ಗೆ ರಿಲೀಫ್‌: ಬಲವಂತದ ಕ್ರಮ ಬೇಡವೆಂದ ಕೋರ್ಟ್

    ಪ್ರಚೋದನಕಾರಿ ಭಾಷಣ ಆರೋಪ: ಕಲ್ಲಡ್ಕ ಪ್ರಭಾಕರ್​ ಭಟ್​ಗೆ ರಿಲೀಫ್‌: ಬಲವಂತದ ಕ್ರಮ ಬೇಡವೆಂದ ಕೋರ್ಟ್

    ದುಬೈ ಬಿಲ್ಲವ ಸಂಘದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಾತ್ರಿನಿವಾಸದ ಅನ್ನ ಛತ್ರದ ಶಿಲನ್ಯಾಸ ಆಮಂತ್ರಣ ಪತ್ರಿಕೆ ಬಿಡುಗಡೆ

    ದುಬೈ ಬಿಲ್ಲವ ಸಂಘದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಯಾತ್ರಿನಿವಾಸದ ಅನ್ನ ಛತ್ರದ ಶಿಲನ್ಯಾಸ ಆಮಂತ್ರಣ ಪತ್ರಿಕೆ ಬಿಡುಗಡೆ

    ಅರಸಿನಮಕ್ಕಿ: ಬಾವಿಗೆ ಬಿದ್ದು ಮೃತರಾದ ಗೌರವ ಶಿಕ್ಷಕಿ ತೇಜಸ್ವಿನಿ ಮನೆಗೆ ಹರೀಶ್ ಪೂಂಜ ಭೇಟಿ

    ಅರಸಿನಮಕ್ಕಿ: ಬಾವಿಗೆ ಬಿದ್ದು ಮೃತರಾದ ಗೌರವ ಶಿಕ್ಷಕಿ ತೇಜಸ್ವಿನಿ ಮನೆಗೆ ಹರೀಶ್ ಪೂಂಜ ಭೇಟಿ

    ಬಾರ್ಯ ಪ್ರಾ.ಕೃ.ಪ. ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ

    ಬಾರ್ಯ ಪ್ರಾ.ಕೃ.ಪ. ಸಹಕಾರಿ ಸಂಘದ ನಿರ್ದೇಶಕರ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ

    ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 15 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ

    ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 15 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ಪುತ್ತೂರು ಸಂಘದ ಬೆಂಬಲ ನೀಡಲು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆಯಲ್ಲಿ ನಿರ್ಣಯ

by ಪ್ರಜಾಧ್ವನಿ ನ್ಯೂಸ್
August 5, 2024
in ಪುತ್ತೂರು, ಪ್ರಾದೇಶಿಕ
0
ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ಪುತ್ತೂರು ಸಂಘದ ಬೆಂಬಲ ನೀಡಲು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆಯಲ್ಲಿ ನಿರ್ಣಯ
36
SHARES
104
VIEWS
ShareShareShare

ಪುತ್ತೂರು: ಸಂಘದಲ್ಲಿ ಸದಸ್ಯತ್ವ ಅಭಿಯಾನ ಆಗಬೇಕು, ಸಮಾಜದಲ್ಲಿ ಒಗ್ಗಟ್ಟು ಇರಬೇಕು. ಅದೇ ರೀತಿ ಜಿಲ್ಲೆಯಲ್ಲಿ ನಮ್ಮ ಸಂಘಟನೆ ಬಲಪಡಿಸಲು ಸಂಘ ಬೇಕು. ಆದರೆ ಅಲ್ಲಿ ಎರಡು ಸಂಘಟನೆ ಇದ್ದರೆ ನಮ್ಮ ಬೆಂಬಲವಿಲ್ಲ. ಯಾವುದಾದರೂ ಒಂದೇ ಸಂಘ ಇರಬೇಕು. ಏನಾದರು ವ್ಯತ್ಯಾಸ ಇದ್ದರೆ ಅದನ್ನು ಸರಿದೂಗಿಸಿ ಮುಂದೆ ಹೋಗಬೇಕು.

ಹಾಗಾಗಿ ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ಪುತ್ತೂರು ಸಂಘದ ಬೆಂಬಲ ನೀಡಲು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆಯಲ್ಲಿ ನಿರ್ಣಯ ಮಾಡಲಾಗಿದೆ.

ಮಹಾಸಭೆ ಆ.4ರಂದು ಮಧ್ಯಾಹ್ನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸಲಹಾ ಸಮಿತಿ ಗೌರವಾಧ್ಯಕ್ಷ ಸಂಜೀವ ಮಠಂದೂರು ಅವರು ಪ್ರಸ್ತಾಪಿಸಿದಂತೆ ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ಬೆಂಬಲ ನೀಡುವ ಕುರಿತು ನಿರ್ಣಯಿಸಲಾಯಿತು.

ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಅಧ್ಯಕ್ಷೀಯ ಮಾತಿನಲ್ಲಿ ಸಮಾಜದ ಒಳಿತಿಗಾಗಿ ಸಂಘ ಇರಬೇಕು. ಹಾಗಾಗಿ ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಪುತ್ತೂರು ತಾಲೂಕು ಸಂಘ ಬೆಂಬಲ ನೀಡಲಿದೆ ಎಂದು ಹೇಳಿದರು.

ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಗೌರವಾಧ್ಯಕ್ಷರೂ ಆದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಗೌಡ ಸಮಾಜ ಬಲಿಷ್ಠವಾಗಿದ್ದು ಇದನ್ನು ಉಳಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಅಗತ್ಯವಾಗಿ ನಡೆಯಬೇಕು. ಪರಿವರ್ತನೆ ಕಾಲದಲ್ಲಿ ಗೌಡ ಸಮಾಜದಿಂದ ಸದಸ್ಯತನ ಸಾಕಾಗುವುದಿಲ್ಲ. ಹೊಸ ಪೀಳಿಗೆ ಬರುವಂತೆ ಮಾಡಬೇಕು. ತಿಂಗಳಲ್ಲಿ ಒಂದೆರಡು ದಿನ ಗ್ರಾಮಕ್ಕೆ ಹೋಗಿ ಸದಸ್ಯತ್ವ ಅಭಿಯಾನ ಮಾಡಬೇಕು.

ಗ್ರಾಮ ಸಮಿತಿಗಳು ಬಲಿಷ್ಠವಾಗಬೇಕು ಮತ್ತು ಅದನ್ನು ಸಕ್ರೀಯಗೊಳಿಸಬೇಕು. ಜಿಲ್ಲೆಯಲ್ಲಿ ಗೌಡ ಸಮಾಜ ಬಲಿಷ್ಠ ಎಂದು ಗುರುತಿಸಿಕೊಳ್ಳುವುದಕ್ಕೆ ಎರಡು ವರ್ಷದ ಹಿಂದೆ ಸ್ವಾಮೀಜಿಯವರ ಮುತುವರ್ಜಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಉಪಸ್ಥಿತಿಯಲ್ಲಿ ಜಿಲ್ಲಾ ಗೌಡ ಸಮಾಜ ಅಸ್ತಿತ್ವಕ್ಕೆ ಬಂತು. ಈ ಸಂಘಟನೆ ಮೂಲಕ ಎಲ್ಲಾ ಗೌಡ ಸಮಾಜವನ್ನು ಒಂದಾಗಿ ಸೇರಿಸುವ ಚಿಂತನೆ ನಡೆದಾಗ ಅಲ್ಲಿ 18 ಕುಟುಂಬ ಗೋತ್ರದ ಸಮಸ್ಯೆ ಬಂದಾಗ ಅಪಸ್ವರ ಕೇಳಿ ಬಂತು. ಇದು ಇನ್ನೊಂದು ಸಂಘಕ್ಕೆ ನಾಂದಿಯಾಯಿತು. ಜಿಲ್ಲೆಯಲ್ಲಿ ಎರಡು ಸಮಿತಿಯಾದರೆ ಸಂಘಟನೆ ವಿಂಗಡಣೆಯಾಗುತ್ತೆ ಎಂದು ಹೇಳಿ ಆಗಿದೆ. ಆದರೆ ಈಗ ಎರಡು ಸಂಘಟನೆ ಜಿಲ್ಲೆಯಲ್ಲಿದೆ. ಹಾಗಾಗಿ ಅವರು ಮಾತುಕತೆ ಮಾಡಿ ಒಂದು ಸಂಘ ಮಾಡಲಿ.

ನಾವು ಯಾರ ಪರವೂ ಇಲ್ಲ. ಸಂಘ ಒಬ್ಬ ವ್ಯಕ್ತಿಗಾಗಿ ಅಲ್ಲ. ಇಡೀ ಸಮಾಜಕ್ಕೆ ಸಂಘ ಇರಬೇಕು ಎಂದು ಚಿಂತಿಸಬೇಕು. ನಮ್ಮಲ್ಲಿ ಒಂದೇ ಸಂಘ ಇರಬೇಕು. ಏನಾದರು ವ್ಯತ್ಯಾಸ ಇದ್ದರೆ ಅದನ್ನು ಸರಿದೂಗಿಸಿ. ಸಮಾಜದ ಒಳಿತಿಗಾಗಿ ಸಂಘಟನೆ ಇರಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಮಾತನಾಡಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಸದಸ್ಯತ್ವ ತನ್ನಿಂದ ತಾನೇ ಆಗುತ್ತದೆ. ಪ್ರತಿಭಾ ಪುರಸ್ಕಾರ ನಮ್ಮ ಸಮಾಜದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾಡಲಾಗಿದೆ. ವಿದ್ಯಾರ್ಥಿಗಳ ಪೋಷಕರು ಸಂಘದ ಸದಸ್ಯರಾಗುವ ಪ್ರಯತ್ನ ಮಾಡಬೇಕು. ಜೊತೆಗೆ ಗ್ರಾಮ ಸಮಿತಿಗಳ ಮೂಲಕ ಸದಸ್ಯತ್ವಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ಆಗಬೇಕು. ನಾವು ಅದಕ್ಕೆ ಪೂರ್ಣ ಸಹಕಾರ ನೀಡುತ್ತೇವೆ ಎಂದ ಅವರು ನಮ್ಮಲ್ಲಿ ಸ್ವಸಹಾಯ ಸಂಘವಿದೆ. 1600 ಗುಂಪು ಇದೆ. 10 ಸಾವಿರ ಮಂದಿ ಸದಸ್ಯರಿದ್ದಾರೆ. ಅವರ ಸಹಕಾರ ಬಹಳ ಅಗತ್ಯ ಎಂದರು.

ಸಂಘದ ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ ಅವರು ಮಾತನಾಡಿ, ನಾವು ಸದಸ್ಯತ್ವ ಮಾಡುವಲ್ಲಿ ಹಿಂದೆ ಸರಿದಿದ್ದೀವೆ. ಸದಸ್ಯರಾಗಿದ್ದರೆ ಅವರಿಗೆ ಸಮುದಾಯ ಭವನದ ಬಾಡಿಗೆಯಲ್ಲಿ ರಿಯಾಯಿತಿ ಸಹಿತ ವಿವಿಧ ಸವಲತ್ತು ನೀಡಲಾಗುತ್ತದೆ. ಹಾಗಾಗಿ ತಾಲೂಕು ಮಟ್ಟದಲ್ಲಿ ನಾವು ಸದಸ್ಯತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇದಕ್ಕೆ ವಲಯ ಉಸ್ತುವಾರಿಯವರು ಹೆಚ್ಚು ಮುತುವರ್ಜಿ ವಹಿಸಬೇಕು. ನಾವು ಅವರಿಗೆ ಸಹಕಾರ ನೀಡುತ್ತೇವೆ. ಮುಂದಿನ ಮಹಾಸಭೆಗೆ ಕನಿಷ್ಠ 1 ಸಾವಿರ ಹೊಸ ಸದಸ್ಯರ ಸೇರ್ಪಡೆಯಾಗಬೇಕು ಎಂದರು.

ಮಹಿಳಾ ಗೌಡ ಸಂಘದ ಅಧ್ಯಕ್ಷೆ ವಾರಿಜ ಕೆ ಗೌಡ ಅವರು ಮಾತನಾಡಿ, ಮಹಿಳೆಯರ ಒಗ್ಗಟ್ಟು ಭದ್ರಪಡಿಸುವ ಕೆಲಸವಾಗಬೇಕು ಎಂದ ಅವರು ಮಹಿಳಾ ಸಂಘದ ಕಾರ್ಯಚಟುವಟಿಕೆಯನ್ನು ತಿಳಿಸಿದರು. ಯುವ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ ಅವರು ಮಾತನಾಡಿ ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗುವಂತೆ ವಿನಂತಿಸಿದರು.

ಸಮಿತಿಯಲ್ಲಿದ್ದು ವಿವಿಧ ಸಮಾಜಮುಖಿ ಸೇವೆಯಲ್ಲಿ ಸಕ್ರಿಯರಾಗಿರುವ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್, ಸಂಘದ ಉಪಾಧ್ಯಕ್ಷ ಸುಂದರ ಗೌಡ ನಡುಬೈಲು, ಪಾಲ್ತಾಡಿಯ ಕ್ಯಾ.ಸಂಜೀವ ಗೌಡ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಹಿರಿಯರಾದ ರಾಮಣ್ಣ ಗೌಡ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಇದೇ ಸಂದರ್ಭ ಮುಖ್ಯಮಂತ್ರಿ ಪದಕ ಪುರಸ್ಕೃತ ಗೃಹರಕ್ಷಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭದ್ರತಾ ಸಿಬ್ಬಂದಿ ಜಗನ್ನಾಥ ಪಿ ಅವರನ್ನು ಸನ್ಮಾನಿಸಲಾಯಿತು. ಲೋಕೇಶ್ ಚಾಕೊಟೆ ಮತ್ತು ಪುರುಷೋತ್ತಮ ಮುಂಗ್ಲಿಮನೆ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ 11 ಮತ್ತು ಪಿಯುಸಿಯಲ್ಲಿ 15 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು. ಡಾ.ಶ್ರೀಧರ್ ಪಾಣತ್ತಿಲ ಅವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಲೆಕ್ಕಪತ್ರವನ್ನು ಖಜಾಂಚಿ ಶಿವರಾಮ ಮತಾವು ಮಂಡಿಸಿದರು. ಸಭಾಭವನದ ಉಸ್ತುವಾರಿ ಲಿಂಗಪ್ಪ ಗೌಡ ತೆಂಕಿಲ ಅವರು ಸಭಾಭವನದ ಲೆಕ್ಕಪತ್ರ ಮಂಡಿಸಿದರು. ಉಷಾಮಣಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಸ್ವಾಗತಿಸಿ, ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ವಂದಿಸಿದರು. ಸಭಾಭವನದ ವ್ಯವಸ್ಥಾಪಕ ಸುರೇಶ್ ಮೂವಪ್ಪು ಸಹಕರಿಸಿದರು

HPR Institute Of Nursing And Paramedical Sciences & Friends Beke

ಜಾಹೀರಾತು

SendShare14Share
Previous Post

ಬಂಟ್ವಾಳ:ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ಇದರ ವತಿಯಿಂದ ಹತ್ತನೇವರ್ಷದ “ಆಟಿಡೊಂಜಿ ಗಮ್ಮತ್”

Next Post

ಮಂಗಳೂರು: ಪಬ್ ನಲ್ಲಿ ಯುವತಿಗೆ ಕಿರುಕುಳ. ಪುತ್ತೂರಿನ ನಾಲ್ವರು ಯುವಕರ ಬಂಧನ.

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಮಂಗಳೂರು: ಪಬ್ ನಲ್ಲಿ ಯುವತಿಗೆ ಕಿರುಕುಳ. ಪುತ್ತೂರಿನ ನಾಲ್ವರು ಯುವಕರ ಬಂಧನ.

ಮಂಗಳೂರು: ಪಬ್ ನಲ್ಲಿ ಯುವತಿಗೆ ಕಿರುಕುಳ. ಪುತ್ತೂರಿನ ನಾಲ್ವರು ಯುವಕರ ಬಂಧನ.

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..