ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಕುಂಟುತ್ತಾ ಸಾಗಿದ್ದು ಇದರಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಮನಗೊಂಡು ಇದನ್ನು ಬಗೆಹರಿಸಲು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸಕರಾದ ಹರೀಶ್ ಪೂಂಜ ಅವರು ಜೊತೆಸೇರಿ ಎರಡು ತಿಂಗಳುಗಳಿಂದ ನಿರಂತರ ಸಭೆಗಳನ್ನು ನಡೆಸಿದ್ದರು.
ಇದಕ್ಕೆ ಫಲಶೃತಿ ದೊರಕಿದ್ದು ಇದೀಗ ರಾಷ್ಟ್ರೀಯ ಹೆದ್ದಾರಿಯ ಬ್ಯಾಕ್ ಟು ಬ್ಯಾಕ್ ಮಾದರಿಯ ಅಡಿಯಲ್ಲಿ ಕಾಮಗಾರಿಯನ್ನು ಗುತ್ತಿಗೆದಾರರಾದ ಡಿ.ಪಿ ಜೈನ್ ಅವರಿಂದ ಮುಗ್ರೋಡಿ ಕಂಸ್ಟ್ರಕ್ಷನೆಗೆ ವಹಿಸಲಾಗಿದೆ.
ನೂತನ ಗುತ್ತಿಗೆದಾರರು ಇಂದು ಬೆಳ್ತಂಗಡಿಯ ಕಾಶಿಬೆಟ್ಟುವಿನಲ್ಲಿ ಕಾಮಗಾರಿ ಪ್ರಾರಂಭಗೊಳಿಸಿದ್ದು ಇದಕ್ಕೆ ಸಂಸದರು ಮತ್ತು ಶಾಸಕರು ಚಾಲನೆ ನೀಡುವುದರ ಜೊತೆಗೆ ಕಾಮಗಾರಿಯ ಪರಿಶೀಲನೆ ನಡೆಸಿದರು.