ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಮಂಗಳೂರು ಗ್ರಾಮಂತರ ಜಿಲ್ಲೆ ಇದರ ವತಿಯಿಂದ ಕಲ್ಲಡ್ಕ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಹಿಂ.ಜಾ.ವೇ.ಕರ್ನಾಟಕ ದಕ್ಷಿಣ ಪ್ರಾಂತ ಸಮಿತಿ ಸದಸ್ಯರಾದ ಪ್ರಜ್ಮಾ ಕಶ್ಯಪ್ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಮಧ್ಯಾಹ್ನದ ನಂತರ ಏಕ ಕಾಲದಲ್ಲಿ ಮೆಲ್ಕಾರ್,ಮಾಣಿಯಿಂದ ವಾಹನ ಜಾಥ ನಡೆಯಿತು.ಕಾರ್ಯಕ್ರಮದಲ್ಲಿ ಹಿಂ.ಜಾ.ವೇ.ಪ್ರಾಂತ ಜಿಲ್ಲಾ, ತಾಲೂಕು ಪ್ರಮುಖರು ಮತ್ತು ಕಾರ್ಯಕರ್ತರು ಪರಿವಾರ ಸಂಘಟನೆಯ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.