ಪುತ್ತೂರು: ಮಾಣಿ- ಸಂಪಾಜೆ ರಾಷ್ಡ್ರೀಯ ಹೆದ್ದಾರಿ 275 ರ ಯೋಜನಾ ವರದಿಯನ್ನು ನಾಲ್ಕು ತಿಂಗಳೊಳಗೆ ಸಿದ್ದಪಡಿಸುವಂತೆ ಹೆದ್ದಾರಿ ವಿಭಾಗದ ಕಾರ್ಯಕಾರಿ ಇಂಜಿನಿಯರ್ ಶಿವಪ್ರಸಾದ್ ರವರಿಗೆ ಶಾಸಕರಾದ ಅಶೋಕ್ ರೈ ಸೂಚಿಸಿದ್ದಾರೆ.
ಸೋಮವಾರ ತಮ್ಮ ಕಚೇರಿಯಲ್ಲಿ ಇಂಜಿನಿಯರ್ ಜೊತೆ ಮಾತುಕತೆ ನಡೆಸಿದ ಶಾಸಕರು ಹೆದ್ದಾರಿ ಕಾಮಗಾರಿ ಸ್ಪೀಡಪ್ ಪಡೆಯಬೇಕಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ತದಲ್ಲೇ ಮುಗಿಸಬೇಕು. ವೇಗತೆಯನ್ನು ಪಡೆದುಕೊಳ್ಳದೇ ಇದ್ದರೆ ಈ ವಿಚಾರ ಆಮೆಗತಿಯಲ್ಲಿ ಸಾಗಬಹುದು ಅದಕ್ಕಾಗಿ ಎಷ್ಟು ವೇಗವನ್ನು ಕೊಡುವುದಕ್ಕೆ ಸಾಧ್ಯವೋ ಅಷ್ಟು ವೇಗದಲ್ಲಿ ಕಾರ್ಯ ನಿರ್ವಹಿಸಬೇಕು ಇದಕ್ಕಾಗಿ ನನ್ನಿಂದ ಏನು ಸಹಾಯ ಬೇಕೋ ಅದನ್ನು ತಿಳಿಸಬೇಕು ಎಂದು ಶಾಸಕರು ತಿಳಿಸಿದರು.ತಹಶೀಲ್ದಾರ್ ಪುರಂದರ್ ಹೆಗ್ಡೆ ಉಪಸ್ಥಿತರಿದ್ದರು.