ಕೆಮ್ಮಾಯಿ: ವಿಷ್ಣು ಯುವಕಮಂಡಲದ ವತಿಯಿಂದ 78 ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಧ್ವಜಾರೋಹಣವನ್ನು ವಿಷ್ಣು ಯುವಕ ಮಂಡಲದ ಅಧ್ಯಕರಾದ ದಯಾನಂದ ಕೆ ಇವರು ನೆರವೇರಿಸಿದರು . ಧ್ವಜಾರೋಹಣವನ್ನು ನೆರವೇರಿಸಿದ ಅಧ್ಯಕ್ಷರು ಮಾತನಾಡಿ ಇಂದು ನಾವು 78ನೇ ಸ್ವಾತಂತ್ರ್ಯ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುತ್ತೇವೆ,
ಆದರೆ ಇದರ ಹಿಂದೆ ಅಸಂಖ್ಯಾತ ಮಹಾತ್ಮರ ಬಲಿದಾನದ ತ್ಯಾಗವಿದೆ. ಇಂದು ನಾವು ಈ ಭೂಮಿ ಮೇಲೆ ಈ ಒಂದು ಉತ್ಸವವನ್ನು ನಾವು ಸಂಭ್ರಮಿಸಬೇಕಾದರೆ ಇದಕ್ಕಾಗಿ ಬಲಿದಾನ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕಾಗಿದೆ. ಹಾಗೂ ಎಲ್ಲರಿಗೂ ಈ ಒಂದು 78ನೇ ವರ್ಷದ ಸ್ವಾತಂತ್ರ್ಯೋ ತ್ಸವದ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಗೌರವಾಧ್ಯಕ್ಷರಾದ ಚಿದಾನಂದ ರೈ, ಕಾರ್ಯದರ್ಶಿ ಸುರೇಂದ್ರ ಬಡಾವು,ಯುವಕ ಮಂಡಲದ ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿದ್ದರು. ನಂತರ ಯುವಕ ಮಂಡಲದ ವತಿಯಿಂದ ಚಿಕ್ಕಮುಡ್ನೂರು ಬಿರ್ನಹಿತ್ಲು ಸರಕಾರಿ ಶಾಲೆಯ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.