ಯುವ ಕಾಂಗ್ರೆಸ್ ಚುನಾವಣೆಯ ನಾಮಪತ್ರ ತಿರಸ್ಕೃತಗೊಂಡು ಪರ – ವಿರೋಧ ಚರ್ಚೆಗೆ ಒಳಗಾಗಿದದ್ದ ವಿಚಾರಕ್ಕೆ ಕೊನೆಗೂ ತೆರೆ ಎಳೆಯಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಬಾತೀಷ್ ಅಳಕೆಮಜಲು ಮತ್ತು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಶಿಕ್ ಸಂಪ್ಯ ರವರ ನಾಮಪತ್ರವು ಮರು ಪರಿಶೀಲನೆಗೆ ಒಳಪಟ್ಟು ಕೊನೆಗೂ ಅಂಗೀಕಾರವಾಗಿದೆ.
ಇತ್ತೀಚಿಗೆ ಯುವ ಕಾಂಗ್ರೆಸ್ ಚುನಾವಣಾ ಸಮಿತಿಯು ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಬಾತೀಷ್ ಸೇರಿದಂತೆ ಹಲವರ ನಾಮಪತ್ರವನ್ನು ಕಾರಣ ನೀಡದೇ ತಿರಸ್ಕರಿಸಲಾಗಿತ್ತು. ನಾಮಪತ್ರ ತಿರಸ್ಕೃತಗೊಂಡ ದಿನ ಬಾತೀಷ್ ರವರ ಬೆಂಬಲಿಗರ ತೀವ್ರ ಆಕ್ರೋಶಕ್ಕೂ ಒಳಗಾಗಿದಲ್ಲದೇ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷದಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಮಾತುಗಳೂ ಕೇಳಿ ಬಂದಿದ್ದವು.
ಆದರೆ ಇವೆಲ್ಲದಕ್ಕೂ ರಾಷ್ಟ್ರ ಮತ್ತು ರಾಜ್ಯ ಯುವ ಕಾಂಗ್ರೆಸ್ ಸಮಿತಿ ತೆರೆ ಎಳೆದಿದ್ದು, ಎಲ್ಲರಿಗೂ ಅವಕಾಶ ಇದೆ ಎಂಬುದನ್ನು ಈ ಮೂಲಕ ಸಾರಿದ್ದಾರೆ. ಇದರಿಂದಾಗಿ ಮತ್ತೆ ಯುವ ನಾಯಕನಿಗೆ ಸ್ಪರ್ಧಿಸುವ ಅವಕಾಶ ದೊರೆತಿದ್ದು, ಬೆಂಬಲಿಗರ ಸಂತಸ ವ್ಯಕ್ತಪಡಿಸಿದ್ದಾರೆ