ರಾಷ್ಟ್ರ ಭಕ್ತ ನಾಗರಿಕವೇದಿಕೆ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಪುತ್ತೂರು ಸೈನಿಕ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ರಾಷ್ಟ್ರಭಕ್ತ ನಾಗರಿಕವೇದಿಕೆ ರಿ ಸುರತ್ಕಲ್ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಇಂದಿನ ದಿನಗಳಲ್ಲಿ ದೇಶ ಸೇವೆ ಮಾಡಿದ ಸೈನಿಕರನ್ನು ನೆನಪಿಸುವ ಕಾರ್ಯ ಆಗಬೇಕಾಗಿದೆ. ಹತ್ತು ವರ್ಷದಿಂದ ಸೈನಿಕರನ್ನು ಕೇದ್ರವಾಗಿಟ್ಟುಕೊಂಡು ಈ ವೇದಿಕೆ ಕೆಲಸ ಮಾಡುತ್ತಿದೆ. ಡ್ರಾಯಿಂಗ್ ಸ್ಪರ್ಧೆ ದ ಅಯೋಜಿಸಿದಾಗ 400 ಅಧಿಕ ಮಕ್ಕಳ ಭಾಗವಹಿಸಿದ್ದರು. ಸೈನಿಕ ಕಲ್ಯಾಣ ನಿಧಿಯ ಮೂಲಕ ಮೂರು ವರ್ಷದಲ್ಲಿ ಐದು ಲಕ್ಷ ಅಧಿಕ ಮೊತ್ತವನ್ನು ಸೈನಿಕ ಕುಟುಂಬಗಳಿಗೆ ನೀಡಿದೆ. ತ್ಯಾಗ ಬಲಿದಾನವೇ ಸೈನಿಕರ ಜೀವನ ಎಂದರು ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲಿದಾನವಾದ ಸೈನಿಕರು ಇರ್ವರು ಮಾತ್ರ ಉದಯ್ ಕುಮಾರ್ ಮತ್ತು ಸುರತ್ಕಲ್ ನ ಪ್ರಾಂಜಲ್. ಬಾಕಿ ರಾಜ್ಯ ಜಿಲ್ಲೆಗಳಲ್ಲಿ ಹುತಾತ್ಮರಾದರೆ ಮೂರು ತಿಂಗಳೊಳಗೆ ಪುತ್ಥಳಿ ನಿರ್ಮಿಸುವ ದಿನಗಳಲ್ಲಿದ್ದಾರೆ ಇಲ್ಲಿ ಹುತಾತ್ಮರಾದ ಪ್ರಾಂಜಲ್ ವರ ಪುತ್ಥಳಿ ನಿರ್ಮಾಣಕ್ಕೆ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ ಎಂದ ಸುರತ್ಕಲ್ ಸೈನಿಕರ ಮತ್ತು ರಾಷ್ಟ್ರೀಯ ಚಿಂತನೆ ಜೊತೆ ನಿಲ್ಲುವುದೇ ರಾಷ್ಟ್ರಭಕ್ತ ನಾಗರೀಕ ವೇದಿಕೆಯ ಗುರಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಅಂಬಿಕಾ ವಿದ್ಯಾಸಂಸ್ಥೆಯ ಸುಬ್ರಹ್ಮಣ್ಯ ನಟ್ಟೋಜ ಮಾತಾನಾಡಿ ದೇಶದಲ್ಲಿ ಗಡಿ ರೇಖೆ,ಗಡಿ ಪ್ರದೇಶ ತಿಳಿಯುವುದು ವೀರ ಸೈನಿಕರಿಂದ ದೇಶ ಪ್ರೇಮ, ತ್ಯಾಗವೇ ಉಸಿರೆಂದು ಬದುಕುವ ಸೈನಿಕರು ನಮಗೆ ಪ್ರೇರಣೆ ಅವರೆಲ್ಲರು ಪ್ರಾತಃ ಸ್ಮರಣೀಯರು. ಅಲ್ಲದೇ ಸರ್ಕಾರಿ ಸೇವೆ ಸಲ್ಲಿಸುವವರು ಸೇವೆಯಲ್ಲ ಅದು ಉದ್ಯೋಗ, ನಿಜವಾದ ಸೇವೆ ಅದು ಸೈನ್ಯ ಸೇವೆ. ಪ್ರಸ್ತುತ ಶುದ್ದ ಹಸ್ತದ ರಾಜಕೀಯವೇ ಇಲ್ಲ ಸ್ವಾರ್ಥವೇ ತುಂಬಿದೆ. ಮುಂದಿನ ಪೀಳಿಗೆಗೆ ಸೇವೆ ಸಲ್ಲಿಸಿದ ಸೈನಿಕರನ್ನು ಗುರುತಿಸುವ ಕಾರ್ಯ ಆಗಬೇಕಾಗಿದೆ ಎಂದರು.
ರಾಷ್ಟ್ರಭಕ್ತ ನಾಗರಿಕ ವೇದಿಕೆ ಮಾಜಿ ಅಧ್ಯಕ್ಷ ಬಾಳ ಶ್ರೀಕಾಂತ್ ಶೆಟ್ಟಿ ಮಾತಾನಾಡಿ ಹತ್ತು ವರ್ಷದಿಂದ ಯೋಗ್ಯ ಕೆಲಸವನ್ನು ಈ ವೇದಿಕೆ ಮಾಡಿದೆ. ಎಲ್ಲೋ ಇದ್ದ ಸೈನಿಕರನ್ನು ಸಮಾಜಕ್ಕೆ ಗುರುತಿಸಿದ್ದು ಈ ವೇದಿಕೆ. ಸುಮಾರು ಮೂವತ್ತು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಮಾಜಕ್ಕೆ ನೀಡಿದೆ ಅಲ್ಲದೇ ಈ ವೇದಿಕೆಯ ಮೂಲಕ ಸೈನಿಕರ ಪರಿಚಯ ಸಮಾಜಕ್ಕೆ ಆಗಿದೆ ಇದಕ್ಕೆ ಧನ್ಯವಾದಗಳು ಎಂದು ನುಡಿದರು.
ಸಂಕಷ್ಟದಲ್ಲಿದ್ದ ಮೂರು ಸೈನಿಕ ಕುಟುಂಬಗಳಾದ ಶ್ರೀಮತಿ ಅಣ್ಣಮ್ಮ, ಶ್ರೀಮತಿ ಸ್ವರ್ಣಲತಾ, ಶ್ರೀಮತಿ ಪುಷ್ಪಾವತಿ ಇವರಿಗೆ ಸೈನಿಕ ಕಲ್ಯಾಣ ನಿಧಿ ನೀಡಲಾಯಿತು.
ವೇದಿಕೆಯಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ ಕೆ ನಾರಾಯಣ ಭಟ್, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ, ಸಾಮಾಜಿಕ ಕಾರ್ಯಕರ್ತ ಭಾರತೀಯ ಜನಹಿತ ಪರಿವಾರದ ರಾಜಾರಾವ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ರೋಹಿತ್ ಕುಮಾರ್ ಸುರತ್ಕಲ್, ಸಂತೋಷ್ ಕುಮಾರ್ ರೈ ಕೈಕಾರ, ವಕೀಲರಾದ ಶಿವಾನಂದ ವಿಟ್ಲ, ಧನಂಜಯ ಪಟ್ಲ, ಹರೀಶ್ ಬಂಗೇರ, ಸಜಿತ್ ರಾಜ್ ಚೊಕ್ಕಬೆಟ್ಟು, ಶಿವ ಭಟ್ ಸೂರ್ಯಂಬೈಲು ಉಪ್ಪಿನಂಗಡಿ, ಅವಿನಾಶ್ ಪುಣಚ, ಕಿಶೋರ್ ಮೇರ್ಲ, ಸುಜಿತ್ ಸಂಟ್ಯಾರ್, ಪ್ರಮೋದ್ ಪುಣಚ, ಬಾಲಕೃಷ್ಣ ಕುರಿಯ ಮಾಜಿ ಸೈನಿಕರು, ರಾಷ್ಟ್ರಭಕ್ತ ನಾಗರಿಕ ವೇದಿಕೆ(ರಿ) ಸುರತ್ಕಲ್ ಇದರ ಸದಸ್ಯರು ಉಪಸ್ಥಿತರಿದ್ದರು.