ವಿವೇಕಾನಂದ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ‘ಗಣೇಶೋತ್ಸವ’ ದ ತಯಾರಿಯ ಸಂಕೇತವಾಗಿ ವಿವೇಕಾನಂದರ ಪ್ರತಿಮೆಯ ಬಳಿ ಸುಮಾರು ಬೃಹತ್ 50 ಅಡಿಯ ಕೇಸರಿ ದ್ವಜವನ್ನು ಸ್ಥಾಪಿಸಲಾಯಿತು. ಹಿಂದುತ್ವದ ಭದ್ರಕೋಟೆ ಸಂಘದ ಊರೆಂದು ಹೆಸರುವಾಸಿದ ಮತ್ತು ರಾಷ್ಟ್ರೀಯ ಚಿಂತನೆಯ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ ವಿವೇಕಾನಂದ ಕಾಲೇಜು. ಐವತ್ತು ಅಡಿಯ ಧ್ವಜ ವನ್ನು ಕ್ರೇನ್ ಮುಖಾಂತರ ಅಳವಡಿಸಿದ್ದು ವಿಶೇಷವಾಗಿದೆ.
ಧ್ವಜ ಅಳವಡಿಕೆಯ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯ ನಿರ್ವಹಣಾಧಿಕಾರಿ ಶ್ರೀ.ಭಾಸ್ಕರ್, ಪುತ್ತೂರು ನಗರಮಂಡಲ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರಾದ ಶ್ರೀ.ನಿತೇಶ್ ಕಲ್ಲೇಗ ತೆಂಗಿನಕಾಯಿ ಹೊಡೆಯುವ ಮೂಲಕ ಚಾಲನೆ ನೀಡಿದರು. ಜೊತೆಗೆ ವಿವಿಧ ಸಂಸ್ಥೆಯ ದೇಶಭಕ್ತ ವಿದ್ಯಾರ್ಥಿಗಳು,ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳುಉಪಸ್ಥಿತಿ ಇದ್ದರು. ಪ್ರಸ್ತುತ ಈ ಧ್ವಜವನ್ನು ವಿದ್ಯಾರ್ಥಿಗಳು ಅಳವಡಿಕೆಯ ಮಾಡುವ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗುತ್ತಿದೆ