ಪುತ್ತೂರು : ಭಾರತ್ ಕೋ ಅಪರೇಟಿವ್ ಬ್ಯಾಂಕ್(ಮುಂಬಯಿ) ಲಿಮಿಟೆಡ್ ಇಲ್ಲಿ 46ನೇ ವರ್ಷದ ಸ್ಥಾಪಕ ದಿನ ಆಚರನೆಯನ್ನು ದಿನಾಂಕ 21.08.2024ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮುಲ್ಕಿ ವಿಜಯಾ ಕಾಲೇಜ್ ನ ನಿವೃತ್ತ ಪ್ರೊಫೆಸರ್ ಎಸ್ ಗೋವಿಂದ ಭಟ್ ಉದ್ಘಾಟಿಸಿ ದರು.ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಆದುನಿಕ ಪೈಪೋಟಿಯ ಯುಗದಲ್ಲಿ ಬ್ಯಾಂಕಿಗ್ ಕ್ಷೇತ್ರವು ಸಾರ್ವಜನಿಕ ವಲಯದಲ್ಲಿ ಅತೀ ಅಗತ್ಯ ಕ್ಷೇತ್ರವಾಗಿದೆ.ಅದರೆ ಇಂದು ನಮ್ಮ ಸರಕಾರಿ ಬ್ಯಾಂಕ್ ಗಳ ಸೇವೆಗಳಿಂದ ಜನ ರೋಸಿ ಹೋಗಿದ್ದಾರೆ.ನಾವು ಸರಕಾರಿ ಬ್ಯಾಂಕ್ ಗಳಿಗೆ ಲೋನ್ ಅಥವಾ ನಮ್ಮದೇ ಹಣವನ್ನು ಡೆಪಾಸಿಟ್ ಮಾಡಲು ಹೋದರೂ ಸೌಜನ್ಯಕ್ಕಾದರು ಮಾತನಾಡುವ ಸಿಬ್ಬಂದಿಗಲಿಲ್ಲ, ಇದರಿಂದ ತಾನೂ ಸ್ವಲ್ಪ ಸರಕಾರಿ ಬ್ಯಾಂಕ್ ಗಳಿಂದ ದೂರ ಉಳಿದಿದ್ದೇನೆ ಅಂದರು. ಆದರೆ ಇದೇ ಸಮಯದಲ್ಲಿ ಪುತ್ತೂರಿನ ಭಾರತ್ ಬ್ಯಾಂಕ್ ನ ಮೆನೇಜರ್ ಹಾಗೂ ಸಿಬ್ಬಂದಿಗಳ ನಗು ಮುಖದ ಸೇವೆಯಿಂದಾಗಿ ಇಲ್ಲಿಗೆ ಬಂದ ಗ್ರಾಹಕರು ಮತ್ತೆಂದೂ ಈ ಬ್ಯಾಂಕ್ ಗಳಲ್ಲಿ ವ್ಯವಹಾರವನ್ನು ಬಿಡುವ ಪ್ರಶ್ನೆಯೇ ಇಲ್ಲ ,ಆ ಮಟ್ಟಿಗೆ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಾರೆ. ಇವರ ಸೇವೆ ಪುತೂರಿನ ಎಲ್ಲಾ ಸಾರ್ವಜನಿಕರಿಗೆ ಸಿಗಲಿ ಮತ್ತು ಇನ್ನೂ ಹೆಚ್ಚಿನ ಬ್ರಾಂಚ್ ಗಳನ್ನು ಪುತ್ತೂರಿನಲ್ಲಿ ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.
ಪದ್ಮ ಸೋಲಾರ್ ನ ಮಾಲಕರಾದ ಪದ್ಮನಾಭ ಶೆಟ್ಟಿ ಯವರು ಮಾತನಾಡಿ ಪುತ್ತೂರು ಭಾರತ್ ಬ್ಯಾಂಕ್ ನ ಈಗಿನ ಹಾಗೂ ಈ ಹಿಂದಿನ ಎಲ್ಲಾ ಮೆನೇಜರ್ ಗಳು ನನಗೆ ತುಂಬಾ ಆತ್ಮೀಯರಾಗಿದ್ದರು.ಆ ಕಾರಣದಿಂದ ನಾನೂ ಕೂಡ ಈ ಸಂಸ್ಥೆಯ ಗ್ರಾಹಕನಾಗಿದ್ದೇನೆ ಹಾಗೂ ಬ್ಯಾಂಕ್ ಗೆ ಬರುವ ಎಲ್ಲಾ ಗ್ರಾಹಕರನ್ನು ಬಂದ ಕೂಡಲೇ ತಮ್ಮ ಕೆಲಸವನ್ನು ಮಾಡಿ ಸಮಯವನ್ನು ವ್ಯಯಿಸದೆ. ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಾರೆ, ಇದು ಇಲ್ಲಿನ ಬ್ಯಾಂಕ್ ಪ್ರಬಂಧಕರು ಮತ್ತು ಸಿಬ್ಬಂದಿಗಳ ಸೇವೆಗೆ ನಿದರ್ಶನವಾಗಿದೆ ಎಂದು ಶುಭ ಕೋರಿದರು.
ಮೂರ್ತೆದಾರರ ಸೇವಾ ಸಹಕಾರ ಸಂಘ ಕುಂಬ್ರ ಇದರ ಅಧ್ಯಕ್ಷ ರಾದ ಆರ್.ಸಿ.ನಾರಾಯಣ ಇವರು ಮಾತನಾಡಿ ಈ ಒಂದು ಬ್ಯಾಂಕ್ ಪುತ್ತೂರಿನಲ್ಲಿ ಅತ್ಯಲ್ಪ ಸಮಯದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಮುಟ್ಟುವಲ್ಲಿ ಯಶಸ್ವಿಯಾಗಿದೆ, ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಸಿಬ್ಬಂದಿಗಳ ಗ್ರಾಹಕರೊಂದಿಗೆ ಇರುವ ವ್ಯವಹಾರದ ನಾಜೂಕು ಈ ಮಟ್ಟಿಗೆ ಬೆಳೆಸಿದೆ.ಈಗಾಗಲೇ ಈ ಒಂದು ಸಂಸ್ಥೆ ಹೊಂದಿರುವ ಬ್ರಾಂಚ್ ಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಎರಡರಷ್ಟು ಪಟ್ಟು ಹೆಚ್ಚಾಗಿ ಬೆಳೆಯಲಿ ಎಂದು ಶುಬ ಹಾರೈಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಜಯಂತ್ ನಡುಬೈಲು, ಸತೀಶ್ ಕೆಡೆಂಜಿ,ನವೀನ್ ಶೆಟ್ಟಿ,ಗೀತಾ ಭಟ್,ಗುರುಪ್ರಸಾದ್,ರಾಮ್ ಭಟ್,ಸಂಜೀವ ಆಳ್ವ, ಕೆ. ಚಂದ್ರಶೇಖರ ಪೂಜಾರಿ,ಸುಧಾಕರ ಕೆ.ಪಿ,ಶ್ರೀ ಲತಾ ಎಸ್
ರೈ, ಶಾಖಾ ಪ್ರಬಂದಕರಾದ ಲಕ್ಷ್ಮೀಶ್ ಮೊಗೆರಾಯ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ದ ನಿರೂಪಣೆಯನ್ನು ಹರೀಶ್ ಶಾಂತಿ ನಡೆಸಿಕೊಟ್ಟರು, ಭಾಸ್ಕರ್ ಸರಪಾಡಿ ಧನ್ಯವಾದ ಸಮರ್ಪಣೆ ಮಾಡಿದರು.