ಆಂಧ್ರಪ್ರದೇಶ: ಚಿನ್ನ ಮತ್ತು ಚಿನ್ನದ ಆಭರಣಗಳನ್ನು ಧರಿಸುವುದು ಭಾರತೀಯ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ ಆದರೆ ಇಂದು ಕೆಲವರು ಅದನ್ನು ಶೋಕಿಗಾಗಿ ಬಳಸುವುದು ಉಂಟು, ಕೆಲವರು ಹತ್ತು ಬೆರಳುಗಳಲ್ಲಿ ಹತ್ತು ಉಂಗುರ ಕೊರಳಿಗೆ ದೊಡ್ಡದಾದ ಸರ ಹಾಕಿಕೊಂಡು ಮೆರೆಯುವುವುದು ಉಂಟು ಆದರೆ ಇಲ್ಲೊಂದು ಕುಟುಂಬ ಒಂದಲ್ಲ ಎರಡಲ್ಲ ಬರೋಬ್ಬರಿ ಇಪ್ಪತೈದು ಕೆಜಿ ಚಿನ್ನಾಭರಣ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಬಂದಿದ್ದಾರೆ, ಇವರನ್ನು ಕಂಡು ಅಲ್ಲಿದ್ದ ಭಕ್ತರೂ ಒಮ್ಮೆ ದಂಗಾಗಿದ್ದಾರೆ.
ತಿರುಪತಿ ತಿಮ್ಮಪ್ಪ ದೇವಸ್ಥಾನ ಅತೀ ಹೆಚ್ಚು ಭಕ್ತರನ್ನು ಹೊಂದಿರುವ ದೇವಸ್ಥಾನ ಇಲ್ಲಿನ ದೇವಸ್ಥಾನಕ್ಕೆ ದೇಶದ ನಾನಾ ಭಾಗದಿಂದ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ ತಮ್ಮ ಇಷ್ಟಾರ್ಥ ಸೇವೆಗಳನ್ನು ನೀಡಿ ಧನ್ಯರಾಗುತ್ತಾರೆ. ಅಲ್ಲದೆ ಇನ್ನೂ ಕೆಲ ಭಕ್ತರು ಹರಕೆ ರೂಪದಲ್ಲಿ ಚಿನ್ನ, ಬೆಳ್ಳಿ, ವಜ್ರ ಹೀಗೆ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಹರಕೆಗಳನ್ನು ಸಲ್ಲಿಸುತ್ತಾರೆ. ಅದೇ ರೀತಿ ಇಲ್ಲೊಂದು ಪುಣೆ ಮೂಲದ ಕುಟುಂಬವೊಂದು ತಮ್ಮ ಕೊರಳಿಗೆ ಸುಮಾರು ಇಪ್ಪತೈದು ಕೆಜಿ ತೂಕದ ಚಿನ್ನದ ಆಭರಣಗಳನ್ನು ಧರಿಸಿಕೊಂಡು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಇದೆ ಆಗಸ್ಟ್ 22 ರಂದು ಬಂದಿದ್ದು ಇಬ್ಬರು ಪುರುಷರು, ಓರ್ವ ಮಹಿಳೆ ಹಾಗೂ ಒಂದು ಮಗು ಸೇರಿ ನಾಲ್ವರಿದ್ದ ಸದಸ್ಯರಲ್ಲಿ ಇಬ್ಬರು ಪುರುಷರ ಕೊರಳಿನಲ್ಲಿ ಕೆಜಿಗಟ್ಟಲೆ ಚಿನ್ನದ ಆಭರಣ ಕಂಡುಬಂದಿದೆ, ಅಲ್ಲದೆ ಮಹಿಳೆಯೂ ಚಿನ್ನದ ಬಣ್ಣದ ಸೀರೆ ಉಟ್ಟಿದ್ದು ಇದೂ ಕೂಡಾ ಚಿನ್ನದ ಲೇಪನದಿಂದ ಕೂಡಿದುದಾಗಿದೆ ಎಂದು ಹೇಳಲಾಗಿದೆ.