ಹಾಸನ: ಖತರ್ನಾಕ್ ಐಡಿಯಾ ಮೂಲಕ ಇನ್ಸೂರೆನ್ಸ್ ಹಣ ಪಡೆಯಲು ಗಂಡನನ್ನೆ ಹೋಲುವ ವ್ಯಕ್ತಿಯನ್ನು ಹತ್ಯೆ ಮಾಡಿದ ಮಹಿಳೆ
ಇನ್ಶೂರೆನ್ಸ್ ಹಣ ಪಡೆಯಲು ಅಮಾಯಕನನ್ನು ಕೊಲೆ ಮಾಡಿ ಅಪಘಾತದ ನಾಟಕವಾಡಿದ್ದ ಗಂಡ ಹೆಂಡತಿಯ ಖತರ್ನಾಕ್ ಪ್ಲಾನ್ ಒಂದನ್ನು ಪೊಲೀಸರು ಬಯಲುಮಾಡಿದ್ದಾರೆ. ಸಾಲ ತೀರಿಸಲೆಂದು ಇನ್ಶೂರೆನ್ಸ್ ಹಣ ಪಡೆಯಲು ದಂಪತಿ ಪ್ಲಾನ್ ಮಾಡಿದ್ದರು. ಮುನಿಸ್ವಾಮಿ ಎಂಬವರು ಇನ್ಶೂರೆನ್ಸ್ ಹಣಕ್ಕಾಗಿ ತಮ್ಮನ್ನೇ ಹೋಲುವ ವ್ಯಕ್ತಿಯನ್ನು ಹುಡುಕಿ ಕೊಲೆ ಮಾಡಿ ಅಪಘಾತವೆಂಬಂತೆ ಬಿಂಬಿಸಿದ್ದರು.
ಪ್ರಕರಣದ ಆರೋಪಿಯಾದ ಪತಿ ಪೊಲೀಸರಿಗೆ ಶರಣಾಗಿದ್ದು, ಪತ್ನಿ ಪರಾರಿಯಾಗಿದ್ದಾಳೆ.
ತನನ್ನು ಬಜಾವ್ ಮಾಡುವಂತೆ ಪತಿ ಶಿಡ್ಲಘಟ್ಟ ಇನ್ಸ್ಪೆಕ್ಟರ್ ಮೊರೆ ಹೋಗಿದ್ದು ಶಿಡ್ಲಘಟ್ಟ ಇನ್ಸ್ಪೆಕ್ಟರ್ ಗಂಡಸಿ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬಯಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಅರಸೀಕೆರೆ ತಾಲೂಕಿನ, ಗೊಲ್ಲರಹೊಸಳ್ಳಿ ಗೇಟ್ ಬಳಿ ಲಾರಿ ಡಿಕ್ಕಿಯಾಗಿ ವ್ಯಕ್ತಿ ಮೃತಪಟ್ಟಿದ್ದು, ಹೊಸಕೋಟೆ ಮೂಲದ ಶಿಲ್ಪರಾಣಿ ಜಿಲ್ಲಾಸ್ಪತ್ರೆಗೆ ಬಂದು ಶವದ ಗುರುತು ಪತ್ತೆ ಹಚ್ಚಿ ಪತಿ ಮುನಿಸ್ವಾಮಿಗೌಡರದ್ದು ಎಂದು ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಿದ್ದರು.
ಹೊಸಕೋಟೆಯಲ್ಲಿ ಟೈರ್ ಅಂಗಡಿ ಇಟ್ಟುಕೊಂಡಿದ್ದ ಮುನಿ ಸ್ವಾಮಿ ಗೌಡ, ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ದಂಪತಿ ಮುನಿಸ್ವಾಮಿಗೌಡನನ್ನೇ ಹೋಲುವ ವ್ಯಕ್ತಿಯನ್ನ ಹುಡುಕಿ ಹತ್ಯೆಗೆ ಪ್ಲಾನ್ ಮಾಡಿದ್ದಾರೆ. ವ್ಯಕ್ತಿಯನ್ನು ಕಾರಿನಲ್ಲಿ ಕರೆತಂದು ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿ ಬಳಿ ಹತ್ಯೆ ಮಾಡಿ ಲಾರಿ ಚಾಲಕನ ಜೊತೆ ಸೇರಿ ಲಾರಿ ಡಿಕ್ಕಿ ಹೊಡೆಸಿ ಅಪಘಾತದಿಂದ ಸಾವು ಎಂಬಂತೆ ಬಿಂಬಿಸಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಘಟನೆ ಬಳಿಕ ಮುನಿಸ್ವಾಮಿ ತಲೆಮರಿಸಿಕೊಂಡಿದ್ದ. ಮುಂದೇನು ಮಾಡಬೇಕೆಂದು ತಿಳಿಯದೆ ಆರೋಪಿ ಮುನಿಸ್ವಾಮಿ ಸಂಬಂಧಿ ಇನ್ಸ್ಪೆಕ್ಟರ್ ಮುಂದೆ ಹಾಜರಾಗಿದ್ದ. ನಡೆದ ಘಟನೆ ವಿವರಿಸಿ ರಕ್ಷಣೆಗೆ ಅಂಗಲಾಚಿದ್ದ. ಇನ್ಸ್ಪೆಕ್ಟರ್ ಗಂಡಸಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.