ಕೋಡಿಂಬಾಡಿ ಹಾಲು ಉದ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು 2023-2024 ನೇ ಸಾಲಿನಲ್ಲಿ ರೂ 34.546.75 ನಿವ್ವಳ ಲಾಭ ಗಳಿಸಿದೆ. ಲಾಭoಶದಲ್ಲಿ ಸದಸ್ಯರಿಗೆ 0.27 ಪೈಸೆ ಬೋನಸ್ ನೀಡಲಾಗುವುದೆಂದು ಸಂಘದ ಅಧ್ಯಕ್ಷರಾದ ಜಗನ್ನಾಥ್ ಶೆಟ್ಟಿ ನಡುಮನೆ ಅವರು ಸಾಮಾನ್ಯ ಸಭೆ ಯಲ್ಲಿ ಹೇಳಿದರು. ಸಭೆಯು 5-09-2024 ರಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಸಭಾ ಭವನ ದಲ್ಲಿ ನಡೆಯುತು.
ಸಂಘದ ಅಧ್ಯಕ್ಷರು ಮಾತನಾಡಿ ವರದಿ ವರ್ಷದಲ್ಲಿ ಸಂಗವು 329 ಸದಸ್ಯರಿಂದ 68.750 ರೂ ಪಾಲು ಬಂಡವಾಳ ಹೊಂದಿದೆ ವರದಿ ವರ್ಷದಲ್ಲಿ ಒಟ್ಟು 1.69.560.20 ಲೀಟರ್ ಹಾಲು ಖರೀದಿ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ಸಿಗುವ ವಿವಿಧ ಯೋಜನೆಗಳನ್ನು ಸದಸ್ಯರಿಗೆ ತಿಳಿಸಿ ಸಂಘದಲ್ಲಿ ಹೆಚ್ಚು ಹಾಲು ಸಂಗ್ರಹಿಸುವುದು ಗುರಿಯೆಂದು ಹೇಳಿದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀಮತಿ ಮಾಲತಿ ಅವರು ಒಕ್ಕೂಟದ ದೊರೆಯುವ ಸ್ವಾಲಭ್ಯ ಗಳನು ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು.
ವರದಿ ವರ್ಷದಲ್ಲಿ ಸಂಗಕ್ಕೆ ಅತಿಹೆಚ್ಚು ಹಾಲು ಪೂರೈಸಿದ ನಾರಾಯಣ ಶೆಟ್ಟಿ ಗುತ್ತಿನಮನೆ ಪ್ರಥಮ, ಲೀಲಾವತಿ ನಾಯ್ಕ ದ್ವಿತೀಯ, ಮತ್ತು ಡೆಕ್ಕಜೆ ವೀರಪ್ಪ ಪೂಜಾರಿ ತೃತೀಯ, ಅವರನ್ನು ಸನ್ಮಾನಿಸಲಾಯಿತು.
ಮತ್ತು ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಉಪಾಧ್ಯಕ್ಷರಾದ ಕೇಶವ ಗೌಡ, ನಿರ್ದೇಶಕರಾದ ವಿಜಯಲಕ್ಷ್ಮಿ, ರಾಧಿಕಾ ಸಮಂತ್, ಅಶೋಕ ಗೌಡ, ಚಂದ್ರಶೇಖರ್ ರೈ, ರತ್ನವರ್ಮ ಆಳ್ವ, ಸಂತೋಷ್ ರೈ ಕೇದಿಕಂಡೆ, ರೇಣುಕಾ ರೈ ಯo, ಲೀಲಾವತಿ ನಾಯ್ಕ, ಬಾಬು ಆಚಾರ್ಯ, ಎಳ್ಯನ್ನ ಗೌಡ, ಕಾರ್ಯದರ್ಶಿ ರಮೇಶ್ ಪೂಜಾರಿ ಉಪಸ್ಥಿತರಿದ್ದರು.
ಹರಿಣಾಕ್ಷಿ ಪ್ರಾರ್ಥನೆ ಮಾಡಿದರು
ಸಿಬಂದಿ ನಾರಾಯಣ ಸ್ವಾಗತಿಸಿದರು ಕಾರ್ಯದರ್ಶಿ ರಮೇಶ್ ವರದಿ ವಾಚಿಸಿದರು . ಸಂಘದ ನಿರ್ದೇಶಕ ಸಂತೋಷ್ ರೈ ಧನ್ಯವಾದ ಸಮರ್ಪಣೆ ಮಾಡಿದರು ಸಹಾಯಕಿ ಕವಿತಾ ಸಹಕರಿಸಿದರು.