ಗಣೇಶ ಹಬ್ಬ ಅಂದ್ರೆ, ಸಡಗರ ಸಂಭ್ರಮ ವೈಭವೋಪೇತವಾಗಿ ಗಣೇಶೋತ್ಸವ ನಡೆಸಲಾಗುತ್ತದೆ. ಮೆರವಣಿಗೆಯಂತೂ ಬಲು ಜೋರು. ಎಲ್ಲ ಕಡೆಯೂ ಅಷ್ಟೆ ಗಣಪನನ್ನು ವಿಜೃಂಭಣೆಯಿಂದ ಆರಾಧಿಸಲಾಗಿತ್ತು. ಬಳಿಕ ಮೂಷಿಕ ವಾಹನನನ್ನು ನೀರಿಗೆ ವಿಸರ್ಜನೆ ಮಾಡಿದ್ದಾರೆ. ಸಂಭ್ರಮದಲ್ಲಿದ್ದವರಿಗೆ ಅದೊಂದು ವಿಚಾರ ಥಟ್ಟನೆ ಹೊಳೆದು ಆಘಾತವಾಗಿದೆ. ಗಣಪ ವಿಸರ್ಜನೆ ವೇಳೆ ಅವರು ಎಡವಟ್ಟು ಮಾಡಿಕೊಂಡಿದ್ದಾರೆ ಅದೇನೆಂದರೆ ಬಂಗಾರದ ಸರ ಕೂಡ ನೀರಿಗೆ ಬಿಟ್ಟಿದ್ದಾರೆ
ಗಣೇಶನಿಗಾಗಿ ಸುಮಾರು 65 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಮಾಡಲಾಗಿತ್ತು.ಆದರೆ, ಸಂಜೆ ವಿರ್ಸಜನೆ ವೇಳೆ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ಬೆಂಗಳೂರಿನ ಮಾಗಡಿರೋಡ್ನ ದಾಸರಹಳ್ಳಿಯ ಬಿ.ಆರ್.ಐ ಕಾಲೋನಿಯಲ್ಲಿ ಘಟನೆ ನಡೆದಿದೆ.
ಕಾಪಾಡಿದ ಗಣಪತಿ. ಸರ ಹೇಗೆ ಸಿಕ್ಕಿತು….?
ಏರಿಯಾದಲ್ಲಿ ಮನೆಯಲ್ಲಿಟ್ಟ ಗಣೇಶ ವಿಸರ್ಜನೆಗಾಗಿ ಬಿಬಿಎಂಪಿಯಿಂದ ಟ್ರಕ್ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆ ಯುವಕರು ಸಂಜೆ 7 ಗಂಟೆ ಸುಮಾರಿಗೆ ಹೋಗಿ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ರಾತ್ರಿ ಹತ್ತು ಗಂಟೆಯ ಸುಮಾರಿಗೆ ಚಿನ್ನದ ಸರದ ನೆನಪಾಗಿದೆ. ಅಯ್ಯೋ ಗಣಪತಿ ಎಂದು ಓಡಿದ ಯುವಕರು ತಕ್ಷಣ ಟ್ರಕ್ನ ಚಾಲಕ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ.
ವೇಳೆ ಟ್ರಕ್ನಲ್ಲಿದ್ದ ನೀರನ್ನು ಖಾಲಿ ಮಾಡಿ, ಗಣೇಶ ಮೂರ್ತಿ ಕರಗಿದ್ದ ಮಣ್ಣಲ್ಲಿ ಚಿನ್ನದ ಸರಕ್ಕೆ ಹುಡುಕಾಟ ನಡೆಸಿದ್ದಾರೆ. ರಾತ್ರಿಯೆಲ್ಲ ಹುಡುಕಾಡಿದ ಬಳಿಕ ಬೆಳಗಿನ ಜಾವ 65 ಗ್ರಾಂ ಚಿನ್ನದ ಸರ ಸಿಕ್ಕಿದೆ. ಚಿನ್ನದ ಸರ ಕಂಡು ಯುವಕರಿಗೆ ಹೋದ ಜೀವ ಬಂದಂತಾಗಿ ಮತ್ತೆ ಗಣಪತಿಗೆ ಸಾಷ್ಟಾಂಗ ಪ್ರಾಣಾಮ ಸಲ್ಲಿಸಿ ನಿಟ್ಟುಸಿರು ಬಿಟ್ಟಿದ್ದಾರೆ