• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರು; ಕೋಡಿಂಬಾಡಿ ಗ್ರಾ.ಪಂ. ಕಚೇರಿಯಲ್ಲಿ ಅಕ್ರಮ ಸಕ್ರಮ ಬೈಠಕ್ ಮತ್ತು ಹಕ್ಕು‌ಪತ್ರ ವಿತರಣೆ

ಪುತ್ತೂರು; ಕೋಡಿಂಬಾಡಿ ಗ್ರಾ.ಪಂ. ಕಚೇರಿಯಲ್ಲಿ ಅಕ್ರಮ ಸಕ್ರಮ ಬೈಠಕ್ ಮತ್ತು ಹಕ್ಕು‌ಪತ್ರ ವಿತರಣೆ

September 10, 2024
ಬಿಜೆಪಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಮಹಿಳಾ ದಿನಾಚರಣೆ  ತೇಜಸ್ವಿನಿ ಪೂಜಾರಿ ರಾಷ್ಟ್ರಮಟ್ಟದ ವೆಯ್ಟ್ ಲಿಫ್ಟರ್ ಸನ್ಮಾನ

ಬಿಜೆಪಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಮಹಿಳಾ ದಿನಾಚರಣೆ ತೇಜಸ್ವಿನಿ ಪೂಜಾರಿ ರಾಷ್ಟ್ರಮಟ್ಟದ ವೆಯ್ಟ್ ಲಿಫ್ಟರ್ ಸನ್ಮಾನ

March 17, 2026
ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಭಟ್‌ ವಿಧಿವಶ

ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಭಟ್‌ ವಿಧಿವಶ

March 16, 2026
ಪತಿಯನ್ನು ಬಿಡುಗಡೆ ಮಾಡಲು ಹೋದ ಮಹಿಳೆಗೆ ಪೊಲೀಸ್ ಇನ್ಸ್‌ಪೆಕ್ಟರ್ ನಿಂದ ಡಿಮ್ಯಾಂಡ್-  ಹಣವನ್ನು ಕೊಡು ಅಥವಾ ನೀನು ನನ್ನೊಂದಿಗೆ ಬಂದು ಮಲಗು ಬೇಡಿಕೆ!

ಪತಿಯನ್ನು ಬಿಡುಗಡೆ ಮಾಡಲು ಹೋದ ಮಹಿಳೆಗೆ ಪೊಲೀಸ್ ಇನ್ಸ್‌ಪೆಕ್ಟರ್ ನಿಂದ ಡಿಮ್ಯಾಂಡ್- ಹಣವನ್ನು ಕೊಡು ಅಥವಾ ನೀನು ನನ್ನೊಂದಿಗೆ ಬಂದು ಮಲಗು ಬೇಡಿಕೆ!

March 17, 2026
ಉಡುಪಿ: ಎಲ್‌ಪಿಜಿ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ

ಉಡುಪಿ: ಎಲ್‌ಪಿಜಿ ಗ್ಯಾಸ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ

March 16, 2026
ಪುತ್ತೂರು: ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿ.ಬಿ.ಜಿ) ಘಟಕ ಲೋಕಾರ್ಪಣೆ

ಪುತ್ತೂರು: ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿ.ಬಿ.ಜಿ) ಘಟಕ ಲೋಕಾರ್ಪಣೆ

March 16, 2026
ಬೆಳ್ತಂಗಡಿ: ಕುಂಡದಬೆಟ್ಟು ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ಸಂತ ಜಾನ್ ಪೌಲ್ ಚರ್ಚ್ ಕುಂಡದಬೆಟ್ಟು ರಸ್ತೆ ಉದ್ಘಾಟನೆ

ಬೆಳ್ತಂಗಡಿ: ಕುಂಡದಬೆಟ್ಟು ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ಸಂತ ಜಾನ್ ಪೌಲ್ ಚರ್ಚ್ ಕುಂಡದಬೆಟ್ಟು ರಸ್ತೆ ಉದ್ಘಾಟನೆ

March 16, 2026
ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಕನಸಿನ ಯೋಜನೆ: ಪುತ್ತೂರು-ಬೆಳ್ತಂಗಡಿ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಮುಗೇರಡ್ಕದಲ್ಲಿ ನಿರ್ಮಾಣವಾಗುತ್ತಿರುವ  ಏತ ನೀರಾವರಿ ಯೋಜನೆ ಮತ್ತು ಸೇತುವೆ  ಅಭಿವೃದ್ಧಿ  ಕಾಮಗಾರಿಯ ಪ್ರಗತಿ ಪರಿಶೀಲನೆ

ಗುಂಡ್ಯ ಸಮೀಪ ರಾಜಹಂಸ ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತ ಮೂವರು ಸ್ಥಳದಲ್ಲೇ ಮೃತ್ಯು

ಗುಂಡ್ಯ ಸಮೀಪ ರಾಜಹಂಸ ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತ ಮೂವರು ಸ್ಥಳದಲ್ಲೇ ಮೃತ್ಯು

March 17, 2026
ಬಂದಾರು :ಮಾ.11 ಬಂದಾರು ಗ್ರಾಮ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ  ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ಯವರಿಂದ  ಶುದ್ಧ ನೀರಿನ ಘಟಕದ ಕೊಡುಗೆ

ಬಂದಾರು :ಮಾ.11 ಬಂದಾರು ಗ್ರಾಮ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ಯವರಿಂದ ಶುದ್ಧ ನೀರಿನ ಘಟಕದ ಕೊಡುಗೆ

March 12, 2026
ದೇವಸ್ಥಾನಗಳ ಅನ್ನಪ್ರಸಾದಕ್ಕೂ ಗ್ಯಾಸ್ ಕೊರತೆ- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ

ದೇವಸ್ಥಾನಗಳ ಅನ್ನಪ್ರಸಾದಕ್ಕೂ ಗ್ಯಾಸ್ ಕೊರತೆ- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ

March 12, 2026
LPG ಸಂಕಷ್ಟದಿಂದಲ್ಲ-ಅದಾನಿ ಮತ್ತು ಎಪ್‌ಸ್ಟೀನ್ ಪ್ರಕರಣಗಳಿಂದ ಪ್ರಧಾನಿ ಮೋದಿ ‘ಪ್ಯಾನಿಕ್’ ಆಗಿದ್ದಾರೆ : ರಾಹುಲ್ ಗಾಂಧಿ

LPG ಸಂಕಷ್ಟದಿಂದಲ್ಲ-ಅದಾನಿ ಮತ್ತು ಎಪ್‌ಸ್ಟೀನ್ ಪ್ರಕರಣಗಳಿಂದ ಪ್ರಧಾನಿ ಮೋದಿ ‘ಪ್ಯಾನಿಕ್’ ಆಗಿದ್ದಾರೆ : ರಾಹುಲ್ ಗಾಂಧಿ

March 12, 2026
ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ

ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ

March 12, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Wednesday, March 18, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಬಿಜೆಪಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಮಹಿಳಾ ದಿನಾಚರಣೆ  ತೇಜಸ್ವಿನಿ ಪೂಜಾರಿ ರಾಷ್ಟ್ರಮಟ್ಟದ ವೆಯ್ಟ್ ಲಿಫ್ಟರ್ ಸನ್ಮಾನ

    ಬಿಜೆಪಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಮಹಿಳಾ ದಿನಾಚರಣೆ ತೇಜಸ್ವಿನಿ ಪೂಜಾರಿ ರಾಷ್ಟ್ರಮಟ್ಟದ ವೆಯ್ಟ್ ಲಿಫ್ಟರ್ ಸನ್ಮಾನ

    ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಭಟ್‌ ವಿಧಿವಶ

    ಪ್ರಸಿದ್ದ ಶ್ರೀ ಕ್ಷೇತ್ರ ಪೊಳಲಿ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಭಟ್‌ ವಿಧಿವಶ

    ಪುತ್ತೂರು: ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿ.ಬಿ.ಜಿ) ಘಟಕ ಲೋಕಾರ್ಪಣೆ

    ಪುತ್ತೂರು: ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿ.ಬಿ.ಜಿ) ಘಟಕ ಲೋಕಾರ್ಪಣೆ

    ಬೆಳ್ತಂಗಡಿ: ಕುಂಡದಬೆಟ್ಟು ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ಸಂತ ಜಾನ್ ಪೌಲ್ ಚರ್ಚ್ ಕುಂಡದಬೆಟ್ಟು ರಸ್ತೆ ಉದ್ಘಾಟನೆ

    ಬೆಳ್ತಂಗಡಿ: ಕುಂಡದಬೆಟ್ಟು ರೂ.10 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ಸಂತ ಜಾನ್ ಪೌಲ್ ಚರ್ಚ್ ಕುಂಡದಬೆಟ್ಟು ರಸ್ತೆ ಉದ್ಘಾಟನೆ

    ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಕನಸಿನ ಯೋಜನೆ: ಪುತ್ತೂರು-ಬೆಳ್ತಂಗಡಿ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಮುಗೇರಡ್ಕದಲ್ಲಿ ನಿರ್ಮಾಣವಾಗುತ್ತಿರುವ  ಏತ ನೀರಾವರಿ ಯೋಜನೆ ಮತ್ತು ಸೇತುವೆ  ಅಭಿವೃದ್ಧಿ  ಕಾಮಗಾರಿಯ ಪ್ರಗತಿ ಪರಿಶೀಲನೆ

    ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಕನಸಿನ ಯೋಜನೆ: ಪುತ್ತೂರು-ಬೆಳ್ತಂಗಡಿ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಮುಗೇರಡ್ಕದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಯೋಜನೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿಯ ಪ್ರಗತಿ ಪರಿಶೀಲನೆ

    ಗುಂಡ್ಯ ಸಮೀಪ ರಾಜಹಂಸ ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತ ಮೂವರು ಸ್ಥಳದಲ್ಲೇ ಮೃತ್ಯು

    ಗುಂಡ್ಯ ಸಮೀಪ ರಾಜಹಂಸ ಬಸ್ ಹಾಗೂ ಸ್ವಿಫ್ಟ್ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತ ಮೂವರು ಸ್ಥಳದಲ್ಲೇ ಮೃತ್ಯು

    ಬಂದಾರು :ಮಾ.11 ಬಂದಾರು ಗ್ರಾಮ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ  ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ಯವರಿಂದ  ಶುದ್ಧ ನೀರಿನ ಘಟಕದ ಕೊಡುಗೆ

    ಬಂದಾರು :ಮಾ.11 ಬಂದಾರು ಗ್ರಾಮ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ಯವರಿಂದ ಶುದ್ಧ ನೀರಿನ ಘಟಕದ ಕೊಡುಗೆ

    ದೇವಸ್ಥಾನಗಳ ಅನ್ನಪ್ರಸಾದಕ್ಕೂ ಗ್ಯಾಸ್ ಕೊರತೆ- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ

    ದೇವಸ್ಥಾನಗಳ ಅನ್ನಪ್ರಸಾದಕ್ಕೂ ಗ್ಯಾಸ್ ಕೊರತೆ- ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ

    ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ

    ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್‌ ಕುಸಿತ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ದಕ್ಷಿಣ ಕನ್ನಡ

ಪುತ್ತೂರು; ಕೋಡಿಂಬಾಡಿ ಗ್ರಾ.ಪಂ. ಕಚೇರಿಯಲ್ಲಿ ಅಕ್ರಮ ಸಕ್ರಮ ಬೈಠಕ್ ಮತ್ತು ಹಕ್ಕು‌ಪತ್ರ ವಿತರಣೆ

by ಪ್ರಜಾಧ್ವನಿ ನ್ಯೂಸ್
September 10, 2024
in ದಕ್ಷಿಣ ಕನ್ನಡ, ಪುತ್ತೂರು, ರಾಜ್ಯ
0
ಪುತ್ತೂರು; ಕೋಡಿಂಬಾಡಿ ಗ್ರಾ.ಪಂ. ಕಚೇರಿಯಲ್ಲಿ ಅಕ್ರಮ ಸಕ್ರಮ ಬೈಠಕ್ ಮತ್ತು ಹಕ್ಕು‌ಪತ್ರ ವಿತರಣೆ
79
SHARES
225
VIEWS
ShareShareShare

ಕೊಟ್ಟ ಮಾತಿನಂತೆ ಕೋರ್ಟನ್ನೇ ಮನೆ ಬಾಗಿಲಿಗೆ ತಂದಿದ್ದೇನೆ: ಶಾಸಕ ಅಶೋಕ್ ರೈಪುತ್ತೂರು:ಚುನಾವಣೆ ಪೂರ್ವದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ, ನಾಲ್ಕು ಗೋಡೆಗಳ ಮಧ್ಯೆ ಕಚೇರಿಯೊಳಗೆ ನಡೆಯುತ್ತಿದ್ದ ಅಕ್ರಮ ಸಕ್ರಮ ಬೈಠಕ್‌ನ್ನು ಪ್ರತೀ ಗ್ರಾಮದ ಪ್ರಜೆಗಳ ಮನೆ ಬಾಗಿಲಿಗೆ ತಂದು ಸ್ಥಳದಲ್ಲೇ ಹಕ್ಕು ಪತ್ರವನ್ನು ನೀಡುತ್ತಿದ್ದೇನೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಅಕ್ರಮ ಸಕ್ರಮ ಕಡತಗಳು ತಾಲೂಕು ಕಚೇರಿಯಲ್ಲಿ ದೂಳು ಹಿಡಿದಿದೆ. ಕಳೆದ ಹತ್ತು ವರ್ಷಗಳ ಹಿಂದೆ ಸಲ್ಲಿಸಿದ ಅರ್ಜಿಗಳು ಹಾಗೇ ಬಾಕಿ ಇದೆ ಅವುಗಳೆನ್ನಲ್ಲವನ್ನೂ ವಿಲೇವಾರಿ ಮಾಡಲಾಗುತ್ತಿದೆ. ಅರ್ಜಿಗಳ ಪೈಕಿ ಬಹುತೇಕ ಬಡವರ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಜನರ ಕಡತಗಳಾಗಿವೆ, ಯಾವ ಕಾರಣಕ್ಕೆ ಈ ಫೈಲುಗಳು ಬಾಕಿಯಾಗಿದೆ ಎಂದು ನನಗೂ ಗೊತ್ತಿದೆ ಅರ್ಜಿ ಹಾಕಿದವರಿಗೂ ಗೊತ್ತಿದೆ ಎಂದು ಹೇಳಿದರು.ಭ್ರಷ್ಟಾಚಾರದ ಕಾರಣಕ್ಕೆ ಕಡತಗಳು ಕೋಮಾ ಸ್ಥಿತಿಗೆ ತಲುಪಿದ್ದವು ಅಂತಹ ಕಡತಗಳಿಗೆ ಇಂಜೆಕ್ಷನ್ ಕೊಡಿಸುವ ಮೂಲಕ ಮರುಜೀವ ನೀಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಜನತೆಗೆ ಕೊಟ್ಟ ಮಾತನ್ನು ಪಾಲಿಸಿಯೇ ಸಿದ್ದ ಎಂದು ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ಒಟ್ಟು 30 ಅಕ್ರಮ ಸಕ್ರಮ ಮತ್ತು 30 94 ಸಿ ಹಕ್ಕು ಪತ್ರವನ್ನು ಶಾಸಕರು ವಿತರಣೆ ಮಾಡಿದರು. ಕೋಡಿಂಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೆಬಂಡಾಡಿ, ಬಜತ್ತೂರು, ಕಬಕ, ಕೊಡಿಪ್ಪಾಡಿ, ಮ್ತತು ಪಡ್ನೂರು ಗ್ರಾಮಗಳ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರಣ ಕೊಡದೆ ಪೆಂಡಿಂಗ್ ಇಡಬೇಡಿ: ಶಾಸಕರ ಸೂಚನೆ

ಬಾಕಿ ಇರುವ ಕಡತಗಳಲ್ಲಿ 10,15,20,25,30  ಸೆಂಟ್ಸ್ ಒಳಗಿನ ಕಡತಗಳು. ಈ ಜಾಗದಲ್ಲಿ ಬಡವರು, ಮಧ್ಯಮ ವರ್ಗದವರು ಸಣ್ಣ ಮನೆಯನ್ನು ಮಾಡಿ ಉಳಿದ ಜಾಗದಲ್ಲಿ ತಕ್ಕಮಟ್ಟಿಗೆ ಕೃಷಿ ಮಾಡಿಕೊಂಡಿದ್ದಾರೆ ಈ ಕಡತಗಳು ಇಂದಿಗೂ ಹಾಗೇ ಉಳಿದಿದೆ. ಈ ರೀತಿಯ ಕಡತಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಮತ್ತು ನನ್ನ ಗಮನಕ್ಕೆ ತಾರದೆ ಯಾವುದೇ ಕಡತಗಳನ್ನು ಪೆಂಡಿಂಗ್ ಇಡದಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ತಾಂತ್ರಿಕ ಸಮಸ್ಯೆಯಾಗಲಿ ಅಥವಾ ಇನ್ನೇನಾದರೂ ಸಮಸ್ಯೆಯಾಗಲಿ ಯಾವುದೇ ಸಮಸ್ಯೆ ಇರಲಿ ಅದನ್ನು ಇತ್ಯರ್ಥಪಡಿಸಲು ನಾನು ಯಾವ ಹಂತದವರೆಗೂ ಹೋಗಲೂ ಸಿದ್ದನಿದ್ದು ಅಧಿಕಾರಿಗಳು ಸಬೂಬು ಹೇಳಿ ಬಡವರ ಅರ್ಜಿಗಳನ್ನು ಕಪಾಟಿನಲ್ಲಿಡುವುದು ಬೇಡ ಎಂದು ಶಾಸಕರು ಸೂಚನೆ ನೀಡಿದರು.

ವಾರಕ್ಕೊಂದು ಬಾರಿ ಕಡತ ಪರಿಶೀಲನೆ

ಮುಂದಿನ ವಾರದಿಂದ ವಾರಕ್ಕೆ ಒಂದು ದಿನ ನಿಗಧಿ ಮಾಡಿ ಆದಿನ ಕಂದಾಯ ಇಲಾಖೆಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮತ್ತು ಪರಿಶೀಲನೆ ಮಾಡಲಾಗುತ್ತದೆ. ಅಕ್ರಮ ಸಕ್ರಮ ಫೈಲುಗಳನ್ನೂ ವಾರದಲ್ಲಿ ಒಂದು ದಿನ ವಿಲೇವಾರಿ ಮಾಡಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡಿ ಇದೇ ತಿಂಗಳಲ್ಲಿ ಮತ್ತೊಂದು ಸುತ್ತಿನ ಬೈಠಕ್ ನಡೆಸಲಾಗುತ್ತದೆ ಎಂದು ಶಾಸಕರು ಹೇಳಿದರು. ಕಂದಾಯ ಇಲಾಖೆಯಲ್ಲಿ ಜನರಿಗಾಗುತ್ತಿರುವ ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥಪಡಿಸಬೇಕಾಗುತ್ತದೆ. ಜನರು ತಮ್ಮ ಜಾಗದ ಹಕ್ಕಿಗಾಗಿ ಕಚೇರಿ ಅಲೆದಾಟ ಮಾಡುವುದನ್ನು ತಪ್ಪಿಸಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರು ಹೇಳಿದರು.

camera center ad

ಜಾಹೀರಾತು

ಗ್ರಾಮಕರಣಿಕರು ವಾರದಲ್ಲೊಂದು ದಿನ ಕಚೇರಿಯಲ್ಲಿ ಕಡ್ಡಾಯ ಇರಬೇಕು

vishnu studio

ಜಾಹೀರಾತು

ಗ್ರಾಮಕರಣಿಕರು ದಿನ ನಿಗಧಿಮಾಡಿ ಅಧಿನದಂದು ಗ್ರಾಮದ ಸಾರ್ವಜನಿಕರಿಗೆ ಕಚೇರಿಯಲ್ಲಿ ಲಭ್ಯವಿರಬೇಕು. ಆಕೆಲಸ ಈ ಕೆಲಸ , ಮೀಟಿಂಗ್ ಎಂದು ಹೇಳಿ ವಾರದ ಏಳುದಿನವೂ ಹೊರಗಡೆ ಇದ್ದರೆ ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ. ಎಲ್ಲಾ ಗ್ರಾಮಕರಣಿಕರು ಕಚೇರಿಯಲ್ಲಿ ಇಂಥದ್ದೇ ದಿನ ಕಡ್ಡಾಯವಾಗಿ ಇರುತ್ತೇವೆ ಎಂದು ಗ್ರಾಮಸ್ಥರಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ಕಚೇರಿಯಲ್ಲಿ ಇರುವಿಕೆಯನ್ನು ತಾನು ಪರಿಶೀಲನೆ ನಡೆಸುವುದಾಗಿ ಹೇಳಿದ ಶಾಸಕರು ಕಡತ ವಿಲೇವಾರಿಗೆ ತಡ ಮಾಡಿದರೆ ನಾನೇ ವಿ ಎ ಕಚೇರಿಗೆ ಬರಬೇಕಾದೀತಿ ಎಂದು ಎಚ್ಚರಿಕೆಯನ್ನು ಶಾಸಕರು ನೀಡಿದರು.

Poorna squash

ಜಾಹೀರಾತು

ಕುಣಿಸುವ ಕೆಲಸ ಮಾಡಬೇಡಿ

ಕಚೇರಿಗೆ ಬರುವ ಸಾರ್ವಜನಿಕರನ್ನು ಅಧಿಕಾರಿ ವರ್ಗ ವ್ಯರ್ಥ ಕಚೇರಿಯಿಂದ ಕಚೇರಿಗೆ ಕುಣಿಸುವ ಕೆಲಸ ಮಾಡಬೇಡಿ. ಯಾವುದೇ ಒಂದು ಅರ್ಜಿಗೆ ಯಾವ ದಾಖಲೆ ಬೇಕು ಎಂಬುದನ್ನು ಸಾರ್ವಜನಿಕರಿಗೆ ಬರೆದು ಕೊಡಬೇಕು. ನಿಮ್ಮ ಸೂಚನೆ ಪ್ರಕಾರ ಅವರು ಕಚೇರಿಗೆ ಬಂದು ಅರ್ಜಿ ಸಲ್ಲಿಸುತ್ತಾರೆ . ಅರ್ಜಿ ಸಲ್ಲಿಸಿದ ಬಳಿಕ ಅದು ಇಲ್ಲ ಇದು ಇಲ್ಲ ಎಂದು ಹೇಳಿ ಜನರಿಗೆ ತೊಂದರೆ ಕೊಡುವ ಕೆಲಸವನ್ನು ಯಾವ ಅಧಿಕಾರಿಯೂ ಮಾಡಬಾರದು. ಏನೂ ಗೊತ್ತಿಲ್ಲದ ಬಡವರು ಕಚೇರಿಗೆಬಂದಾಗ ಅವರಿಗೆ ಸ್ಪಷ್ಟ ಮಾಹಿತಿ ನೀಡುವ ಕೆಲಸವನ್ನು ಮಾಡಲೇಬೇಕು ಎಂದು ಹೇಳಿದ ಶಾಸಕರು ಲಂಚವನ್ನು ಎಂದೂ ಸಹಿಸುವುದೇ ಇಲ್ಲ ಎಂದು ಹೇಳಿದರು.

ಶಾಸಕರ ಮುತುವರ್ಜಿಯಿಂದ ಅರ್ಜಿ ವಿಲೇವಾರಿ ಆಗುತ್ತಿದೆ: ತಹಶಿಲ್ದಾರ್

ಅಕ್ರಮ ಸಕ್ರಮ ಬೈಠಕ್ ನಡೆಯುವಲ್ಲಿ ಶಾಸಕರ ಮುತುವರ್ಜಿ ಗಮನಾರ್ಹವಾಗಿದೆ. ನನ್ನನ್ನೂ ಸೇರಿದಂತೆ ಕಂದಾಯ ಇಲಾಖೆಯ ಎಲ್ಲರನ್ನೂ ಶಾಸಕರು ನಿಕಟ ಸಂಪರ್ಕ ಹೊಂದಿದ್ದು ಕಡತ ವಿಲೇವಾರಿ ವಿಚಾರದಲ್ಲಿ ವಿಳಂಬವಾಗದಂತೆ ಪದೇ ಪದೇ ಒತ್ತಡವನ್ನು ಮಾಡುತ್ತಿದ್ದಾರೆ ಈ ಕಾರಣಕ್ಕೆ ಕರ್ನಾಟಕ ರಾಜ್ಯದಲ್ಲಿ ಪುತ್ತೂರು ತಾಲೂಕು ಪ್ರಥಮ ಸ್ಥಾನವನ್ನು ಪಡೆದಿದೆ. ರಾಜ್ಯದಲ್ಲಿ ಎಲ್ಲೂ ಅಗದ ಕೆಲಸ ಪುತ್ತೂರಲ್ಲಿ ನಡೆದಿದೆ ಈ ಕಾರಣಕ್ಕೆ ನಮಗೆ ಬೇರೆ ಜಿಲ್ಲೆಗಳಿಂದ , ತಾಲೂಕುಗಳಿಂದ ನಿತ್ಯ ಕರೆಗಳು ಬರುತ್ತಿದೆ. ಪುತ್ತೂರು ಶಸಕರ ಕಾರ್ಯವೈಖರಿಯನ್ನು ಹೊರ ಜಿಲ್ಲೆಯ ಜನರು ಕೊಂಡಾಡುತ್ತಿರುವುದು ನಿಮ್ಮ ಭಾಗ್ಯ ಎಂದು ತಹಶಿಲ್ದಾರ್ ಪುರಂದರ ಹೆಗ್ಡೆ ಹೇಳಿದರು. ಇದೇ ರೀತಿ ಮುಂದುವರೆದರೆ ಪುತ್ತೂರು ರಾಜ್ಯಕ್ಕೆ ಮಾದರಿಯಾಗಲಿದೆ. ಅಕ್ರಮ ಸಕ್ರಮ ಕಡತಗಳು ಸೇರಿದಂತೆ ೯೪ಸಿ ೯೪ ಸಿಸಿ ಕಡತಗಳು ಬಹುತೇಕ ವಿಲೇವಾರಿಯಗುತ್ತಿದೆ, ಬಡವರ ಆಸೆಗಳು ಈಡೇರುತ್ತಿರುವುದು ಶ್ಲಾಘನೀಯ ಎಂದು ಹೇಳಿದ ಅವರು ಶಾಸಕರು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವುದು ಕ್ಷೇತ್ರದ ಜನರ ಭಾಗ್ಯ ಎಂದು ಹೇಳಿದರು.

Muliya

ಜಾಹೀರಾತು

ಎಲ್ಲಾ ಅರ್ಜಿಗಳನ್ನೂ ವಿಲೇವಾರಿ ಮಾಡುವಂತೆ ಶಾಸಕರ ಸೂಚನೆ ಇದೆ: ಮಹಮ್ಮದ್ ಬಡಗನ್ನೂರು

ashwinistudioputtur

ಜಾಹೀರಾತು

ಈಗಾಗಲೇ ಹಲವಾರು ಅರ್ಜಿಗಳನ್ನು ಪ್ರತೀ ಗ್ರಾಮಕ್ಕೆ ತೆರಳಿ ವಿಲೇವಾರಿ ಮಾಡಲಾಗುತ್ತಿದೆ, ನಮ್ಮ ಅರ್ಜಿಗಳು ಏನಾಗಿದೆಯೋ ಎಂದು ಆತಂಕದಲ್ಲಿದ್ದವರಿಗೆ ಹಕ್ಕು ಪತ್ರ ನೀಡುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಯಾರಿಂದಲೂ ನಯಾ ಪೈಸೆ ಲಂಚ ಇಲ್ಲದೆ ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಅಕ್ರಮ ಸಕ್ರಮ ಕಡತಗಳ ವಿಲೇವಾರಿ ನಡೆಯುತ್ತಿದೆ ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಹೇಳಿದರು. ಪೆಂಡಿಂಗ್ ಇರುವ ಸಾವಿರಾರು ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡುವಂತೆ ಶಾಸಕರ ಸೂಚನೆ ಇದೆ ಅದರಂತೆ ಸಮಿತಿಯ ಸದಸ್ಯರು ಮತ್ತು ಕಂದಾಯ ಅಧಿಕಾರಿ ವರ್ಗದವರು ಸಮರೋಪಾದಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಬಡವರಿಗೆ ಸೇರಿದ ಜಾಗವನ್ನು ಅವರಿಗೇ ನ್ಯಾಯಯುತವಾಗಿ ಕೊಡಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಹೇಳಿದರು.

ಹಕ್ಕು ಪತ್ರ ಸಿಕ್ಕಿದೆ ಎಂದು ಮಕ್ಕಳಿಗೆ ಹೇಳಿ: ಬದಿನಾರ್

ನಿಮಗೆ ಕಾಂಗ್ರೆಸ್ ಸರಕಾರ , ಕಾಂಗ್ರೆಸ್ ಶಾಸಕರು ಹಕ್ಕು ಪತ್ರ ಕೊಟ್ಟಿರುವುದು ಈ ವಿಚಾರವನ್ನು ನೀವು ನಿಮ್ಮ ಮನೆಯ ಮಕ್ಕಳಿಗೂ ಹೇಳಬೇಕು. ಹಕ್ಕು ಪತ್ರ ಕೊಟ್ಟವರು ಯಾರೆಂದು ಮಕ್ಕಳಿಗೆ ಹೇಳದೆ ಇದ್ದರೆ ಅದು ನಿಮ್ಮ ತಪ್ಪಾಗುತ್ತದೆ ಎಂದು ಕೋಡಿಂಬಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಹೇಳಿದರು.  ನಮ್ಮ ಜಾಗವನ್ನು ಅಂದಿನ ಶಾಸಕರಾದ ವಿನಯಕುಮಾರ್ ಸೊರಕೆಯವರು ಮಾಡಿಕೊಟ್ಟಿದ್ದರು, ಈ ವಿಚಾರವನ್ನು ನಮ್ಮ ಅಪ್ಪ ಅಮ್ಮ ನಮ್ಮಲ್ಲಿ ಹೇಳಿದ್ದರು ಈ ಕಾರಣಕ್ಕೆ ನಾನು ಅಂದಿನಿಂದ ಇಂದಿನ ತನಕ ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡಿದ್ದೇನೆ. ನಮಗೆ ನ್ಯಾಯ ಕೊಡಿಸಿದ ಕಾಂಗ್ರೆಸ್ಸನ್ನು ನಾವು ಎಂದೂ ಮರೆಯಬಾರದು ಇದನ್ನು ಮಕ್ಕಳಿಗೂ ಹೇಳಬೇಕು ಎಂದು ಹೇಳಿದ ಶಾಸಕರು ಬಡವರಿಗೆ , ಮಧ್ಯಮ ವರ್ಗದವರಿಗೆ ನ್ಯಾಯ ಸಿಗುವುದು ಕಾಂಗ್ರೆಸ್ ಸರಕಾರದಿಂದ ಮಾತ್ರವಾಗಿದೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಮನೆಯನ್ನು ಬೆಳಗಿಸಿದೆ ಇದೀಗ ಮನೆಯ ಅಡಿಸ್ಥಳಕ್ಕೂ ಹಕ್ಕು ಪತ್ರ ನೀಡುವ ಮೂಲಕ ನಮಗೆಲ್ಲರಿಗೂ ಕಾಂಗ್ರೆಸ್ ಬದುಕು ಕೊಟ್ಟಿದೆ ಅದನ್ನು ಎಂದಿಗೂ ನಾವು ಮರೆಯಬಾರದು ಎಂದು ಹೇಳಿದರು.

ಅಶೋಕ್ ರೈ ಶಾಸಕರಾಗಿದ್ದರಿಂದ ನ್ಯಾಯ ಸಿಕ್ಕಿದೆ: ಮಲ್ಲಿಕಾ

ಅಶೋಕ್ ರೈ ಶಾಸಕರಾಗಿದ್ದರಿಂದ ಇಂದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನ್ಯಾಯ ಸಿಕ್ಕಿದೆ, ಬೇರೆ ಪಕ್ಷದವರು ಶಾಸಕರಾಗಿರುತ್ತಿದ್ದರೆ ಹಣ ಕೊಡದೆ ಹಕ್ಕು ಪತ್ರ ಸಿಗುತ್ತಿರಲಿಲ್ಲ ಎಂಬುದನ್ನು ನಾವು ಪ್ರತೀಯೊಬ್ಬರೂ ಅರಿತುಕೊಳ್ಳಬೇಕು. ಎಂದೂ ನ್ಯಾಯದ ಪರ ಇರುವ ಶಾಸಕ ಅಶೋಕ್ ರೈಗಳ ಕೈ ಗಟ್ಟಿ ಮಾಡುವ ಕೆಲಸವನ್ನು ಪ್ರತೀಯೊಬ್ಬರೂ ಮಾಡಬೇಕು ಎಂದು ಕೋಡಿಂಬಾಡಿ ಗ್ರಾಪಂ ಅಧ್ಯಕ್ಷರಾದ ಮಲ್ಲಿಕಾ ಹೇಳಿದರು. ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಉಪಸ್ತಿತರಿದ್ದರು. ಉಪ್ಪಿನಂಗಡಿ ಕಂದಾಯ ನಿರೀಕ್ಷಕರಾದ ಚಂಧ್ರನಾಯ್ಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

SendShare32Share
Previous Post

ಬೆಂಗಳೂರು: ಗಣಪತಿ ಮೂರ್ತಿಯ ಜೊತೆಗೆ 65 ಗ್ರಾಂ ಬಂಗಾರ ಸರ ನೀರಿಗೆ ವಿಸರ್ಜನೆ.

Next Post

ಅರುಣ್ ಕುಮಾರ್ ಪುತ್ತಿಲ ವಿರುದ್ದ ದೂರು ನೀಡಿದ ಸಂತ್ರಸ್ತೆಯಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..