ಪುತ್ತೂರು: ಭಾರತಿಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಪ್ರಥಮ ಪದಾಧಿಕಾರಿಗಳ ಸಭೆ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ಪ್ರತಿ ಬೂತಿನಲ್ಲಿ ಸದಸ್ಯತಾ ಅಭಿಯಾನವನ್ನು ಯಶಸ್ವೀಗೊಳಿಸಲು ಪದಾಧಿಕಾರಿಗಳು ಶಕ್ತೀಮೀರಿ ಕೆಲಸ ಮಾಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಾಶಕ್ತೀ ಕೇಂದ್ರಗಳಿಗೆ ಮತ್ತು ವಿವಿಧ ಮೋರ್ಚಗಳಿಗೆ ಉಸ್ತುವಾರಿಯನ್ನು ಅಧ್ಯಕ್ಷರು ಘೋಷಣೆ ಮಾಡಿದರು. ವಿಟ್ಲ ಮಹಾಶಕ್ತೀ ಕೇಂದ್ರಕ್ಕೆ ಹರಿಪ್ರಸಾದ್ ಯಾದವ್,ಪುಣಚ ಯತೀಂದ್ರ ಕೊಚ್ಚಿ,
ಉಪ್ಪಿನಂಗಡಿ ದಿವ್ಯಾಪುರುಷೋತ್ತಮ,ಆರ್ಯಾಪು ಕುಮಾರ ಸುಬ್ರಮಣ್ಯ ಭಟ್,ನರಿಮೊಗರು ವಿದ್ಯಾಧರ ಜೈನ್,ನೆಟ್ಟಣಿಗೆ ಮುಡ್ನೂರು ಸುನೀಲ್ ದಡ್ಡುರವರನ್ನು ನಿಯುಕ್ತಿಗೊಳಿಸಲಾಯಿತು,
ಯುವಮೋರ್ಚಕ್ಕೆ ರತನ್ ಕುಂಬ್ರ,ಮಹಿಳಾಮೋರ್ಚಕ್ಕೆ ನಾಗವೇಣಿ ಮತ್ತು ಸೌಮ್ಯ ಬಾಲಸುಬ್ರಮಣ್ಯ,ಹಿಂದುಳಿದ ಮೋರ್ಚಕ್ಕೆ ನಹುಷ ಭಟ್,ಎಸ್.ಟಿ ಮೋರ್ಚಕ್ಕೆ ಪ್ರೀತಂ ಪೂಂಜ,ರೈತ ಮೋರ್ಚಕ್ಕೆ ಪುನೀತ್ ಮಾಡತ್ತಾರು,ಎಸ್.ಸಿ ಮೋರ್ಚಕ್ಕೆ ಶ್ರೀಕೃಷ್ಣ ವಿಟ್ಲ ರವರನ್ನು ನಿಯೋಜಿಸಲಾಯಿತು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವಾ ,ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಗೌಡ ಕೋಡಿಬೈಲು,ಪ್ರಶಾಂತ್ ನೆಕ್ಕಿಲಾಡಿ,ನಿಕಟಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ,ನಿತೀಶ್ ಕುಮಾರ್ ಶಾಂತಿವನ ಕಛೇರಿ ಕಾರ್ಯದರ್ಶಿ ಅಶೋಕ ಮೂಡಂಬೈಲು ಉಪಸ್ಥಿತರಿದ್ದರು.