ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಮಾಡಬೇಕು ಅನ್ನೋದು ಹಲವು ಹಿಂದು ಸಂಘಟನೆಗಳ ಕೂಗು. ಅನೇಕ ದೇವಸ್ಥಾನಗಳು ಇದನ್ನು ಮಾಡಿವೆ ಕೂಡ. ಮಹಿಳೆಯರು, ಪುರುಷರು ವಿದೇಶಿ ವಸ್ತ್ರಗಳನ್ನು ಹಾಕಿಕೊಂಡು ಬರುವುದನ್ನು ನಿಷೇಧಿಸಲಾಗಿದೆ. ದೇವಸ್ಥಾನಕ್ಕೆ ಬರುವಾಗ ಸಾಂಪ್ರದಾಯಿಕ ಉಡುಗೆಗಳನ್ನು ಹಾಕಿಕೊಂಡು ಬರುವಂತೆ ದೇವಸ್ಥಾನ ಆಡಳಿತ ಮಂಡಳಿ ನಿಯಮ ಜಾರಿ ಗೊಳಿಸಿದೆ.
ಇದೀಗ ಚಿಕ್ಕಮಗಳೂರಿನ ಜಿಲ್ಲೆಯ ಹೊರನಾಡಿನ ಪ್ರಸಿದ್ದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರು ಸೀರೆ( ಚೂಡಿದಾರ್, ಪುರುಷರು ಪಂಚೆ, ಶಲ್ಯ, ಪ್ಯಾಂಟ್, ಶರ್ಟ್ ನಂತಹ ಸಾಂಪ್ರಧಾಯಿಕ ಉಡುಪು ಧರಿಸಿ ದೇವರ ದರ್ಶನ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.