ಮನೆಯ ಸುಖ ಶಾಂತಿ ನೆಮ್ಮದಿಗೆ ನಾವು ಏನೆಲ್ಲಾ ಕಸರತ್ತು ಮಾಡುವುದಿಲ್ಲ ಹೇಳಿ? ದೇವರ ಪೂಜೆ, ಮನೆಯ ಸ್ವಚ್ಛತೆ, ದೀಪ ಬೆಳಗುವುದು, ಸಾಮ್ರಾಣಿ ಹೊಗೆ, ಸ್ವಾದಿಷ್ಟ ಆಹಾರ, ಸ್ವಚ್ಛ ಉಡುಪುಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಅದಾಗ್ಯೂ ನೆಮ್ಮದಿ ಒಂದಿಲ್ಲದಿದ್ದರೆ ಏನು ಮಾಡಿ ಏನಿದೆ ಪ್ರಯೋಜನ?
Ha ಅಂದಹಾಗೆ ನೀವು ಕರ್ಪೂರದ ಬಗ್ಗೆ ಕೇಳಿದ್ದೀರಾ ??
ಕರ್ಪೂರವು ಒಂದು ಬಿಳಿ, ಕೊಂಚ ಜಿಗುಟಾದ ತೀಕ್ಷ್ನವಾಸನೆಯುಳ್ಳ ದ್ರವ್ಯ. ರಾಸಾಯನಿಕವಾಗಿ ಇದು ಟರ್ಪೆನಾಯ್ಡ್ ಗುಂಪಿಗೆ ಸೇರಿದೆ. ಕರ್ಪೂರವು ಬೋರ್ನಿಯೋ ಮತ್ತು ಟೈವಾನ್‌ಗಳಲ್ಲಿ ಹೆಚ್ಚಾಗಿರುವ ಕ್ಯಾಂಫರ್ ಲಾರೆಲ್ ಎಂಬ ಮರಗಳ ತಿರುಳಿನಲ್ಲಿ ಸಿಗುತ್ತದೆ. ಅಲ್ಲದೆ ಈಗ ಕರ್ಪೂರವನ್ನು ಸಾಮಾನ್ಯವಾಗಿ ರಾಸಾಯನಿಕ ಸಂಯೋಜನೆಯಿಂದ ಕೃತಕವಾಗಿ ಉತ್ಪಾದಿಸಲಾಗುತ್ತಿದೆ. ಟರ್ಪೆಂಟೈನ್ ತೈಲದಿಂದ ಸಹ ಕರ್ಪೂರವನ್ನು ಉತ್ಪಾದಿಸಬಹುದು. ಅದೇನೇ ಇರಲಿ ಭಾರತದ ಪಾರಂಪರಿಕ ಸಂಸ್ಕೃತಿಯೊಂದಿಗೆ ಕರ್ಪೂರ ಬೆರೆತು ಹೋಗಿದೆ.
ಹಾಗದರೆ ಕರ್ಪೂರದ ಬಳಕೆ ಮಾಡಿಕೊಂಡು ಬಾಳು ಹೇಗೆ ಬಂಗಾರ ಮಾಡಿಕೊಳ್ಳ ಬಹುದು ಅಂತ ನೋಡ್ಕೊಂಡು ಬರೋಣ
* ಜೀವನದಲ್ಲಿ ಸೋಲನ್ನು ಅನುಭವಿಸಿ ಲಾಭ ಇದ್ದರೆ ಕರ್ಪೂರವನ್ನು ಪ್ರತಿದಿನ ಬೆಳಗ್ಗೆ ಮನೆಯ ಬಾಗಿಲಿನ ಮುಂದೆ ಇಟ್ಟರೆ ಲಾಭ ಕೈ ಸೇರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ
*ಆಂಟಿ ಬ್ಯಾಕ್ಟೀರಿಯಾ ಅಂಟಿ ಫಂಗಲ್ ಗುಣಗಳನ್ನು ಹೊಂದಿರುವ ಕರ್ಪೂರವು ಆರೋಗ್ಯ ವೃದ್ಧಿಗೂ ಸಹಾಯಮಾಡುತ್ತದೆ ನೋವನ್ನು ನಿವಾರಿಸುತ್ತದೆ ಉಸಿರಾಟದ ಸಮಸ್ಯೆ ಶೀತ ಜ್ವರ ಶಮನಕ್ಕು ಕರ್ಪೂರ ರಾಮಬಾಣವಾಗಿ ವರ್ತಿಸುತ್ತದೆ. ಅಲ್ಲದೆ ಕರ್ಪೂರವು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ.
*ದಾಂಪತ್ಯದಲ್ಲಿ ಕಲಹವಿದ್ದರೆ ಬೆಳ್ಳಿ ಅಥವಾ ಹಿತ್ತಾಳೆಯ ಬಟ್ಟಲಿನಲ್ಲಿ ಕರ್ಪೂರ ಹಚ್ಚಿ ಪ್ರತಿನಿತ್ಯ ಮಲಗುವ ಕೋಣೆಯಲ್ಲಿ ಇಡುವುದರಿಂದ ಪತಿ-ಪತ್ನಿಯ ಮಧ್ಯೆ ಮಧುರ ಬಾಂಧವ್ಯ ಮೂಡಿಸಲು ಸಹ ಕರ್ಪೂರದ ಚೂರುಗಳನ್ನು ಬಳಸಬಹುದು.
*ಹಲವಾರು ಜನರು ತಮಗೆ ಪಿತೃದೋಷ ಇದೆ ಎಂದು ಭಾವಿಸುತ್ತಾರೆ. ಅಂಥವರು ತುಪ್ಪದಲ್ಲಿ ನೆನೆಸಿದ 2 ಕರ್ಪೂರವನ್ನು ಬೆಳಗ್ಗೆ, ಸಂಜೆ ಮತ್ತು ರಾತ್ರಿ ಶೌಚ ಕೋಣೆಯಲ್ಲಿ ಇರಿಸುವುದರಿಂದ ಈ ದೋಷದಿಂದ ಮುಕ್ತಿ ಪಡೆಯಬಹುದು.
*ರಾತ್ರಿ ಮಲಗುವ ಮೊದಲು ಕರ್ಪೂರ ಮತ್ತು ಲವಂಗವನ್ನು ಸುಡುವುದರಿಂದ ಗಾಳಿಯನ್ನು ಶುದ್ಧೀಕರಿಸಲು ಮತ್ತು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕರ್ಪೂರದ ಪರಿಮಳವು ಮನಸ್ಸು ಮತ್ತು ದೇಹದ ಮೇಲೆ ಶಾಂತತೆಯ ಪರಿಣಾಮವನ್ನು ಬೀರಲು ಸಹಾಯ ಮಾಡುತ್ತದೆ
ಹೀಗೆ ಒಂದು ಕರ್ಪೂರ ಹತ್ತಾರು ಪ್ರಯೋಜನಗಳನ್ನು ನೀಡಿ ಬಾಳು ಹಸನಾಗಿಸಲು ಸಹಕರಿಸುತ್ತದೆ ಎಂದಾದರೆ ನಾವು ಯಾಕೆ ಒಂದು ಬಾರಿ ಪ್ರಯತ್ನಿಸಿ ನೋಡಬಾರದು ?
ವಿಸ್ಮಯ