ಪುತ್ತೂರು :ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ರಾಗಿದ್ದ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದ ಬಪ್ಪಲಿಗೆ ನಿವಾಸಿ ಅದ್ದು ಪಡೀಲ್ ಅವರು ಮಸೀದಿ ಒಳಗಡೆ ವಿಡಿಯೋ ಕಾಲ್ ಮೂಲಕ ಮಹಿಳೆಯೊಂದಿಗೆ ಮಾತನಾಡುತ್ತ ಅಶ್ಲೀಲವಾಗಿ ವರ್ತಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗುತ್ತಿದೆ.
ವಿಡಿಯೋ ಕಾಲ್ ನಲ್ಲಿ ಮಹಿಳೆ ಒಬ್ಬರು ನಗ್ನ ವಾಗಿರುವ ಮತ್ತು ಇತ್ತ ಕಡೆಯಿಂದ ನಗ್ನ ವಿಡಿಯೋ ನೋಡಿ ವ್ಯಕ್ತಿಯೊಬ್ಬರು ಸೂಪರ್ ಎಂದು ಹೇಳುವ ವಾಯ್ಸ್ ವೈರಲ್ ಆಗುತ್ತಿದ್ದು ಈ ವಿಡಿಯೋದಲ್ಲಿರುವ ವ್ಯಕ್ತಿ ಈ ಹಿಂದೆ ಜೆಡಿಎಸ್ ನಲ್ಲಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಪುತ್ತೂರು ಬಪ್ಪಲಿಗೆ ನಿವಾಸಿ ಅದ್ದು ಪಡೀಲ್ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಾಗೂ ವೆಬ್ ಸೈಟ್ ಗಳಲ್ಲಿ ವ್ಯಾಪಕ ಸುದ್ದಿ ಆಗುತ್ತಿದೆ.
ಈ ಬಗ್ಗೆ ಅದ್ದು ಪಡೀಲ್ ಹೇಳಿಕೆ ನೀಡಿ, ವಿಡಿಯೋದಲ್ಲಿ ಇರುವ ವ್ಯಕ್ತಿ ನಾನಲ್ಲ. ಇದರ ಸತ್ಯ ಸತ್ಯತೆಗಾಗಿ ಕಾನೂನು ಹೋರಾಟ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.