• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
“ಒಂದು ದೇಶ  ಒಂದು ಚುನಾವಣೆ ” ಜಾರಿಗೆ ತರಲು 3 ಮಸೂದೆ ಜಾರಿಗೆ ‘ಕೇಂದ್ರ’ ಚಿಂತನೆ

“ಒಂದು ದೇಶ ಒಂದು ಚುನಾವಣೆ ” ಜಾರಿಗೆ ತರಲು 3 ಮಸೂದೆ ಜಾರಿಗೆ ‘ಕೇಂದ್ರ’ ಚಿಂತನೆ

September 30, 2024
ಪುತ್ತೂರು: ಸೇಡಿಯಾಪುನಲ್ಲಿ ನಡೆದ ನೂತನ ರಿಕ್ಷಾ ತಂಗುದಾಣದ ಉದ್ಘಾಟನೆ: ರಿಕ್ಷಾದಲ್ಲೇ ಬಂದ ಶಾಸಕ ಅಶೋಕ್ ರೈ

ಪುತ್ತೂರು: ಸೇಡಿಯಾಪುನಲ್ಲಿ ನಡೆದ ನೂತನ ರಿಕ್ಷಾ ತಂಗುದಾಣದ ಉದ್ಘಾಟನೆ: ರಿಕ್ಷಾದಲ್ಲೇ ಬಂದ ಶಾಸಕ ಅಶೋಕ್ ರೈ

January 18, 2026
ಪುತ್ತೂರು: ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ನಾಲ್ಕನೇ ವರ್ಷದ ಪ್ರತಿಷ್ಠಾ ವರ್ಧಂತಿ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ನಾಲ್ಕನೇ ವರ್ಷದ ಪ್ರತಿಷ್ಠಾ ವರ್ಧಂತಿ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

January 18, 2026
ಅಪಘಾತದಲ್ಲಿ ಗಂಭೀರ ಗಾಯಗೊಂಡು  ಮಂಚ ಗುರಿಪಳ್ಳ ಇವರಿಗೆ ರಕ್ಷಿತ್ ಶಿವರಾಂ ವಾಟರ್ ಬೆಡ್ ಹಸ್ತಾಂತರ

ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಚ ಗುರಿಪಳ್ಳ ಇವರಿಗೆ ರಕ್ಷಿತ್ ಶಿವರಾಂ ವಾಟರ್ ಬೆಡ್ ಹಸ್ತಾಂತರ

January 17, 2026
ಡ್ರಗ್ಸ್ ವಿರುದ್ಧ ಮಂಗಳೂರು ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ : ಅರುಣ್ ಕುಮಾರ್ ಪುತ್ತಿಲ

ಡ್ರಗ್ಸ್ ವಿರುದ್ಧ ಮಂಗಳೂರು ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ : ಅರುಣ್ ಕುಮಾರ್ ಪುತ್ತಿಲ

January 17, 2026
ಕುಕ್ಕೆಡಿ ಅಂಬೇಡ್ಕರ್ ಭವನದ ನವೀಕೃತ ಕಟ್ಟಡ ಉದ್ಘಾಟನೆ. ಮತ್ತು ಹಕ್ಕುಪತ್ರ ವಿತರಣಾ ಸಮಾರಂಭ ಉಸ್ತುವಾರಿ ಸಚಿವರ ಬಾಗಿ: ರಕ್ಷಿತ್ ಶಿವರಾಂ

ಕುಕ್ಕೆಡಿ ಅಂಬೇಡ್ಕರ್ ಭವನದ ನವೀಕೃತ ಕಟ್ಟಡ ಉದ್ಘಾಟನೆ. ಮತ್ತು ಹಕ್ಕುಪತ್ರ ವಿತರಣಾ ಸಮಾರಂಭ ಉಸ್ತುವಾರಿ ಸಚಿವರ ಬಾಗಿ: ರಕ್ಷಿತ್ ಶಿವರಾಂ

January 16, 2026
ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ  ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

ಮಂಗಳೂರು ನಗರಕ್ಕೆ ಬೈಪಾಸ್‌ ಸಹಿತ ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿ ಯೋಜನೆಗಳ ಡಿಪಿಆರ್ ತಯಾರಿಕೆಗೆ ಕೇಂದ್ರ ಸರ್ಕಾರದ ಅನುಮೋದನೆ:ಚೌಟ

January 17, 2026
ಬ್ರಹ್ಮರಕೋಟ್ಲು ಟೋಲ್ ಗೇಟ್ ತೆರವುಗೊಳಿಸದೇ ಬಜತ್ತೂರಿನಲ್ಲಿ ಹೊಸ ಟೋಲ್ ಆರಂಭಿಸಿದರೆ ಉಗ್ರ ಹೋರಾಟ: ಎಸ್‌ಡಿಪಿಐ ಅನ್ವರ್ ಸಾದತ್ ಎಚ್ಚರಿಕೆ

ಬ್ರಹ್ಮರಕೋಟ್ಲು ಟೋಲ್ ಗೇಟ್ ತೆರವುಗೊಳಿಸದೇ ಬಜತ್ತೂರಿನಲ್ಲಿ ಹೊಸ ಟೋಲ್ ಆರಂಭಿಸಿದರೆ ಉಗ್ರ ಹೋರಾಟ: ಎಸ್‌ಡಿಪಿಐ ಅನ್ವರ್ ಸಾದತ್ ಎಚ್ಚರಿಕೆ

January 17, 2026
ಮಣಿನಾಲ್ಕೂರು ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು 10‌ನೇ ವರ್ಷದ ನಗರ ಭಜನೆಯ ಮಂಗಳೋತ್ಸವ* 

ಮಣಿನಾಲ್ಕೂರು ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು 10‌ನೇ ವರ್ಷದ ನಗರ ಭಜನೆಯ ಮಂಗಳೋತ್ಸವ* 

January 15, 2026
ಶಾಲೆಯಲ್ಲಿ ಹುಡುಗಾಟ ಆಡುವ ವಯಸ್ಸಿನ ಮಕ್ಕಳಿಂದಲೇ SSLC ವಿದ್ಯಾರ್ಥಿಯ ಬರ್ಬರ ಕೊಲೆ

ಶಾಲೆಯಲ್ಲಿ ಹುಡುಗಾಟ ಆಡುವ ವಯಸ್ಸಿನ ಮಕ್ಕಳಿಂದಲೇ SSLC ವಿದ್ಯಾರ್ಥಿಯ ಬರ್ಬರ ಕೊಲೆ

January 15, 2026
ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ  ವಾರ್ಷಿಕ ಜಾತ್ರಾ ಮಹೋತ್ಸವದ ಅಭಿನಂದನಾ ಕಾರ್ಯಕ್ರಮ, ಶ್ರೀ ದೇವರಿಗೆ ದೀಪಾಲಂಕಾರ ರಂಗಪೂಜೆ

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ  ವಾರ್ಷಿಕ ಜಾತ್ರಾ ಮಹೋತ್ಸವದ ಅಭಿನಂದನಾ ಕಾರ್ಯಕ್ರಮ, ಶ್ರೀ ದೇವರಿಗೆ ದೀಪಾಲಂಕಾರ ರಂಗಪೂಜೆ

January 15, 2026
ಧನು ಪೂಜೆಗೆ ಹೊರಟ ಬಾಲಕ ಶವವಾಗಿ ಪತ್ತೆ

ಧನು ಪೂಜೆಗೆ ಹೊರಟ ಬಾಲಕ ಶವವಾಗಿ ಪತ್ತೆ

January 15, 2026
ಪುತ್ತೂರಿನ ಯುವಕ ಅದೀಶ್ ಶೆಟ್ಟಿ ಜ್ಯೂನಿಯರ್ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರಿನ ಯುವಕ ಅದೀಶ್ ಶೆಟ್ಟಿ ಜ್ಯೂನಿಯರ್ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

January 15, 2026
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Monday, January 19, 2026
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಪುತ್ತೂರು: ಸೇಡಿಯಾಪುನಲ್ಲಿ ನಡೆದ ನೂತನ ರಿಕ್ಷಾ ತಂಗುದಾಣದ ಉದ್ಘಾಟನೆ: ರಿಕ್ಷಾದಲ್ಲೇ ಬಂದ ಶಾಸಕ ಅಶೋಕ್ ರೈ

    ಪುತ್ತೂರು: ಸೇಡಿಯಾಪುನಲ್ಲಿ ನಡೆದ ನೂತನ ರಿಕ್ಷಾ ತಂಗುದಾಣದ ಉದ್ಘಾಟನೆ: ರಿಕ್ಷಾದಲ್ಲೇ ಬಂದ ಶಾಸಕ ಅಶೋಕ್ ರೈ

    ಪುತ್ತೂರು: ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ನಾಲ್ಕನೇ ವರ್ಷದ ಪ್ರತಿಷ್ಠಾ ವರ್ಧಂತಿ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

    ಪುತ್ತೂರು: ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ನಾಲ್ಕನೇ ವರ್ಷದ ಪ್ರತಿಷ್ಠಾ ವರ್ಧಂತಿ ಹಾಗೂ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

    ಅಪಘಾತದಲ್ಲಿ ಗಂಭೀರ ಗಾಯಗೊಂಡು  ಮಂಚ ಗುರಿಪಳ್ಳ ಇವರಿಗೆ ರಕ್ಷಿತ್ ಶಿವರಾಂ ವಾಟರ್ ಬೆಡ್ ಹಸ್ತಾಂತರ

    ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಚ ಗುರಿಪಳ್ಳ ಇವರಿಗೆ ರಕ್ಷಿತ್ ಶಿವರಾಂ ವಾಟರ್ ಬೆಡ್ ಹಸ್ತಾಂತರ

    ಡ್ರಗ್ಸ್ ವಿರುದ್ಧ ಮಂಗಳೂರು ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ : ಅರುಣ್ ಕುಮಾರ್ ಪುತ್ತಿಲ

    ಡ್ರಗ್ಸ್ ವಿರುದ್ಧ ಮಂಗಳೂರು ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ : ಅರುಣ್ ಕುಮಾರ್ ಪುತ್ತಿಲ

    ಕುಕ್ಕೆಡಿ ಅಂಬೇಡ್ಕರ್ ಭವನದ ನವೀಕೃತ ಕಟ್ಟಡ ಉದ್ಘಾಟನೆ. ಮತ್ತು ಹಕ್ಕುಪತ್ರ ವಿತರಣಾ ಸಮಾರಂಭ ಉಸ್ತುವಾರಿ ಸಚಿವರ ಬಾಗಿ: ರಕ್ಷಿತ್ ಶಿವರಾಂ

    ಕುಕ್ಕೆಡಿ ಅಂಬೇಡ್ಕರ್ ಭವನದ ನವೀಕೃತ ಕಟ್ಟಡ ಉದ್ಘಾಟನೆ. ಮತ್ತು ಹಕ್ಕುಪತ್ರ ವಿತರಣಾ ಸಮಾರಂಭ ಉಸ್ತುವಾರಿ ಸಚಿವರ ಬಾಗಿ: ರಕ್ಷಿತ್ ಶಿವರಾಂ

    ಎಸ್‌ಡಿಪಿಐ ಹೆಸರಿನಲ್ಲಿ ನಿಷೇಧಿತ ಪಿಎಫ್‌ಐನ ಹಿಂಬಾಗಿಲ ರಾಜಕೀಯ ಪ್ರವೇಶ ಪ್ರಜಾಪ್ರಭುತ್ವ-ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯʼ  ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ

    ಮಂಗಳೂರು ನಗರಕ್ಕೆ ಬೈಪಾಸ್‌ ಸಹಿತ ದಕ್ಷಿಣ ಕನ್ನಡದ ಪ್ರಮುಖ ಹೆದ್ದಾರಿ ಯೋಜನೆಗಳ ಡಿಪಿಆರ್ ತಯಾರಿಕೆಗೆ ಕೇಂದ್ರ ಸರ್ಕಾರದ ಅನುಮೋದನೆ:ಚೌಟ

    ಬ್ರಹ್ಮರಕೋಟ್ಲು ಟೋಲ್ ಗೇಟ್ ತೆರವುಗೊಳಿಸದೇ ಬಜತ್ತೂರಿನಲ್ಲಿ ಹೊಸ ಟೋಲ್ ಆರಂಭಿಸಿದರೆ ಉಗ್ರ ಹೋರಾಟ: ಎಸ್‌ಡಿಪಿಐ ಅನ್ವರ್ ಸಾದತ್ ಎಚ್ಚರಿಕೆ

    ಬ್ರಹ್ಮರಕೋಟ್ಲು ಟೋಲ್ ಗೇಟ್ ತೆರವುಗೊಳಿಸದೇ ಬಜತ್ತೂರಿನಲ್ಲಿ ಹೊಸ ಟೋಲ್ ಆರಂಭಿಸಿದರೆ ಉಗ್ರ ಹೋರಾಟ: ಎಸ್‌ಡಿಪಿಐ ಅನ್ವರ್ ಸಾದತ್ ಎಚ್ಚರಿಕೆ

    ಮಣಿನಾಲ್ಕೂರು ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು 10‌ನೇ ವರ್ಷದ ನಗರ ಭಜನೆಯ ಮಂಗಳೋತ್ಸವ* 

    ಮಣಿನಾಲ್ಕೂರು ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು 10‌ನೇ ವರ್ಷದ ನಗರ ಭಜನೆಯ ಮಂಗಳೋತ್ಸವ* 

    ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ  ವಾರ್ಷಿಕ ಜಾತ್ರಾ ಮಹೋತ್ಸವದ ಅಭಿನಂದನಾ ಕಾರ್ಯಕ್ರಮ, ಶ್ರೀ ದೇವರಿಗೆ ದೀಪಾಲಂಕಾರ ರಂಗಪೂಜೆ

    ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ  ವಾರ್ಷಿಕ ಜಾತ್ರಾ ಮಹೋತ್ಸವದ ಅಭಿನಂದನಾ ಕಾರ್ಯಕ್ರಮ, ಶ್ರೀ ದೇವರಿಗೆ ದೀಪಾಲಂಕಾರ ರಂಗಪೂಜೆ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ರಾಜಕೀಯ

“ಒಂದು ದೇಶ ಒಂದು ಚುನಾವಣೆ ” ಜಾರಿಗೆ ತರಲು 3 ಮಸೂದೆ ಜಾರಿಗೆ ‘ಕೇಂದ್ರ’ ಚಿಂತನೆ

by ಪ್ರಜಾಧ್ವನಿ ನ್ಯೂಸ್
September 30, 2024
in ರಾಜಕೀಯ, ರಾಷ್ಟ್ರೀಯ
0
“ಒಂದು ದೇಶ  ಒಂದು ಚುನಾವಣೆ ” ಜಾರಿಗೆ ತರಲು 3 ಮಸೂದೆ ಜಾರಿಗೆ ‘ಕೇಂದ್ರ’ ಚಿಂತನೆ
42
SHARES
121
VIEWS
ShareShareShare

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘One Nation One Poll’ ಜಾರಿಗೆ ತರಲು ಸಿದ್ಧತೆ ಮುಂದುವರೆದಿದ್ದು, ‘ಒಂದು ದೇಶ–ಒಂದು ಚುನಾವಣೆ’ ಅನುಷ್ಠಾನಕ್ಕೆ ದಾರಿ ಮಾಡಿಕೊಡುವ ಮೂರು ಮಸೂದೆಗಳ ಮಂಡನೆಗೆ ಕೇಂದ್ರ ಸರ್ಕಾರ ಮುಂದಾಗಿದೆ.

ashwinistudioputtur

ಜಾಹೀರಾತು

ಹೌದು… ತನ್ನ ಪ್ರಮುಖ ಕಾರ್ಯಸೂಚಿಯಾದ ‘ಒಂದು ದೇಶ–ಒಂದು ಚುನಾವಣೆ’ ಅನುಷ್ಠಾನಕ್ಕೆ ದಾರಿ ಮಾಡಿಕೊಡುವ ಮೂರು ಮಸೂದೆಗಳ ಮಂಡನೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದ ಎರಡು ಮಸೂದೆಗಳು ಸೇರಿ ಒಟ್ಟು ಮೂರು ಮಸೂದೆಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ.

camera center ad

ಜಾಹೀರಾತು

Poorna squash

ಜಾಹೀರಾತು

ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದ ಉನ್ನತ ಸಮಿತಿ ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಶಿಫಾರಸುಗಳಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈಗ, ಶಿಫಾರಸುಗಳ ಜಾರಿಗೆ ಮುಂದಡಿ ಇಟ್ಟಿದೆ.

Muliya

ಜಾಹೀರಾತು

ಕೋವಿಂದ್ ಸಮಿತಿಯು ಮೊದಲ ಹಂತವಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಪ್ರಸ್ತಾಪಿಸಿತ್ತು. ಸಾರ್ವತ್ರಿಕ ಚುನಾವಣೆಯ 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸಬೇಕು ಎಂದು ಹೇಳಿತ್ತು.

ಇದೀಗ ಒಂದುರಾಷ್ಚ್ರ ಒಂದು ಚುನಾವಣೆ ಜಾರಿಗೆ ಎರಡು ಸಂವಿಧಾನ ತಿದ್ದುಪಡಿ ಮಸೂದೆಗಳ ಮೂಲಕ ಸಂವಿಧಾನಕ್ಕೆ 15 ತಿದ್ದುಪಡಿಗಳನ್ನು ಕೈಗೊಳ್ಳಲು ಶಿಫಾರಸು ಮಾಡಿತ್ತು. ಕೋವಿಂದ್ ಸಮಿತಿಯ ಪ್ರಸ್ತಾವನೆಯನ್ನು 2029 ರಿಂದ ಜಾರಿಗೆ ತರಲು ಸರ್ಕಾರ ನಿರ್ಧರಿಸಿದರೆ, 17 ರಾಜ್ಯಗಳು ಮೂರು ವರ್ಷಗಳಿಗಿಂತ ಕಡಿಮೆ ಅವಧಿಗೆ ಅಸೆಂಬ್ಲಿಗಳ ಅಧಿಕಾರಾವಧಿಯನ್ನು ಹೊಂದಿರುತ್ತವೆ.

ಇನ್ನು ಕೋವಿಂದ್ ಸಮಿತಿಯು ಮೂರು ವಿಧಿಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ, ಅಸ್ತಿತ್ವದಲ್ಲಿರುವ ಲೇಖನಗಳಲ್ಲಿ 12 ಹೊಸ ಉಪವಿಭಾಗಗಳನ್ನು ಸೇರಿಸುವುದು ಮತ್ತು ಶಾಸಕಾಂಗ ಸಭೆಗಳೊಂದಿಗೆ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಮೂರು ಕಾನೂನುಗಳನ್ನು ತಿದಿದ್ದುಪಡಿ ಮಾಡುವುದಾಗಿದೆ. ಆ ಮೂಲಕ ಒಟ್ಟು ತಿದ್ದುಪಡಿಗಳು ಮತ್ತು ಹೊಸ ಅಳವಡಿಕೆಗಳ ಸಂಖ್ಯೆ 18ಕ್ಕೆ ಏರಿದಂತಾಗುತ್ತದೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದು ಉದ್ದೇಶಿತ ಮಸೂದೆಗಳಲ್ಲೊಂದು. ಈ ಮಸೂದೆ ಅಂಗೀಕಾರಕ್ಕೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಒಪ್ಪಿಗೆ ಅಗತ್ಯ.

ಮೂರು ತಿದ್ದುಪಡಿ

ಮೊದಲನೇ ತಿದ್ದುಪಡಿ-ಏಕಕಾಲಕ್ಕೆ ಚುನಾವಣೆ

ಈ ತಿದ್ದುಪಡಿಯು ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದಕ್ಕೆ ಸಂಬಂಧಿಸಿದ್ದಾಗಿದೆ. ಸಂವಿಧಾನದ 82ಎ ವಿಧಿಗೆ ಉಪ ಕಲಂ (1) ಸೇರ್ಪಡೆ ಮಾಡುವುದನ್ನು ಈ ಉದ್ದೇಶಿತ ಮಸೂದೆ ಒಳಗೊಂಡಿದೆ. ಈ ಉಪ ಕಲಂ (1), ಯೋಜನೆ ಯಾವಾಗಿನಿಂದ ಜಾರಿಗೆ ಬಂದಿದೆ ಎಂಬುದನ್ನು ವಿವರಿಸುತ್ತದೆ. ಅದೇ ರೀತಿ, ಲೋಕಸಭೆ ಮತ್ತು ವಿಧಾನಸಭೆಗಳ ಅವಧಿಯು ಯಾವಾಗ ಅಂತ್ಯಗೊಳ್ಳಲಿದೆ ಎಂಬುದನ್ನು ಸೂಚಿಸುವ ಉಪ ಕಲಂ (2) ಅನ್ನು ಕೂಡ ಈ ವಿಧಿಗೆ ಸೇರ್ಪಡೆ ಮಾಡುವ ಅಂಶವನ್ನೂ ಒಳಗೊಂಡಿದೆ.

ಈ ಎರಡು ಉಪ ಕಲಂಗಳ ಸೇರ್ಪಡೆ ಕುರಿತು ಉನ್ನತ ಸಮಿತಿ ಶಿಫಾರಸು ಮಾಡಿದೆ. ಸಂವಿಧಾನದ 83(2) ವಿಧಿಗೆ ತಿದ್ದುಪಡಿ ತಂದು, ಅದಕ್ಕೆ, ಉಪ ಕಲಂ (3) ಹಾಗೂ (4) ಸೇರ್ಪಡೆ ಮಾಡುವುದು. ಈ ಉಪ ಕಲಂ ಗಳು ಲೋಕಸಭೆಯ ಅವಧಿ ಹಾಗೂ ಅದರ ವಿಸರ್ಜನೆ ಕುರಿತು ವಿವರಿಸುತ್ತವೆ. ಇನ್ನು, ವಿಧಾನಸಭೆಗಳ ವಿಸರ್ಜನೆಗೆ ಸಂಬಂಧಿಸಿದ ಅವಕಾಶಗಳನ್ನು ಕೂಡ ಈ ತಿದ್ದುಪಡಿ ಒಳಗೊಂಡಿದೆ. ಇದರ ಜೊತೆ, ‘ಏಕಕಾಲಿಕ ಚುನಾವಣೆಗಳು’ ಎಂಬ ಪದ ಸೇರ್ಪಡೆಗೆ ಅನುವು ಮಾಡಿ ಕೊಡಲು, 327ನೇ ವಿಧಿಗೆ ತಿದ್ದುಪಡಿ ತರುವುದಕ್ಕೆ ಸಂಬಂಧಿಸಿದ ಅವಕಾಶಗಳನ್ನು ಒಳಗೊಂಡಿದೆ. ಈ ಮಸೂದೆ ಅಂಗೀಕಾರಕ್ಕೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಒಪ್ಪಿಗೆಯ ಅಗತ್ಯವಿಲ್ಲ ಎಂದು ಸಮಿತಿಯ ಶಿಫಾರಸು ಹೇಳುತ್ತದೆ.

ಎರಡನೇ ತಿದ್ದುಪಡಿ-ರಾಜ್ಯಗಳ ಒಪ್ಪಿಗೆ

ಈ ತಿದ್ದುಪಡಿಯು ರಾಜ್ಯಗಳ ವಿದ್ಯಮಾನಗಳಿಗೆ ಸಂಬಂಧಿಸಿದ್ದರಿಂದ, ಇದಕ್ಕೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಒಪ್ಪಿಗೆ ಅಗತ್ಯ ಎಂದು ಸಮಿತಿ ಹೇಳಿದೆ. ಈ ತಿದ್ದುಪಡಿಯು, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕಾಗಿ, ಚುನಾವಣಾ ಆಯೋಗವು (ಇ.ಸಿ) ರಾಜ್ಯ ಚುನಾವಣಾ ಆಯೋಗಗಳ (ಎಸ್‌.ಇ.ಸಿ) ಜೊತೆ ಸಮಾಲೋಚನೆ ನಡೆಸಿ, ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವ ಅವಕಾಶಗಳಿಗೆ ಸಂಬಂಧಿಸಿದ್ದಾಗಿದೆ. ಸಾಂವಿಧಾನಿಕವಾಗಿ ಕೇಂದ್ರ ಚುನಾವಣಾ ಆಯೋಗ (ಇ.ಸಿ) ಮತ್ತು ರಾಜ್ಯ ಚುನಾವಣಾ ಆಯೋಗಗಳು (ಎಸ್‌.ಇ.ಸಿ) ಪ್ರತ್ಯೇಕ ಸಂಸ್ಥೆಗಳಾಗಿವೆ.

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಸ್ಥಾನ, ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸುವುದು ಕೇಂದ್ರ ಚುನಾವಣಾ ಆಯೋಗದ ಜವಾಬ್ದಾರಿ. ಇನ್ನು, ಮುನ್ಸಿಪಾಲಿಟಿಗಳು, ಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಹೊಣೆ ಎಸ್‌.ಇ.ಸಿಗಳದ್ದು. ಹೀಗಾಗಿ, ಎರಡನೇ ಸಂವಿಧಾನ ತಿದ್ದುಪಡಿ ಮಸೂದೆಯು, ಲೋಕಸಭೆ ಮತ್ತು ವಿಧಾನಸಭೆಗಳ ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಅವಕಾಶಗಳನ್ನು ಒಳಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ, ಹೊಸದಾಗಿ 324ಎ ವಿಧಿಯನ್ನು ಸೇರ್ಪಡೆ ಮಾಡಲಾಗುತ್ತದೆ.

ಮೂರನೇ ತಿದ್ದುಪಡಿ-ಕೇಂದ್ರಾಡಳಿತ ಪ್ರದೇಶಗಳು

ಇದು ಸಾಮಾನ್ಯ ತಿದ್ದುಪಡಿಯಾಗಿದ್ದು, ಈ ಮಸೂದೆಯು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ದೆಹಲಿ ಹಾಗೂ ಜಮ್ಮು–ಕಾಶ್ಮೀರ ವಿಧಾನಸಭೆಗಳಿಗೆ ಸಂಬಂಧಿಸಿದ್ದಾಗಿದೆ. ಈ ಮೂರು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಅವಧಿಗಳನ್ನು ಇತರ ರಾಜ್ಯಗಳ ಶಾಸನಸಭೆಗಳು ಮತ್ತು ಲೋಕಸಭೆಯ ಅವಧಿಯೊಂದಿಗೆ ಸಮೀಕರಿಸುವುದಾಗಿದೆ. ಇದಕ್ಕಾಗಿ, ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ಕಾಯ್ದೆ–1991, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯ್ದೆ–1963 ಹಾಗೂ ಜಮ್ಮು–ಕಾಶ್ಮೀರ ಪುನರ್‌ರಚನೆ ಕಾಯ್ದೆ–2019ಕ್ಕೆ ತಿದ್ದುಪಡಿ ತರುವುದು ಅಗತ್ಯ. ಉದ್ದೇಶಿತ ಈ ಮಸೂದೆಯು ಸಾಮಾನ್ಯ ಮಸೂದೆಯಾಗಿರುವ ಕಾರಣ ಇದಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಅಗತ್ಯವಿರುವುದಿಲ್ಲ. ಅಲ್ಲದೇ, ರಾಜ್ಯಗಳ ಒಪ್ಪಿಗೆಯೂ ಬೇಕಾಗುವುದಿಲ್ಲ

ಕಷ್ಟಸಾಧ್ಯ

ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲು, ಸದನದ ಮೂರನೇ ಎರಡರಷ್ಟು ವಿಶೇಷ ಬಹುಮತದ ಅಗತ್ಯವಿದೆ ಎಂದು ಹೇಳಿದ್ದಾರೆ. ಸದನದಲ್ಲಿ ಎನ್‌ಡಿಎ ಕೇವಲ 292 ಸದಸ್ಯರನ್ನು ಹೊಂದಿದ್ದರೂ ಸರ್ಕಾರಕ್ಕೆ 362 ಸದಸ್ಯರ ಬೆಂಬಲ ಅಗತ್ಯವಿದೆ. ಹೆಚ್ಚಿನ ವಿರೋಧ ಪಕ್ಷಗಳು ಮತ್ತು ಬಿಜೆಡಿಯಂತಹ ‘ತಟಸ್ಥ’ ಪಕ್ಷಗಳು ಮಸೂದೆಯನ್ನು ವಿರೋಧಿಸಿರುವುದರಿಂದ, ಸರ್ಕಾರಕ್ಕೆ ಇದು ಕೊಂಚ ಕಷ್ಟಸಾಧ್ಯವಾಗುತ್ತದೆ.

SendShare17Share
Previous Post

ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯ ಅಜ್ಜಿಕಲ್ಲು ಒಕ್ಕೂಟದ ಕೈಕಾರ ಜನನಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

Next Post

ಪುತ್ತೂರು 90ನೇ ವರ್ಷದ ಶಾರದೋತ್ಸವ ಅಕ್ಷರ ಯಜ್ಞ ಸೇವೆ ವಿಶೇಷ – ಸೀತಾರಾಮ ರೈ ಕೆದಂಬಾಡಿಗುತ್ತು

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂದರ್ಭಿಕ ಚಿತ್ರ
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

No Result
View All Result
  • ಮುಖಪುಟ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಉದ್ಯೋಗ – ಶಿಕ್ಷಣ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಿನಿಮಾ
  • ಲೈಫ್ ಸ್ಟೈಲ್

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..