ಹೆಣ್ಣು ತನ್ನ ಸೌಂದರ್ಯಕ್ಕಾಗಿ ಮಾಡದ ಕಸರತ್ತುಗಳು ಎಲ್ಲಾ ಅದರಲ್ಲೂ ಕಣ್ಣಿನ ಹುಬ್ಬುಗಳ ಅಂದಕ್ಕೆ ಬಹಳಷ್ಟು ಸರ್ಕಸ್ಸು ಮಾಡಿ ಮುಖದ ಸೌಂದರ್ಯವನ್ನು ವೃದ್ಧಿಸಿಕೊಳ್ಳುತ್ತಾಳೆ. ಹುಬ್ಬುಗಳು ತೆಳುವಾಗಿದ್ದರೆ ಮುಖದಲ್ಲಿ ಕಳೆಯೇ ಇರುವುದಿಲ್ಲ.
ದಪ್ಪ ಗಾದ ಕಪ್ಪನೆಯ ಹುಬ್ಬುಗಳು ಕಣ್ಣಿನ ಕಾಂತಿಯನ್ನು ಮುಖದ ಅಂದ ಚಂದವನ್ನು ಹೈಲೈಟ್ ಮಾಡುವುದರಲ್ಲಿ ಸಂಶಯವೇ ಇಲ್ಲ ಅದಕ್ಕಾಗಿ ಎಲ್ಲಾ ನಾರಿಮಣಿಯರು ಕೊಬ್ಬುಗಳ ಆರೈಕೆಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ಕವಿಗಳು ಹುಬ್ಬನ್ನು ಕಾಮನಬಿಲ್ಲಿಗೆ ಹೋಲಿಸಿರುತ್ತಾರೆ. ಆದರೆ ತೆಳ್ಳನೆಯ ಹುಬ್ಬುಗಳು ಹುಡುಗಿಯರ ಆತ್ಮಸ್ಥೈರ್ಯವನ್ನೇ ಕುಗ್ಗಿಸಿಬಿಡುತ್ತವೆ. ಅದಕ್ಕಾಗಿ ಅವರು ಆರ್ಟಿಫಿಶಿಯಲ್ ಹುಬ್ಬುಗಳ ಮೊರೆ ಹೋಗಬೇಕಾಗುತ್ತದೆ. ಐಬ್ರೋ ಪೆನ್ಸಿಲ್ ಮೂಲಕ ಹುಬ್ಬುಗಳನ್ನು ದಪ್ಪಗಾಗಿಸುವುದು ಕಪ್ಪಗಾಗಿಸುವುದು ತುಂಬಾ ಕಠಿಣ ಹಾಗೂ ಸಮಯವನ್ನು ತೆಗೆದುಕೊಳ್ಳುತ್ತದೆ ಅದಕ್ಕಾಗಿಯೇ ಫಿಲ್ಲರ್ ಗಳ ಬಳಕೆಯ ಮೊರೆಹೋಗುತ್ತಾರೆ.
ಹಾಗಾದ್ರೆ ಈ ಹುಬ್ಬುಗಳು ತೆಳ್ಳಗಾಗಲು ಮತ್ತು ಅದರ ಕೂದಲು ಉದುರಲು ಕಾರಣಗಳು ಏನೆಂಬುದನ್ನು ನೋಡಿಕೊಂಡು ಬರೋಣ.
*ವಯಸ್ಸಾದಂತೆ ಕೂದಲ ಬೆಳೆಯುವಿಕೆ ಕಡಿಮೆಯಾಗುತ್ತದೆ ಮತ್ತು ಹಾರ್ಮೋನ್ ಗಳ ವ್ಯತ್ಯಾಯದಿಂದ ಸಹ ಹುಬ್ಬುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.
*ಪೌಷ್ಟಿಕಾಂಶದ ಕೊರತೆಗಳು ಮತ್ತು ಕಳಪೆ ಆಹಾರ: ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ಗಳು A, B, C, D, ಮತ್ತು E ನಂತಹ ಅಗತ್ಯ ಪೋಷಕಾಂಶಗಳ ಕೊರತೆಯು ಹುಬ್ಬು ಕೂದಲು ಸೇರಿದಂತೆ ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು.
*ಮಾನಸಿಕ ಒತ್ತಡ ಮತ್ತು ಆತಂಕಗಳು ಕೂಡ ಆರೋಗ್ಯದ ಮೇಲೆ ಅತಿರೇಕ ಪರಿಣಾಮ ಬೀರಿದಾಗ ಹುಬ್ಬುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಅದಕ್ಕಾಗಿ ಮನಸ್ಸು ಖಿನ್ನತೆಗೆ ಜಾರದಂತೆ ಎಚ್ಚರ ವಹಿಸುವುದು ಅಗತ್ಯ.
*ಅತಿಯಾದ ಸೌಂದರ್ಯ ವರ್ಧಕಗಳನ್ನು ಬಳಸುವುದು ಕೂದಲ ಕಿರುಚೀಲಗಳನ್ನು ಹಾನಿಗೊಳಿಸುತ್ತದೆ ಮತ್ತು ಅತಿಯಾದ ಸೂರ್ಯನ ಕಿರಣಗಳು ಸಹ ಚರ್ಮದ ಮೇಲೆ ಪರಿಣಾಮಗಳನ್ನು ಬೀರಬಹುದು.
*ಅನುವಂಶಿಕವಾಗಿ ತೆಳ್ಳಗಿನ ಕೂದಲುಗಳನ್ನು ಚರ್ಮ ಹೊಂದಿದ್ದರೆ ಅದು ಸಹ ನಮ್ಮ ತೆಳು ಹುಬ್ಬುಗಳಿಗೆ ಕಾರಣವಾಗಿರಬಹುದು.
ಹೀಗೆ ಹತ್ತು ಹಲವು ಕಾರಣಗಳನ್ನು ನಾವು ಹುಬ್ಬುಗಳ ಕುಂಟಿತ ಬೆಳವಣಿಗೆಯ ಬಗ್ಗೆ ಮಾತನಾಡಬಹುದು. ಆದರೆ ಎಲ್ಲದಕ್ಕೂ ಪರಿಹಾರ ಎನ್ನುವುದು ಒಂದಿರುತ್ತದೆ. ಆ ಪರಿಹಾರದ ಬಗ್ಗೆ ಮಾತ್ರ ಯೋಚಿಸಿ ಕ್ರಮ ಕೈಗೊಳ್ಳಬೇಕು.