ಮಂಗಳೂರು: ವಿದ್ಯಾರ್ಥಿನಿಗೆ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ವಿಡಿಯೋಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಆರೋಪಿಯನ್ನು ಉಳ್ಳಾಲ ಬಲಿಯ ಮಂಜ ನಾಡಿ ನಿವಾಸಿ ಮೊಹಮ್ಮದ್ ಶಾಕೀಬ್ ಎಂದು ಗುರುತಿಸಲಾಗಿದೆ.
ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಕೃಷ್ಣಾಪುರ ಬಳಿಯ ವಿದ್ಯಾರ್ಥಿ ನಿಗೆ ಆರೋಪಿಯು ಪದೇಪದೇ ವಾಟ್ಸ್ ಅಪ್ ಮೆಸೇಜ್ ಮಾಡಿ ಎಷ್ಟು ಬೇಕಾದರೂ ದುಡ್ಡು ಕೊಡಬಲ್ಲೆ. ಬರ್ತಿಯಾ ಎಂದು ಕಿರುಕುಳ ನೀಡುತ್ತಿದ್ದ ಅಲ್ಲದೆ ನಿರಂತರವಾಗಿ ಅಶ್ಲೀಲ ಚಿತ್ರ ಕಳುಹಿಸುತ್ತಿದ್ದ ಎನ್ನಲಾಗಿದೆ.
ಯುವಕನ ದೌರ್ಜನ್ಯದಿಂದ ವಿದ್ಯಾರ್ಥಿನಿ ಮಾನಸಿಕ ಆಘಾತ ಅನುಭವಿಸಿದ್ದಳು. ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ಆರೋಪಿಯು ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಅಲ್ಲಿಂದಲೇ ಕೃತ್ಯ ಎಸಗುತ್ತಿದ್ದ. ಆತನ ಸ್ನೇಹಿತೆಯ ಬಳಿಯಿಂದ ಆತ ವಿದ್ಯಾರ್ಥಿನಿಯ ನಂಬರ್ ಪಡೆದಿದ್ದ ಎಂದು ತಿಳಿದು ಬಂದಿದೆ. ಇದೀಗ ಯುವಕನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.