ಇಂಟರ್‌ನ್ಯಾಷನಲ್ ಡ್ರಗ್ ಮಾಫಿಯಾಗೆ ಭಾರತವನ್ನೇ ಬೇಸ್ ಮಾಡ್ಕೊಂಡಿದ್ದ ಇಂಟರೆಸ್ಟಿಂಗ್ ಆ್ಯಂಡ್ ಚಾಲೆಂಜಿಂಗ್ ಪ್ರಕರಣ ಭೇದಿಸಿರುವ ಕೊಡಗು ಪೊಲೀಸರು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ರೋಚಕ ಕಾರ್ಯಾಚರಣೆಯಲ್ಲಿ ಇಂಟರ್‌ನ್ಯಾಷನಲ್ ಡ್ರಗ್ ಮಾಫಿಯಾವನ್ನು ಕೊಡಗು ಜಿಲ್ಲಾ ಪೊಲೀಸ್ ತಂಡ ಭೇದಿಸಿದೆ.
ಥೈಲ್ಯಾಂಡ್‌ನಲ್ಲಿ ತಯಾರಾರುವ ಹೈಡ್ರೋಪೋನಿಕ್ ಗಾಂಜಾವನ್ನು ದುಬೈಗೆ ಸಪ್ಲೆ ಮಾಡೋಕೆ ಭಾರತವನ್ನೇ ಬೇಸ್ ಮಾಡ್ಕೊಂಡಿದ್ದ ಗ್ಯಾಂಗ್ ಅನ್ನು ಕೊಡಗು ಜಿಲ್ಲಾ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಥೈಲ್ಯಾಂಡ್‌ನಿಂದ ವಿಮಾನದ ಮೂಲಕವೇ ಭಾರತಕ್ಕೆ ಅಂದರೆ ಬೆಂಗಳೂರಿಗೆ ತಂದು, ಅಲ್ಲಿಂದ ಬೆಂಗಳೂರು ನಗರ, ಕೊಡಗು, ಕೇರಳದಲ್ಲಿ ಇಟ್ಟು ದುಬೈನಲ್ಲಿ ಕಸ್ಟಮರ್ ಸಿಕ್ಕಿದ್ಮೇಲೆ ಇಂಡಿಯಾದಿಂದ ದುಬೈಗೆ ವಿಮಾನದ ಮೂಲಕವೇ ಈ ಗ್ಯಾಂಗ್ ಸಪ್ಲೆ ಮಾಡುತಿತ್ತು.
ಕೇರಳ ಮೂಲದ ಮಹಮ್ಮದ್ ಅನೂಫ್ ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದಲ್ಲಿ ಕೆಫೆ ಇಟ್ಟುಕೊಂಡಿದ್ದ. ಈತ ಕೇರಳದ ಕಾಸರಗೋಡಿನ ಮೆಹರೂಫ್, ವಿರಾಜಪೇಟೆಯ ರವೂಫ್, ನಾಸೀರುದ್ದೀನ್, ವಾಜೀದ್, ನಾಪೋಕ್ಲುವಿನ ಯಾಹಿಯಾ, ಅಕನಾಸ್, ಅಜ್ಜಲ್, ಕೇರಳದ ರಿಯಾಜ್ ಇವರೊಂದಿಗೆ ತಂಡವನ್ನು ಕಟ್ಟಿಕೊಂಡು ಅಲ್ಲಿಂದ ಹೈಡೋಪೋನಿಕ್ ರೀತಿಯಲ್ಲಿ ಬೆಳೆದಿರುವ ಗಾಂಜಾವನ್ನು ವಿಮಾನದ ಮೂಲಕ ಭಾರತ ಮತ್ತು ದುಬೈಗೆ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ.
ಅದರ ಭಾಗವಾಗಿ ಯಾಹ್ಯಾ ಎಂಬಾತ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಥೈಲ್ಯಾಂಡ್‌ನಿಂದ ತಂದ ಗಾಂಜಾವನ್ನು ಈ ತಂಡ ಕೊಡಗಿಗೆ ತರುತ್ತಿದ್ದರು. ಇದೇ ವೇಳೆ ಕೇರಳದ ಮೆಹರೂಫ್‌ನ ಮುಂದಿನ ನಿರ್ದೇಶನಕ್ಕಾಗಿ ಈ ತಂಡ ಕಾಯುತ್ತಿದ್ದಾಗ ಕೊಡಗು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಂತರ ಈ ಪ್ರಕರಣದ ಕಿಂಗ್ ಪಿನ್ ಮೆಹರೂಫ್ ಥೈಲ್ಯಾಂಡ್ ದೇಶದ ಬ್ಯಾಂಕಾಕ್‌ಗೆ ಪರಾರಿಯಾಗಲು ಯತ್ನಿಸುತ್ತಿರುವಾಗ ಕೇರಳದ ಕೊಚ್ಚಿನ್ ಏರ್ ಪೋರ್ಟ್‌ನಲ್ಲಿ ಕೊಡಗು ಪೊಲೀಸರು ಬಂಧಿಸಿದ್ದಾರೆ.
ಈ ಮಾದಕ ವಸ್ತು ಥೈಲ್ಯಾಂಡ್ ಭಾರತ ಹಾಗೂ ದುಬೈ ವಿಮಾನ ನಿಲ್ದಾಣದಲ್ಲಿ ಹೇಗೆ ಪಾಸ್ ಆಗುತ್ತಿತ್ತು ಎನ್ನುವುದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸದ್ಯ ಈ ಬಗ್ಗೆ ಕೂಡ ಕೊಡಗು ಪೊಲೀಸರು ತನಿಖೆಯ ಒಂದು ಭಾಗವಾಗಿ ಮಾಡೋ ಸಾಧ್ಯತೆ ಇದೆ. ಒಟ್ಟಾರೆ ಥೈಲ್ಯಾಂಡ್‌ನಿಂದ ಮಾದಕ ವಸ್ತುವನ್ನು ದುಬೈಗೆ ತಲುಪಿಸಲು ಮಾಡ್ಕೊಂಡಿದ್ದ ಭಾರತದ ಲಿಂಕ್ ಇದೀಗ ಕಟ್ ಆಗಿದೆ. ಈ ನಿಟ್ಟಿನಲ್ಲಿ ಕೊಡಗು ಪೊಲೀಸರು ಮಾಡಿರೋ ಕಾರ್ಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಬಾಕಿ ಜಿಲ್ಲೆಯ ಪೊಲೀಸರು ಇವರನ್ನು ನೋಡಿ ಕಲಿಯಬೇಕಿದೆ.